ಬೆಂಗಳೂರು: ಸ್ಯಾನಿಟರಿ ನ್ಯಾಪ್‍ಕಿನ್ ಮೇಲೆ 12% ಜಿಎಸ್‍ಟಿ ತೆರಿಗೆ ಹೇರಿರುವ ಹಿನ್ನೆಲೆಯಲ್ಲಿ ಮೋದಿ ಸರ್ಕಾರದ ವಿರುದ್ಧ ಮಹಿಳೆಯರು ತಿರುಗಿಬಿದ್ದಿದ್ದಾರೆ.
ಜಿಎಸ್‍ಟಿ ವಿಚಾರದಲ್ಲಿ ಹೆಣ್ಣು ಮಕ್ಕಳಿಗೆ ಅನ್ಯಾಯವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಶುರುವಾಗಿದೆ. ಜಿಎಸ್‍ಟಿ ಅಡಿ ಕುಂಕುಮ ಹಾಗೂ ಬಳೆಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದ್ದು, ಚಿನ್ನಕ್ಕೆ ಶೇ. 3ರಷ್ಟು ತೆರಿಗೆ ಇದೆ. ಆದ್ರೆ ಸ್ಯಾನಿಟರಿ ನ್ಯಾಪ್‍ಕಿನ್ಸ್‍ಗೆ 12% ತೆರಿಗೆ ಇದೆ. ಹೀಗಾಗಿ ‘ಡೋಂಟ್ ಟ್ಯಾಕ್ಸ್ ಆನ್ ಮೈ ಪೀರಿಯಡ್’ ಹೆಸರಿನಲ್ಲಿ ಅಭಿಯಾನ ಶುರುವಾಗಿದೆ.
Advertisement
ಲೈಂಗಿಕ ಕ್ರಿಯೆ ಆಯ್ಕೆ. ಆದ್ರೆ ಋತುಸ್ರಾವ ಆಯ್ಕೆಯಲ್ಲ. ಕಾಂಡೋಮ್ ಟ್ಯಾಕ್ಸ್ ಫ್ರೀ ಆದ್ರೆ ನ್ಯಾಪ್‍ಕಿನ್‍ಗೆ ಯಾಕೆ ಟ್ಯಾಕ್ಸ್? ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
Advertisement
ಸ್ಯಾನಿಟರಿ ನ್ಯಾಪ್‍ಕಿನ್ಸ್ ಮೇಲೆ 12% ಜಿಎಸ್‍ಟಿಗೆ ಪ್ರಸೂತಿ ತಜ್ಞೆ ಪದ್ಮಿನಿ ಪ್ರಸಾದ್ ವಿರೋಧ ವ್ಯಕ್ತಪಡಿಸಿದ್ದಾರೆ. ಈಗಲೂ ನಮ್ಮ ಹಳ್ಳಿಗಳಲ್ಲಿ ಸಾಕಷ್ಟು ಹೆಣ್ಣುಮಕ್ಕಳು ನ್ಯಾಪ್‍ಕಿನ್ ಕೊಳ್ಳದ ಪರಿಸ್ಥಿತಿಯಲ್ಲಿ ಇದ್ದಾರೆ. ಈಗಲೂ ಬಟ್ಟೆಗಳನ್ನು ಬಳಸುತ್ತಾರೆ. ಇದ್ರಿಂದ ಗುಪ್ತಾಂಗ ರೋಗಗಳು ಕಾಣಿಸಿಕೊಳ್ಳುತ್ತೆ. ಹೆಣ್ಣುಮಕ್ಕಳು ಇದರ ಬಗ್ಗೆ ಮಾತಾಡೋದೆ ಕಡಿಮೆ. ಹೀಗಿರುವಾಗ 12% ಜಿಎಸ್‍ಟಿ ಹಾಕಿರೋದು ಸರಿಯಲ್ಲ. ಟ್ಯಾಕ್ಸ್ ಫ್ರೀ ನ್ಯಾಪ್‍ಕಿನ್ ಮಾಡಬೇಕು ಅಂತ ನಡೆಯುತ್ತಿರುವ ಹೋರಾಟವನ್ನು ನಾನು ಬೆಂಬಲಿಸ್ತೀನಿ ಎಂದಿದ್ದಾರೆ.
Advertisement
Sanitary napkins are not luxury, they are necessity.
Make Sanitary Napkins Tax-free! @arunjaitley @SheSaysIndia #LahuKaLagaan pic.twitter.com/iIIpMiKnT1
— Girliyapa (@Girliyapa) April 18, 2017
https://twitter.com/mojorojo/status/854298421376757760?ref_src=twsrc%5Etfw&ref_url=http%3A%2F%2Fwww.ndtv.com%2Foffbeat%2Fcelebrities-tweet-arun-jaitley-want-sanitary-napkins-to-be-tax-free-1683733