ಬೆಂಗಳೂರು: ಕೆಲ ದಿನಗಳ ಹಿಂದೆ ಅಡುಗೆಮನೆಯ ಕೆಂಪು ಸುಂದರಿ ಟೊಮೊಟೋ (Tomato) ಬೆಲೆ ಡಬಲ್ ಸೆಂಚುರಿ ಬಳಿಗೆ ಹೋಗಿತ್ತು. ಜನ ಟೊಮೊಟೋ ಖರೀದಿಸಲು ಭಯ ಪಡುವಂತೆ ಆಗಿತ್ತು. ಈಗ ಈ ಸರದಿ ಅಡುಗೆ ಮನೆಯ ಮಹಾರಾಣಿಯಾಗಿರುವ ಈರುಳ್ಳಿಗೆ (Onion) ಬಂದಿದೆ. ಮಳೆಯಿಲ್ಲದೇ ಈರುಳ್ಳಿ ಬೆಳೆ ಕಡಿಮೆಯಾಗಿ ಬೇಡಿಕೆ ಹೆಚ್ಚಾಗಿ ಬೆಲೆ ಗಗನಕ್ಕೆ ಏರುತ್ತಿದೆ.
ಕಳೆದ ವಾರವಷ್ಟೇ 100 ರೂ.ಗೆ 3-4 ಕೆಜಿ ಈರುಳ್ಳಿ ದೊರೆಯುತ್ತಿತ್ತು. ಈಗ 70 ರಿಂದ 80 ರೂ.ಗೆ ಬೆಲೆ ಏರಿಕೆಯಾಗಿದೆ. ಇದಕ್ಕೆ ಕಾರಣವೇನು ಅಂತಾ ಜನ ಈರುಳ್ಳಿ ವರ್ತಕರಲ್ಲಿ ಕೇಳುತ್ತಿದ್ದಾರೆ. ಈರುಳ್ಳಿ ಬೆಲೆ ಸದ್ದಿಲ್ಲದೇ ಗಗನಕ್ಕೆ ಏರುತ್ತಿದೆ. ದಿನದಿಂದ ದಿನಕ್ಕೆ ಈರುಳ್ಳಿ ಬೆಲೆ ಹೆಚ್ಚಾಗುತ್ತಿದ್ದು, ಒಂದೇ ವಾರದಲ್ಲಿ ಡಬಲ್ ರೇಟ್ ಆಗಿದೆ. ಕಳೆದ ವಾರ ಕೆಜಿಗೆ 30 ರಿಂದ 40 ರೂ. ಇದ್ದ ಈರುಳ್ಳಿ ಬೆಲೆ ಈಗ 70 ರಿಂದ 80 ರೂ. ಆಗಿದೆ. ಇದನ್ನೂ ಓದಿ: ಯೋಗಿ ಆದಿತ್ಯನಾಥ್ ಭೇಟಿಯಾದ ನಿಖಿಲ್ ಕುಮಾರಸ್ವಾಮಿ
Advertisement
Advertisement
ಬೆಂಗಳೂರಿಗೆ (Bengaluru) ರಾಜ್ಯದ ನಾನಾ ಭಾಗದಿಂದ ಮತ್ತು ಮಹಾರಾಷ್ಟ್ರ, ಆಂಧ್ರ, ಗುಜಾರಾತ್‌ನಿಂದ ಈರುಳ್ಳಿ ಲೋಡ್ ಬರುತ್ತಿತ್ತು. ಇದು ಈರುಳ್ಳಿ ಸೀಸನ್. ಈ ಟೈಮ್‌ಗೆ ಪ್ರತಿನಿತ್ಯ 1,000 ಲಾರಿ ಲೋಡ್ ಬರುತ್ತಿತ್ತು. ಮಳೆಯಾಗದ ಕಾರಣ ಬೆಳೆ ಬಂದಿಲ್ಲ. ಹಾಗಾಗಿ ಪ್ರತಿನಿತ್ಯ 250 ರಿಂದ 300 ಲೋಡ್ ಅಷ್ಟೇ ಬರುತ್ತಿದೆ. ಎಪಿಎಂಸಿಯಲ್ಲೇ (APMC) ಹೋಲ್ ಸೇಲ್ ಬೆಲೆ ಒಳ್ಳೆಯ ಈರುಳ್ಳಿಗೆ 60ರಿಂದ 65 ರೂ. ಆಗಿದೆ. ಮಾರ್ಕೆಟ್‌ನಲ್ಲಿ 70 ರಿಂದ 80 ರೂ. ಆಗುತ್ತಿದೆ ಎಂದು ಎಂಪಿಎಂಸಿಯ ವರ್ತಕರು ಹೇಳುತ್ತಿದ್ದಾರೆ. ಇದನ್ನೂ ಓದಿ: ಪರಮೇಶ್ವರ್ ಮನೆಯಲ್ಲಿ ಡಿನ್ನರ್ ಪಾರ್ಟಿ- ಗೃಹಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾದ್ರಾ ಸಿಎಂ?
Advertisement
ಈರುಳ್ಳಿ ಬೆಲೆ ಹೀಗೆ ಏರಿಕೆಯಾಗಲು ಮಳೆಯಾಗದೇ ಇರೋದೇ ಕಾರಣ. ಮಳೆಯ ಅಭಾವ ಒಂದು ಕಡೆ ಆದರೆ, ಸರ್ಕಾರ 6 ರಿಂದ 7 ಗಂಟೆ ಲೋಡ್ ಶೆಡ್ಡಿಂಗ್ ಮಾಡುತ್ತಿದೆ. ಭೂಮಿಗೆ ನೀರು ಸಿಗುತ್ತಿಲ್ಲ. 50% ರಷ್ಟು ಬೆಳೆ ಮಾತ್ರ ಬಂದಿದೆ ಎಂದು ಚಿತ್ರದುರ್ಗದ ರೈತ ಬೆಳೆ ಕಡಿಮೆಯಾಗಲು ಕಾರಣವನ್ನು ಹೇಳಿದ್ದಾರೆ. ಅಡುಗೆ ಮಾಡಲು ಈರುಳ್ಳಿ ಬೇಕೇ ಬೇಕು. ಬೆಲೆ ಜಾಸ್ತಿ ಆಗಿದೆ ಅಂತಾ ಈರುಳ್ಳಿ ಹಾಕದೇ ಅಡುಗೆ ಮಾಡಲು ಸಾಧ್ಯವಿಲ್ಲ. ಎಷ್ಟೇ ಬೆಲೆಯಾದರೂ ಈರುಳ್ಳಿ ಹಾಕಲೇಬೇಕು. ಎರಡು ಈರುಳ್ಳಿ ಹಾಕೋ ಕಡೆ ಒಂದು ಈರುಳ್ಳಿ ಹಾಕಿ ಅಡುಗೆ ಮಾಡಬೇಕು ಎನ್ನುತ್ತಿದ್ದಾರೆ ಗೃಹಿಣಿಯರು. ಇದನ್ನೂ ಓದಿ: ಇಂದು ವರ್ಷದ ಕೊನೆಯ ಚಂದ್ರಗ್ರಹಣ- ಮಧ್ಯರಾತ್ರಿ 1 ಗಂಟೆಗೆ ಗ್ರಹಣ ಸ್ಪರ್ಶ
Advertisement
ಒಟ್ಟಾರೆ ಡಿಸೆಂಬರ್ ಅಂತ್ಯದವರೆಗೆ ಈರುಳ್ಳಿ ಬೆಲೆ ಏರಿಕೆಯಾಗೋದು ಫಿಕ್ಸ್. ಡಿಸೆಂಬರ್‌ನಲ್ಲಿ ಗುಜರಾತಿನಿಂದ ಈರುಳ್ಳಿ ಸರಬರಾಜು ಆಗಲಿದೆ. ಅಲ್ಲಿವರೆಗೆ ಈರುಳ್ಳಿ ಬೆಲೆ ಸೆಂಚುರಿ ಮೇಲೆ ಸೆಂಚುರಿ ಆದರೂ ಅಚ್ಚರಿಯಿಲ್ಲ. ಇದನ್ನೂ ಓದಿ: ನವಿಲುಗರಿ ಧರಿಸಿದ್ದ ಮಾತ್ರಕ್ಕೆ ಪ್ರಧಾನಿಯವರನ್ನು ಹಿಡಿದುಕೊಂಡು ಹೋಗಬೇಕಾ: ಹರಿಪ್ರಸಾದ್ ಪ್ರಶ್ನೆ
Web Stories