ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಆನ್ ಲೈನ್ ವಂಚನೆ ಮೀತಿ ಮೀರಿ ಹೋಗಿದೆ. ಪ್ರತಿನಿತ್ಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ನೂರಾರು ದೂರುಗಳು ದಾಖಲಾಗುತ್ತಿವೆ.
ಆನ್ ಲೈನ್ ವಂಚಕರ ವಿರುದ್ಧ ಈ ವರ್ಷದಲ್ಲೇ 3000 ಸಾವಿರ ಕೇಸ್ ಗಳು ದಾಖಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದ್ರೆ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗಿರುವ ಬಗ್ಗೆ ಅಂಕಿ ಅಂಶಗಳಿಂದ ಬೆಳಕಿಗೆ ಬಂದಿದೆ. ಇದರಲ್ಲಿ 2000 ಸಾವಿರಕ್ಕೂ ಅಧಿಕ ಎಫ್‍ಐಆರ್ ಮಾಡಿರೋ ಸೈಬರ್ ಕ್ರೈಂ ಪೊಲೀಸರು ಕೇವಲ 154 ಕೇಸ್ ಗಳನ್ನು ಟ್ರೇಸ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
Advertisement
ಆನ್ ಲೈನ್ ವಂಚನೆ ಮಾಡುತ್ತಿರೋರು ವಿದೇಶಿ ಪ್ರಜೆಗಳು ಎಂಬ ಸ್ಫೋಟಕ ಸತ್ಯವನ್ನು ಪೊಲೀಸರೇ ಒಪ್ಪಿಕೊಂಡಿದ್ದಾರೆ. ಮೊದಲು ಫೇಸ್ ಬುಕ್, ವಾಟ್ಸಪ್, ಇ ಮೇಲ್ ಮುಖಾಂತರ ಪರಿಚಯ ಮಾಡ್ಕೊಳ್ಳೋ ಆಫ್ರಿಕನ್ ಅಥವಾ ನೈಜೀರಿಯಾ ಯುವತಿಯರು ಅಮಾಯಕರನ್ನೇ ಟಾರ್ಗೆಟ್ ಮಾಡ್ತಿದ್ದಾರೆ. ನಯವಾಗಿ ಮಾತನಾಡಿ ಬುಟ್ಟಿಗೆ ಹಾಕ್ಕೊಳ್ಳುತ್ತಿದ್ದಾರಂತೆ.
Advertisement
ಆನ್ ಲೈನ್ ಖದೀಮರು ಕಸ್ಟಮ್ಸ್ ಅಧಿಕಾರಿಗಳು, ಆರ್‍ಬಿಐ ಆಫೀಸರ್ಸ್, ಬ್ಯಾಂಕ್ ಅಧಿಕಾರಿ, ನಿಮ್ಮ ಖಾತೆಗೆ ಆಧಾರ್ ಲಿಂಕ್ ಮಾಡಬೇಕು ಅಂತೆಲ್ಲಾ ಹೇಳಿ ಅಮಾಯಕರಿಗೆ ವಂಚಿಸುತ್ತಿದ್ದಾರೆ. ಇತ್ತೀಚೆಗೆ ಪತಂಜಲಿ ವೆಬ್ ಸೈಟ್ ನಕಲಿ ಮಾಡಿ ವ್ಯಾಪಾರಿಗೆ ವಂಚಿಸಿದ್ರು. ಅದೇ ರೀತಿ ಕೆಲಸ ಕೊಡಿಸುವುದು, ಲೋನ್ ಕೊಡಿಸುವುದು, ಬ್ಯುಸಿನೆಸ್ ಹೆಸರಲ್ಲಿ ಅಮಾಯಕರಿಂದ ಎಟಿಎಂ, ಡೆಬಿಟ್, ಕ್ರೆಡಿಟ್ ಕಾರ್ಡ್ ನಂಬರ್ ಓಟಿಪಿ ಪಡೆದು ಅಕೌಂಟ್ ಗಳಿಂದ ಹಣ ಎಗರಿಸುತ್ತಿದ್ದಾರೆ.
Advertisement
ಹೀಗಾಗಿ ಇದೀಗ ಸೈಬರ್ ಕ್ರೈಂ ಪೊಲೀಸರಿಗೆ ಆನ್ ಲೈನ್ ವಂಚನೆ ಭಾರೀ ತಲೆನೋವಾಗಿ ಪರಿಣಮಿಸಿದೆ. ಒಟ್ಟಿನಲ್ಲಿ ಸಿಲಿಕಾನ್ ಸಿಟಿ, ಐಟಿ ಬಿಟಿ ಸಿಟಿ ಎಂದೆಲ್ಲಾ ಖ್ಯಾತಿಗಳಿಸಿರೋ ಬೆಂಗಳೂರು ಇತ್ತೀಚಿನ ದಿನಗಳಲ್ಲಿ ಕ್ರೈಂ ಸಿಟಿಯಾಗಿ ಮಾರ್ಪಾಡಾಗುತ್ತಿದೆ. ಇದಕ್ಕೆಲ್ಲಾ ಸೈಬರ್ ಕ್ರೈಂ ಪೊಲೀಸರು ಕಡಿವಾಣ ಹಾಕಬೇಕಿದೆ. ಹಾಗೇ ಆನ್ ಲೈನ್ ವಂಚಕರ ಬಗ್ಗೆ ಸಾರ್ವಜನಿಕರು ಕೂಡ ಎಚ್ಚೆತ್ತುಕೊಂಡು ತಾವು ವಂಚನೆಗೊಳಗಾಗೋ ಮುನ್ನವೇ ಎಚ್ಚೆತ್ತುಕೊಳ್ಳೋದು ಒಳ್ಳೆಯದು.