ದೆಹಲಿ, ಮುಂಬೈನಲ್ಲಿ ಈರುಳ್ಳಿ ದರ ಕೆ.ಜಿ. 80 ರೂ.ಗೆ ಏರಿಕೆ – 5 ವರ್ಷಗಳಲ್ಲೇ ಗರಿಷ್ಠ

Public TV
1 Min Read
ONION

ನವದೆಹಲಿ: ಕಳೆದ ಕೆಲವು ದಿನಗಳಿಂದ ದೆಹಲಿ, ಮುಂಬೈ (Delhi, Mumbai) ಸೇರಿ ಪ್ರಮುಖ ನಗರಗಳಲ್ಲಿ ಈರುಳ್ಳಿ ಬೆಲೆ ಗಣನೀಯವಾಗಿ ಗಗನಕ್ಕೇರುತ್ತಿದ್ದು, ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. 40 ರಿಂದ 50 ರೂ.ನಷ್ಟಿದ್ದ ಈರುಳ್ಳಿ ಬೆಲೆ (Onion Price) ಸಗಟು ಮಾರುಕಟ್ಟೆಯಲ್ಲಿ 70 ರಿಂದ 80 ರೂ.ಗಳಿಗೆ ಏರಿಕೆಯಾಗಿದೆ.

ಈರುಳ್ಳಿ ಬೆಲೆ ಏರಿಕೆ ಕಂಡಿರುವುದು ರೈತರ (Farmers) ಮೊಗದಲ್ಲಿ ಸಂಸತ ತಂದರೆ, ಮತ್ತೊಂದೆಡೆ ಜನರಿಗೆ ಕಣ್ಣೀರು ತರಿಸುವಂತಾಗಿದೆ. ದೆಹಲಿ ಮತ್ತು ಮುಂಬೈನಂತಹ ಮೆಟ್ರೋ ನಗರಗಳಲ್ಲಿ (Metro Cities), ಪ್ರತಿ ಕೆಜಿ ಈರುಳ್ಳಿ ಬೆಲೆ ನವೆಂಬರ್‌ನಲ್ಲಿ 80 ರೂ.ಗಳಿಗೆ ತಲುಪಿದ್ದು, ಇದು ಕಳೆದ 5 ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿದಂತಾಗಿದೆ. ಇದನ್ನೂ ಓದಿ: Manipur | ಭದ್ರತಾ ಪಡೆಗಳೊಂದಿಗೆ ಭಾರಿ ಗುಂಡಿನ ಚಕಮಕಿ – 11 ಶಂಕಿತ ಕುಕಿ ಬಂಡುಕೋರರು ಬಲಿ!

Onion

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮಾರಾಟಗಾರರೊಬ್ಬರು, ʻಈರುಳ್ಳಿ ಬೆಲೆ ಪ್ರತಿ ಕೆಜಿಗೆ 60 ರಿಂದ 70, 80 ರೂ.ಗಳಿಗೆ ಏರಿಕೆಯಾಗಿದೆ. ನಾವು ಮಾರಾಟ ಮಾಡಲು ಮಂಡಿಯಿಂದ ಪಡೆಯುತ್ತಿವೆ. ಅಲ್ಲಿ ಪಡೆಯುವ ಬೆಲೆ ಹಾಗೂ ಮಾರಾಟ ಮಾಡುವ ಬೆಲೆಗಳಿಗೆ ವ್ಯತ್ಯಾಸ ಇರುತ್ತದೆ. ಸಾಮಾನ್ಯವಾಗಿ ಬೆಲೆ ಏರಿಕೆಯಾದಂತೆ ಕೊಳ್ಳುವವರ ಸಂಖ್ಯೆ ಇಳಿಕೆಯಾಗುತ್ತಿತ್ತು. ಆದ್ರೆ ಈರುಳ್ಳಿ ಅಗತ್ಯ ವಸ್ತುಗಳಲ್ಲಿ ಒಂದಾಗಿರುವುದರಿಂದ ಜನರು ಖರೀದಿಸಲೇಬೇಕಾದ ಅನಿವಾರ್ಯತೆ ಬಂದೊದಗಿದೆ ಎಂದು ತಿಳಿಸಿದ್ದಾರೆ.

nelamangala onion price 1

ಇನ್ನೂ ಗ್ರಾಹಕರೊಬ್ಬರು ಬೆಲೆ ಏರಿಕೆ ಬಗ್ಗೆ ಮಾತನಾಡಿ, ತಮ್ಮ ಸಂಕಟ ಹಂಚಿಕೊಂಡಿದ್ದಾರೆ. ಈರುಳ್ಳಿಯ ಬೆಲೆಯು ಸೀಸನ್‌ಗೆ ಅನುಗುಣವಾಗಿ ಕಡಿಮೆಯಾಗಬೇಕಿದ್ದರೂ ಏರಿಕೆಯಾಗಿದೆ. ಆದ್ರೆ ಇಂದು ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕೆಜಿಗೆ 80 ರೂ. ಆಗಿದೆ. ಇದು ಮನೆಯ ಆರ್ಥಿಕ ನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಸರ್ಕಾರ ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ರಾಹುಲ್‌ ಗಾಂಧಿಗೆ ಮತ್ತೆ ಸಂಕಷ್ಟ – FIR ದಾಖಲಿಸುವಂತೆ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

Share This Article