ಶಿವಮೊಗ್ಗ: ಆನಲೈನ್ ತರಗತಿಗಳಿಗಾಗಿ ಮಕ್ಕಳಿಗೆ ಮೊಬೈಲ್ (Mobile) ನೀಡುವುದರಿಂದ ಅವರಲ್ಲಿ ಖಿನ್ನತೆ ಉಂಟಾಗಿ, ಆನ್‌ಲೈನ್ ಶಿಕ್ಷಣವೆನ್ನುವುದು (Online Education) ವಿದ್ಯಾರ್ಥಿಗಳಿಗೆ ಶಿಕ್ಷೆಯಾಗಿ ಪರಿಣಮಿಸುತ್ತಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಆತಂಕಪಟ್ಟಿದ್ದಾರೆ.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯತ್ (Zilla Panchayat), ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ (Health And Family Wellfare Department) ಇಲಾಖೆ ಸಂಯುಕ್ತಾಶ್ರಯದಲ್ಲಿ ಸಿಮ್ಸ್ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ್ದಾರೆ. ಇದನ್ನೂ ಓದಿ: ಅಮೆರಿಕ, ಭಾರತ, ಇಂಡೊ-ಪೆಸಿಫಿಕ್ ಪ್ರದೇಶಗಳಲ್ಲಿ ವಾಣಿಜ್ಯ ಬಾಹ್ಯಾಕಾಶ ಅವಕಾಶಗಳಿಗೆ ವೇದಿಕೆ ಕಲ್ಪಿಸಿದ ಸ್ಪೇಸ್ ಕಾನ್ಕ್ಲೇವ್
ಕೋವಿಡ್ (Covid) ಬಂದ ನಂತರ ಮಾನಸಿಕ ಕಾಯಿಲೆಗಳ ಪ್ರಮಾಣ ಹೆಚ್ಚಾಗಿದ್ದು, ಆನ್‌ಲೈನ್ ತರಗತಿಗಳಿಗಾಗಿ ಮಕ್ಕಳಿಗೆ ಮೊಬೈಲ್ ನೀಡುವುದರಿಂದ ಅವರಲ್ಲಿ ಖಿನ್ನತೆಯುಂಟಾಗಿದೆ. ಶಿಕ್ಷಣ ಅನ್ನೋದು ವಿದ್ಯಾರ್ಥಿಗಳಿಗೆ ಶಿಕ್ಷೆಯಾಗಿ ಪರಿಣಮಿಸುತ್ತಿದೆ. ಆದ್ದರಿಂದ ಪೋಷಕರು ಮಕ್ಕಳ ಮೇಲೆ ಹೆಚ್ಚಿನ ನಿಗಾವಹಿಸಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ಸಾರ್ವಜನಿಕ ಆಸ್ಪತ್ರೆಯಲ್ಲಿ 200 ಕೊಳೆತ ಶವ ಪತ್ತೆ
ಔಷಧವೆಂದರೆ (Medicines) ಕೇವಲ ಮಾತ್ರೆ ಮತ್ತು ಇಂಜೆಕ್ಷನ್‌ಗಳು ಮಾತ್ರವಲ್ಲ. ಶಿಸ್ತುಬದ್ಧ ಜೀವನಕ್ರಮ, ಉತ್ತಮವಾದ ನಡಿಗೆ, ವ್ಯಾಯಾಮ, ಸೂಕ್ತವಾದ ನಿದ್ರೆ ಮತ್ತು ಆಹಾರಗಳು ಕೂಡ ಔಷಧ. ಗರ್ಭಿಣಿಯರಿಗೆ (Pragnant) ಒತ್ತಡ ಹೆಚ್ಚಾದರೆ ಅದರ ಪರಿಣಾಮ ಮಕ್ಕಳ ಮೇಲೆ ಬೀಳುತ್ತದೆ. ಆದ್ದರಿಂದ ಮಾನಸಿಕ ಸಂತೋಷ ನೀಡುವಂತ ಪೂರಕ ವಾತವರಣ ಅವರಿಗೆ ನಿರ್ಮಿಸಿಕೊಡಬೇಕು ಎಂದು ಸಲಹೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜಣ್ಣ ಸಂಕಣ್ಣನವರ್, ಸಿಮ್ಸ್ ಪ್ರಾಂಶುಪಾಲರಾದ ಡಾ.ಮಂಜುನಾಥ್ ಎಂ.ಎಲ್, ಡಿಎಚ್‌ಒ ಡಾ.ರಾಜೇಶ್ ಸುರಗಿಹಳ್ಳಿ, ವೈದ್ಯಕೀಯ ಅಧೀಕ್ಷಕ ಡಾ.ಎಸ್‌ಶ್ರೀಧರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿದ್ದನಗೌಡ ಪಾಟೀಲ್, ಮನೋವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಡಾ.ಕೆ.ಎಸ್ ರಾಮ್ ಪ್ರಸಾದ್, ಮನೋವೈದ್ಯ ಡಾ.ಎಂ.ಎನ್ ಸಂತೋಷ್ ಉಪಸ್ಥಿತರಿದ್ದರು.