1 ಟನ್ ಈರುಳ್ಳಿ ಮಾರಿದ ರೈತನಿಗೆ ಉಳಿದದ್ದು 14 ರೂಪಾಯಿ ಮಾತ್ರ

Public TV
2 Min Read
onions 1502701155 3219871

ಮುಂಬೈ: 1 ಟನ್ ಈರುಳ್ಳಿ ಮಾರಿದ ರೈತನಿಗೆ ಕೇವಲ 14 ರೂಪಾಯಿ ಉಳಿದಿದ್ದು, ರೈತ ಕಣ್ಣೀರು ಹಾಕಿರುವ ಘಟನೆ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ನಡೆದಿದೆ.

nelamangala onion price 1

ಕಳೆದೊಂದು 4ರಿಂದ 5 ತಿಂಗಳಿಂದ ದರ ಏರಿಕೆ ಮೂಲಕ ಗ್ರಾಹಕನ ಕಣ್ಣಲ್ಲಿ ನೀರು ತರಿಸಿದ್ದ ಈರುಳ್ಳಿ ಇದೀಗ ಬೆಳೆ ಬೆಳೆದ ರೈತನಿಗೆ ಕಣ್ಣೀರು ತರಿಸಿದೆ. ಮಹಾರಾಷ್ಟ್ರದ ಸೊಲ್ಲಾಪುರ ರೈತನೊಬ್ಬನಿಗೆ ಆತ ಬೆಳೆದ 1.1 ಟನ್ ಈರುಳ್ಳಿ ಮಾರಾಟ ಮಾಡಿದ ಬಳಿಕ ಎಲ್ಲಾ ಖರ್ಚು-ವೆಚ್ಚವನ್ನು ಕಳೆದು ಕೇವಲ 14 ರೂಪಾಯಿ ಉಳಿದಿದೆ. ಇದನ್ನೂ ಓದಿ: ಮಧ್ಯಾಹ್ನ ನಿದ್ದೆ ಮಾಡುವ ಸೊಸೆಗೆ ಗೂಸಾ ಕೊಟ್ಟ ಅತ್ತೆ, ಮಾವ

ಈ ಕುರಿತು ಲೆಕ್ಕಾಚಾರದ ಪಟ್ಟಿಯನ್ನು ಮಾಜಿ ಸಂಸದ ರಾಜು ಶೆಟ್ಟಿ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದು, ರೈತನಿಗೆ ಆಗುವ ಅನ್ಯಾಯದ ಕುರಿತಾಗಿ ಬೆಳಕು ಚೆಲ್ಲಿದ್ದಾರೆ. ಸೊಲ್ಲಾಪುರದ ಬಾಪು ಕವಾಡೆ 1665 ಕೆಜಿ ಈರುಳ್ಳಿ ಬೆಳೆದು ಮಾರಾಟಕ್ಕೆ ಕಳುಹಿಸಿದ್ದರು. ಆಗ 1 ರೂಪಾಯಿನಂತೆ ಈರುಳ್ಳಿ ಮಾರಾಟ ಮಾಡಿದ್ದಾರೆ. ದಲ್ಲಾಳಿ ಇವರಿಗೆ 1665 ರೂಪಾಯಿ ನೀಡಿದ್ದಾನೆ. ಈರುಳ್ಳಿ ಬೆಳೆಯಲು ಮಾಡಿದ ಕಾರ್ಮಿಕರ ವೆಚ್ಚ, ಸಾಗಣೆ ವೆಚ್ಚ, ಕಮಿಷನ್ ಎಲ್ಲಾ ಸೇರಿ ಕವಾಡೆಗೆ 1651 ರೂ ವೆಚ್ಚವಾಗಿತ್ತು. ಅಂದರೆ ಉಳಿದಿದ್ದು ಕೇವಲ 14 ರೂಪಾಯಿ ಮಾತ್ರ. ದಲ್ಲಾಳಿ ಅತಿ ಕಡಿಮೆ ಬೆಲೆ ನೀಡಿದ್ದನ್ನು ನಂಬಲಾಗುತ್ತಿಲ್ಲ ಎಂದು ರೈತ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಜನವರಿ 1 ರಿಂದ ಎಟಿಎಂ ಶುಲ್ಕ ಹೆಚ್ಚಳ

ONION 2

ತರಕಾರಿಗಳ ಬೆಲೆ ಮಾತ್ರ ಗಗನಕ್ಕೆ ಏರಿದೆ. ಟೊಮೆಟೋ ಬೆಲೆ 150 ರೂಪಾಯಿಗೂ ಹೆಚ್ಚಿಗೂ ಹೆಚ್ಚಿನ ಬೆಲೆಗೆ ಮಾರಾಟವಾಗಿತ್ತು. ಆದರೆ ಇರುಳ್ಳಿ ಬೆಲೆ ಮಾತ್ರ ಭಾರೀ ಕುಸಿತ ಕಂಡಿರುವುದು ರೈತರಿಗೆ ಕಣ್ಣೀರು ತರಿಸಿದೆ.

Share This Article
Leave a Comment

Leave a Reply

Your email address will not be published. Required fields are marked *