ಬೆಂಗಳೂರು: ರಾಯಲ್ಸ್ ಚಾಲೆಂಜರ್ಸ್ ಟೀಂ ನಾಯಕ ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ ದಾಖಲೆ ನಿರ್ಮಿಸಿದ್ದಾರೆ.
ಐಪಿಎಲ್ 11 ಅವೃತ್ತಿಗಳಲ್ಲಿ ಒಂದೇ ತಂಡದ ಪರ ಆಡಿದ ಏಕೈಕ ಆಟಗಾರ ಎನ್ನುವ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.
Advertisement
2008 ರಲ್ಲಿ ಆರಂಭವಾದ ಐಪಿಎಲ್ ಲೀಗ್ ನಲ್ಲಿ ಮೊದಲ ಬಾರಿಗೆ ಬೆಂಗಳೂರು ತಂಡ ಅವರನ್ನು ಬೃಹತ್ ಮೊತ್ತವನ್ನು ನೀಡಿ ಖರೀದಿಸಿತ್ತು, ಬಳಿಕ 11 ಅವೃತ್ತಿಗಳಲ್ಲಿ ಕೊಹ್ಲಿ ತಂಡವನ್ನು ಮುನ್ನಡೆಸಿದ್ದಾರೆ.
Advertisement
Advertisement
ಐಪಿಎಲ್ ಲೀಗ್ ನಲ್ಲಿ ಗರಿಷ್ಠ ಮೊತ್ತವನ್ನು ಪಡೆಯುತ್ತಿರುವ ಕೊಹ್ಲಿ ಜನವರಿಯಲ್ಲಿ ನಡೆದ ಐಪಿಎಲ್ 11 ನೇ ಅವೃತ್ತಿಯಲ್ಲಿ 17 ಕೋಟಿ ರೂ. ನೀಡಿ ಆರ್ ಸಿಬಿ ತನ್ನಲ್ಲೇ ಉಳಿಸಿಕೊಂಡಿತ್ತು.
Advertisement
ಐಪಿಎಲ್ ಅವೃತ್ತಿಯಲ್ಲಿ ಒಟ್ಟಾರೆ 149 ಪಂದ್ಯಗಳನ್ನು ಆಡಿರುವ ಕೊಹ್ಲಿ, 129.82 ಸ್ಟ್ರೈಕ್ ರೇಟ್‍ನಲ್ಲಿ 4,418 ರನ್ ಗಳಿಸಿದ್ದಾರೆ. ಅಲ್ಲದೇ 4 ಶತಕ ಹಾಗೂ 30 ಅರ್ಧ ಶತಕಗಳು ಸಿಡಿಸಿದ್ದಾರೆ. ಆದರೆ ಇದುವರೆಗೆ ನಡೆದಿರುವ 10 ಆವೃತ್ತಿಗಳಲ್ಲಿ ಒಂದು ಬಾರಿಯೂ ಚಾಂಪಿಯನ್ ಆಗಿಲ್ಲ, 11 ನೇ ಆವೃತ್ತಿ ಆಡಲು ಸಿದ್ಧವಗಿರುವ ತಂಡ ಕಪ್ ಗೆಲ್ಲುವ ವಿಶ್ವಾಸದಲ್ಲಿದೆ.
ಕೊಹ್ಲಿ ಐಪಿಎಲ್ ಸಾಧನೆ:
ಪಂದ್ಯ -149
ರನ್ -4,412
ಸರಾಸರಿ -37.44
ಸ್ಟ್ರೈಕ್ ರೇಟ್ – 129.82
ಶತಕ – 04
ಅರ್ಧ ಶತಕ – 30
ಬೌಂಡರಿ – 382
ಸಿಕ್ಸರ್ – 160
ಕ್ಯಾಚ್ – 61
ವಿಕೆಟ್ – 4
ಬೆಸ್ಟ್ ಬೌಲಿಂಗ್ – 2/25