ನವದೆಹಲಿ: ನಾನು ಪ್ರಧಾನಮಂತ್ರಿಗಳ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೇನೆ, ನರೇಂದ್ರ ಮೋದಿ ಅವರ ಖಾಸಗಿ ಕಾರ್ಯದರ್ಶಿ ಎಂದು ಹೇಳಿಕೊಂಡು ಜನರ ವಂಚನೆಗೆ ಇಳಿದಿರುವ ಅನಾಮಧೇಯ ವ್ಯಕ್ತಿಯ ವಿರುದ್ಧ ದೆಹಲಿಯ ಸೈಬರ್ ಸೆಲ್ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಈ ಬಗ್ಗೆ ತನಿಖೆ ಆರಂಭಿಸಿರುವ ದೆಹಲಿ ಪೊಲೀಸರು ಅನಾಮಧೇಯ ವ್ಯಕ್ತಿಯ ಹುಡುಕಾಟದಲ್ಲಿದ್ದಾರೆ.
Advertisement
ಪ್ರಧಾನಮಂತ್ರಿಗಳಿಗಾಗಿ ವಿಶೇಷ ಟೇಬಲ್‍ನ ಅವಶ್ಯಕತೆ ಇದೆ. ಪ್ರಧಾನಮಂತ್ರಿಗಳ ಶಾಶ್ವತ ಬಳಕೆಗೆ ಒಂದು ವಿಶೇಷ ಟೇಬಲ್ ಮಾಡಿಕೊಡುವಂತೆ ಕುನಾಲ್ ಎಂಬುವರಿಗೆ ಇಮೇಲ್ ಬಂದಿದೆ. ವಿವೇಕ್ ಕುಮಾರ್ ಎಂಬುವರಿಂದ ಈ ಇಮೇಲ್ ಬಂದಿದ್ದು ಇದರಲ್ಲಿ ತಾವು ವಿಶೇಷ ಖಾಸಗಿ ಕಾರ್ಯದರ್ಶಿ ಎಂದು ಪರಿಚಯಿಸಿಕೊಂಡಿದ್ದಾರೆ. ಅಲ್ಲದೇ ಈ ಬಗ್ಗೆ ಚರ್ಚಿಸುವಂತೆ ಮೂಬೈಲ್ ನಂಬರ್‍ವೊಂದನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮದ್ಯ ಸೇವಿಸಿ ಗುರುದ್ವಾರ ಪ್ರವೇಶಿಸಿದ ಆರೋಪ- ಪಂಜಾಬ್ ಸಿಎಂ ವಿರುದ್ಧ ದೂರು
Advertisement
We have received a complaint regarding forgery, impersonation and identity fraud of an office bearer at the Prime Minister’s Office. Matter is under investigation.@PMOIndia @HMOIndia pic.twitter.com/1r1mhPCvoX
— CP Delhi #DilKiPolice (@CPDelhi) April 15, 2022
Advertisement
ಇಮೇಲ್ ಸ್ವೀಕರಿಸುತ್ತಿದ್ದಂತೆ ಕುನಾಲ್, ಇಮೇಲ್ ಸ್ಕ್ರೀನ್ ಶಾರ್ಟ್ ಸಮೇತ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಮಾಹಿತಿಯನ್ನು ಆಧರಿಸಿ ದೆಹಲಿ ಸೈಬರ್ ಸೆಲ್ ಪೊಲೀಸರು ದೂರು ದಾಖಲಿಸಿಕೊಂಡಿದ್ದು ವ್ಯಾಪಾರಿಯನ್ನು ಸಂಪರ್ಕ ಮಾಡಿದ್ದಾರೆ. ಘಟನೆಯ ಮಾಹಿತಿ ಪಡೆದುಕೊಳ್ಳುತ್ತಿದ್ದು ಇಮೇಲ್ ಮಾಡಿದ ವ್ಯಕ್ತಿಯ ಹುಡುಕಾಟದಲ್ಲಿದ್ದಾರೆ. ಇದನ್ನೂ ಓದಿ: ಪಂಚರಾಜ್ಯಗಳ ಚುನಾವಣೆ ಸೋಲಿನ ಬಳಿಕ ಎಚ್ಚೆತ್ತ ಕಾಂಗ್ರೆಸ್ – ಗುಜರಾತ್ ಎಲೆಕ್ಷನ್ ಮೇಲೆ ಕಣ್ಣು
Advertisement
ಘಟನೆಯ ಬಗ್ಗೆ ದೆಹಲಿ ಪೊಲೀಸ್ ಕಮಿಷನ್ ರಾಜೇಶ್ ಅಸ್ತಾನ್ ತಮ್ಮ ಟ್ವಿಟ್ಟರ್‍ನಲ್ಲಿ ಮಾಹಿತಿ ಹಂಚಿಕೊಂಡಿದ್ದು ಪ್ರಧಾನಮಂತ್ರಿ ಹಾಗೂ ಗೃಹ ಇಲಾಖೆಗೆ ಟ್ಯಾಗ್ ಮಾಡಿದ್ದು ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ತನಿಖೆ ಆರಂಭಗೊಂಡಿದ್ದು ಅನಾಮಧೇಯ ವ್ಯಕ್ತಿಯ ಹುಡುಕಾಟದಲ್ಲಿ ಪೊಲೀಸರು ಬ್ಯುಸಿಯಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಪ್ರಧಾನಿ ಹತ್ಯೆ ಮಾಡುವುದಾಗಿ ಎನ್‍ಐಎ ಅಧಿಕಾರಿಗಳಿಗೆ ಇಮೇಲ್ ಒಂದು ರವಾನೆಯಾಗಿತ್ತು.