ನವದೆಹಲಿ: ಸ್ವಿಗ್ಗಿಯಲ್ಲಿ ಊಟ ಸರಿಯಾಗಿ ಸಮಯಕ್ಕೆ ಬರಲಿಲ್ಲ ಎಂದರೆ ಕಂಪನಿಗೆ ಕರೆ ಮಾಡಿ ಅಥವಾ ಸಾಮಾಜಿಕ ಜಾಲತಾಣದಲ್ಲಿ ದೂರುವುದನ್ನು ನಾವು ನೋಡಿದ್ದೆವೆ. ಆದರೆ ಬೆಂಗಾಳಿ ಸಿನಿಮಾ ಸೂಪರ್ ಸ್ಟಾರ್ ಪ್ರಸೂನ್‌ಜಿತ್ ಚಟರ್ಜಿ , ಸ್ವಿಗ್ಗಿ ವಿರುದ್ಧ ಪ್ರಧಾನಿ ಮೋದಿ ಹಾಗೂ ಬಂಗಾಳ ಮುಖ್ಯಮಂತ್ರಿ ಮಮತಾಗೆ ಬಹಿರಂಗ ಪತ್ರ ಬರೆದಿದ್ದಾರೆ.
Advertisement
ತಾವು ಆರ್ಡರ್ ಮಾಡಿದ ಆಹಾರವನ್ನು ಸ್ವಿಗ್ಗಿ ತಂದುಕೊಡಲಿಲ್ಲ. ಇದರ ಕುರಿತಾಗಿ ಗಮನ ಹರಿಸಬೇಕು ಎಂದು ಒತ್ತಾಯಿಸಿ ಟ್ವೀಟ್ ಮಾಡಿದ್ದಾರೆ. ಮೋದಿ ಹಾಗೂ ಮಮತಾ ಅವರಿಗೆ ಬರೆದಿರುವ ಪತ್ರ ಇದಾಗಿದೆ.
Advertisement
ಪತ್ರದಲ್ಲಿ ಏನಿದೆ?:
ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಹಬ್ಬದ ಶುಭಾಶಯಗಳು. ನೀವು ಚೆನ್ನಾಗಿರುತ್ತೀರಿ ಎಂದು ಭಾವಿಸುತ್ತೇವೆ. ನಾನು ಇತ್ತೀಚೆಗೆ ಎದುರಿಸಿದ ಸಮಸ್ಯೆಯನ್ನು ನಿಮ್ಮ ಗಮನಕ್ಕೆ ತರುತ್ತೇನೆ. ನವೆಂಬರ್ 3 ರಂದು ನಾನು ಆಹಾರ ವಿತರಣಾ ಅಪ್ಲಿಕೇಶನ್ ಆಗಿರುವ ಸ್ವಿಗ್ಗಿಯಲ್ಲಿ ಊಟ ಆರ್ಡರ್ ಮಾಡಿದ್ದೆ. ಆದರೆ ನಾನು ಆಹಾರವನ್ನು ಸ್ವೀಕರಿಸಲಿಲ್ಲ. ಸ್ವಿಗ್ಗಿ ಅವರಿಗೆ ನಾನು ಆಗಿರುವ ಸಮಸ್ಯೆಯನ್ನು ಹೇಳಿಕೊಂಡೆ. ಅವರು ಆರ್ಡರ್ ಪ್ರಿಪೇಯ್ಡ್ ಆಗಿರುವುದರಿಂದ ಅವರು ನನಗೆ ಹಣವನ್ನು ಹಿಂದಿರುಗಿಸಿದ್ದಾರೆ. ಇದನ್ನೂ ಓದಿ: ಸೋನಂ, ರಿಯಾ ಫೋಟೋ ಹಾಕಿ ಮಿಸ್ ಮಾಡ್ಕೊಳ್ತಿದ್ದೀನಿ ಅಂದ್ರು ಅನಿಲ್ ಕಪೂರ್
Advertisement
Respected PM @narendramodi and Respected CM @MamataOfficial, your kind attention please. pic.twitter.com/fry7F6wYl7
— Prosenjit Chatterjee (@prosenjitbumba) November 6, 2021
Advertisement
ಆದರೆ ಮುಂದೆ ಯಾರಾದರೂ ಈ ಸಮಸ್ಯೆಯನ್ನು ಎದುರಿಸಬಹುದು ಎಂದು ನಾನು ಭಾವಿಸುತ್ತೇನೆ. ಹೀಗಾಗಿ ಈ ವಿಚಾರವನ್ನು ನಿಮ್ಮ ಗಮನಕ್ಕೆ ತರುತ್ತಿದ್ದೆನೆ. ಯಾರಾದರೂ ತಮ್ಮ ರಾತ್ರಿಯ ಊಟಕ್ಕೆ ಈ ಫುಡ್ ಅಪ್ಲಿಕೇಶನ್‍ಗಳನ್ನು ಅವಲಂಬಿಸಿದ್ದರೆ ಏನು? ಅವರು ಹಸಿವಿನಿಂದ ಇರುತ್ತಾರೆಯೇ? ಅಂತಹ ಅನೇಕ ಸಂದರ್ಭಗಳು ಇರಬಹುದು. ಹೀಗೆ ಈ ಸಮಸ್ಯೆ ಕುರಿತಾಗಿ ಮಾತನಾಡುವುದು ಅಗತ್ಯ ಎಂದು ನನಗೆ ಅನಿಸಿತು ಎಂದು ಬರೆದುಕೊಂಡು ಮೋದಿ ಮತ್ತು ಮಮತಾ ಅವರು ಇದರ ಕುರಿತಾಗಿ ಗಮನ ಹರಿಸಬೇಕು ಎಂದು ಒತ್ತಾಯಿಸಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಭೋಜನಪ್ರಿಯ ಅಪ್ಪುಗೆ ಯಾವ ಯಾವ ಫುಡ್ ಇಷ್ಟ? ಯಾವೆಲ್ಲ ಹೋಟೆಲ್‍ಗೆ ಹೋಗ್ತಿದ್ರು?