ನವದೆಹಲಿ: ದೇಶದಲ್ಲಿ ಸಂಘಟಿತ ವಲಯದಲ್ಲಿ 4.2 ಕೋಟಿ ಉದ್ಯೋಗಿಗಳಿದ್ದು, ಇವರಲ್ಲಿ 1.74 ಕೋಟಿ ಮಂದಿ ವೇತನ ಆಧಾರಿತ ತೆರಿಗೆ ಸಲ್ಲಿಕೆ ಮಾಡುತ್ತಿದ್ದಾರೆ. ವ್ಯಕ್ತಿಗತ/ಸಂಸ್ಥೆಯ ರೂಪದಲ್ಲಿ 5.6 ಕೋಟಿ ಸಣ್ಣ ಉದ್ದಿಮೆಗಳಿದ್ದು, ಇದರಲ್ಲಿ 1.81 ಕೋಟಿ ಮಂದಿ ತೆರಿಗೆ ಸಲ್ಲಿಕೆ ಮಾಡುತ್ತಿದ್ದಾರೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಮಾರ್ಚ್ 2014ರವರೆಗೆ 13.94 ಲಕ್ಷ ಕಂಪೆನಿಗಳು ನೋಂದಣಿಯಾಗಿದ್ದು, ಇದರಲ್ಲಿ 5.97 ಲಕ್ಷ ಕಂಪೆನಿಗಳು ತೆರಿಗೆಯನ್ನು ಪಾವತಿ ಮಾಡಿವೆ. 2.76 ಲಕ್ಷ ಕಂಪೆನಿಗಳು ನಷ್ಟ ಅಥವಾ ಶೂನ್ಯ ಆದಾಯ ತೋರಿಸಿವೆ. 2.85 ಲಕ್ಷ ಕಂಪನಿಗಳು 1 ಕೋಟಿ ರೂ.ಗಿಂತಲೂ ಕಡಿಮೆ ಆದಾಯ ತೋರಿಸಿದರೆ, 28,667 ಕಂಪೆನಿಗಳು 1 ಕೋಟಿಯಿಂದ 10 ಕೋಟಿ ರೂ. ಲಾಭ ತೋರಿಸಿವೆ. 7,781 ಕಂಪೆನಿಗಳು 10 ಕೋಟಿ ರೂ.ಗೂ ಅಧಿಕ ಲಾಭವಿದೆ ಎಂದು ತೋರಿಸಿವೆ.
Advertisement
3.7 ಕೋಟಿ ಜನ ತೆರಿಗೆ ಮಾಹಿತಿ ಸಲ್ಲಿಸಿದ್ದು, 99 ಲಕ್ಷ ಜನ 2.50 ಲಕ್ಷ ರೂ.ಗಿಂತ ಕಡಿಮೆ ಆದಾಯ ತೋರಿಸಿದ್ದಾರೆ. 1.95 ಕೋಟಿ ಮಂದಿ 2.50 ಲಕ್ಷ ರೂ. – 5 ಲಕ್ಷ ರೂ ಆದಾಯ ತೋರಿಸಿದರೆ, 52 ಲಕ್ಷ ಮಂದಿ 5 ಲಕ್ಷ – 10 ಲಕ್ಷ ರೂ. ಆದಾಯ ತೋರಿಸಿದ್ದಾರೆ. 24 ಲಕ್ಷ ಮಂದಿ ತಮ್ಮ ಬಳಿ 10 ಲಕ್ಷ ರೂ.ಗಿಂತ ಅಧಿಕ ಆದಾಯವಿದೆ ಎಂದು ಪ್ರಕಟಿಸಿದ್ದಾರೆ.
Advertisement
76 ಲಕ್ಷ ಮಂದಿ 5 ಲಕ್ಷ ಆದಾಯ ತೋರಿಸಿದ್ದು, ಇವರಲ್ಲಿ 56 ಲಕ್ಷ ವೇತನದಾರರು ಇದ್ದಾರೆ. 1.72 ಲಕ್ಷ ಮಂದಿ 50 ಲಕ್ಷಕ್ಕಿಂತ ಹೆಚ್ಚು ಆದಾಯ ತೋರಿಸಿದ್ದಾರೆ.
Advertisement
ನ.8ರಿಂದ ಡಿ.30ರವರೆಗೆ 1.09 ಕೋಟಿ ಖಾತೆಗಳಲ್ಲಿ 2 ಲಕ್ಷದಿಂದ 80 ಲಕ್ಷ ರೂ.ವರೆಗೆ ಜಮೆಯಾಗಿದೆ. ಈ ಖಾತೆಗಳಲ್ಲಿ ಸರಾಸರಿ ಜಮೆ 5.03 ಲಕ್ಷ ರೂಪಾಯಿ ಆಗಿದೆ. 1.48 ಲಕ್ಷ ಖಾತೆಗಳಲ್ಲಿ ತಲಾ 80 ಲಕ್ಷ ರೂ.ಗಿಂತ ಅಧಿಕ ಮೊತ್ತ ಜಮೆಯಾಗಿದ್ದು, ಈ ಖಾತೆಗಳಲ್ಲಿ ಸರಾಸರಿ ಜಮೆ 3.31 ಕೋಟಿ ರೂ. ಆಗಿದೆ. ಕಳೆದ 5 ವರ್ಷಗಳಲ್ಲಿ 1.25 ಕೋಟಿ ಕಾರು ಮಾರಾಟವಾಗಿದೆ ಎನ್ನುವ ಅಂಶ ಬಜೆಟ್‍ನಲ್ಲಿದೆ.