ಬೆಂಗಳೂರು: ಎಪಿಎಂಸಿಗೆ ಮೂಟೆಗಟ್ಟಲೇ ಈರುಳ್ಳಿಯನ್ನು ಹಿಡಿದುಕೊಂಡು ಬರುತ್ತಿದ್ದ ರೈತ ಅಲ್ಲೆಲ್ಲೂ ಲೋಡ್ ಮಾಡಿ ಹಾಯಾಗಿ ಕಾಫೀ, ಟೀ ಎಂದು ಹೋಗುತ್ತಿದ್ದರು. ಆದರೆ ಈಗ ರೈತ ತಾನು ತಂದಿರುವ ಈರುಳ್ಳಿ ಮೂಟೆಯನ್ನು ಬಿಟ್ಟು ಕದಲುತ್ತಿಲ್ಲ. ಹೆಚ್ಚು ಮೂಟೆಗಳನ್ನು ತಂದ್ರೆ ಜೊತೆಯಲ್ಲಿ ನಾಲ್ಕು ಜನರನ್ನು ಕರೆದುಕೊಂಡು ಬರುತ್ತಿದ್ದಾರೆ. ಇದನ್ನೂ ಓದಿ: ಜಮೀನಿನಲ್ಲಿ ಬೆಳೆದಿದ್ದ ಸುಮಾರು 40 ಮೂಟೆಯಷ್ಟು ಈರುಳ್ಳಿ ರಾತ್ರೋರಾತ್ರಿ ಕಳ್ಳತನ
ಜಮೀನಿನಲ್ಲಿದ್ದ ಈರುಳ್ಳಿ ಬೆಳೆಯನ್ನು ಕಳ್ಳರು ಕದ್ದಿದ್ದರು. ಚಿನ್ನದ ಬೆಲೆಯಾಗಿರುವ ಈರುಳ್ಳಿಗೆ ರೈತರು ಫುಲ್ ಭದ್ರತೆಯನ್ನ ನೀಡಿ ಕಾಪಾಡಿಕೊಳ್ಳುತ್ತಿದ್ದರು. ಒಂದು ಕ್ಷಣ ಮೈಮರೆತರೂ ಈರುಳ್ಳಿ ಕಳ್ಳತನವಾಗುವ ಸಾಧ್ಯತೆಗಳಿವೆ. ಹಾಗಾಗಿ ಒಂದು ಕೆಜಿ ಹೋದರು ನಮಗೆ ನಷ್ಟ ಎಂದು ಅರಿತಿರುವ ರೈತರು ಈರುಳ್ಳಿಗೆ ವಿಶೇಷ ಭದ್ರತೆಯನ್ನು ನೀಡಿದ್ದಾರೆ. ಇದನ್ನೂ ಓದಿ: ಈರುಳ್ಳಿ ತುಂಬಿದ್ದ ಲಾರಿಯೇ ಮಾಯ – ಬರೋಬ್ಬರಿ 20 ಲಕ್ಷ ರೂ. ಈರುಳ್ಳಿ ಲೂಟಿ
Advertisement
Advertisement
ಈರುಳ್ಳಿ ಕಳ್ಳತನ ಪ್ರಕರಣ ಹೆಚ್ಚಾಗಿದ್ದರಿಂದ ರೈತರಿಗೆ ಪೊಲೀಸರು ನಿಮ್ಮ ಈರುಳ್ಳಿ ಕಳ್ಳತನವಾದ್ರೆ ನೀವೇ ಜವಾಬ್ದಾರರು. ನಮ್ಮ ಹತ್ತಿರ ಬರಬೇಡಿ ಎಂದು ಮೌಖಿಕವಾಗಿ ಪೊಲೀಸರು ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಹರಾಜು ಪ್ರಕ್ರಿಯೆ ಮುಗಿದು, ಈರುಳ್ಳಿ ದುಡ್ಡು ಕೈಗೆ ಬರುವ ತನಕವೂ ರೈತರು ಮೈಯೆಲ್ಲ ಕಣ್ಣಾಗಿ ತಮ್ಮ ಉತ್ಪನ್ನಕ್ಕೆ ಟೈಟ್ ಸೆಕ್ಯೂರಿಟಿಯನ್ನು ನೀಡುತ್ತಿದ್ದಾರೆ. ಇದನ್ನೂ ಓದಿ: ಖದೀಮರ ಈರುಳ್ಳಿ ಮೋಹ- ಪೆಟ್ಟಿಗೆ ತುಂಬಾ ಹಣವಿದ್ದರೂ ಕದ್ದಿದ್ದು ಈರುಳ್ಳಿ ಮಾತ್ರ