ನವದೆಹಲಿ: ಚೀನಾ ಒನ್‍ಪ್ಲಸ್ ಕಂಪೆನಿಯು ತನ್ನ ನೂತನ ಮಾದರಿಯ ಸ್ಮಾರ್ಟ್ ಫೋನ್‍ಗಳ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಆಪಲ್ ಹಾಗೂ ಸ್ಯಾಮ್‌ಸಂಗ್ ಮೊಬೈಲ್ ಕಂಪೆನಿಗಳಿಗೆ ಸಡ್ಡು ಹೊಡಿದಿದೆ.
ಪ್ರೀಮಿಯಂ ಫೋನ್ ಸೆಗ್ಮೆಂಟ್ ವಿಭಾಗದ 2018ರ ಏಪ್ರಿಲ್ – ಜೂನ್ ಅವಧಿಯಲ್ಲಿ ಭಾರತದ ಮಾರುಕಟ್ಟೆಯಲ್ಲಿ ಒನ್‍ಪ್ಲಸ್ ಕಂಪೆನಿಯು ಹೆಚ್ಚಿನ ಪಾಲನ್ನು ಪಡೆದುಕೊಂಡಿದೆ ಎಂದು ಮಾರುಕಟ್ಟೆ ಅಧ್ಯಯನ ನಡೆಸುವ ಕೌಂಟರ್ ಪಾಯಿಂಟ್ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ.
30 ಸಾವಿರ ರೂ. ಮೇಲ್ದರ್ಜೆಯ ಸ್ಮಾರ್ಟ್ ಫೋನ್‍ಗಳ ವಿಭಾಗದಲ್ಲಿ ಒನ್‍ಪ್ಲಸ್ ಭಾರತದ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಿದ್ದು, ತನ್ನ ನೂತನ ಒನ್‍ಪ್ಲಸ್ 6 ಮಾದರಿಯ ಸ್ಮಾರ್ಟ್ ಫೋನುಗಳ ಮೂಲಕ ಭಾರತದಲ್ಲಿ ವ್ಯಾಪಕವಾಗಿ ಮಾರಾಟಗೊಳ್ಳುತ್ತಿದೆ. ಈ ಮೊದಲು ಈ ಶ್ರೇಣಿಯಲ್ಲಿದ್ದ ಆಪಲ್ ಮತ್ತು ಸ್ಯಾಮ್ ಸಂಗ್ ಕಂಪೆನಿಗಳ ಸ್ಮಾರ್ಟ್ ಫೋನ್‍ಗಳನ್ನು ಹಿಂದಿಕ್ಕಿದೆ ಎಂದು ಕೌಂಟರ್ ಪಾಯಿಂಟ್ ಸಂಸ್ಥೆ ತಿಳಿಸಿದೆ.
ಒನ್‍ಪ್ಲಸ್ ತನ್ನ ನೂತನ 6 ಆವೃತ್ತಿಯ ಸ್ಮಾರ್ಟ್ ಫೋನಿಂದ 40% ರಷ್ಟು ಮಾರುಕಟ್ಟೆಯನ್ನು ಹೆಚ್ಚಿಸಿಕೊಂಡಿದ್ದರೆ, ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ಎಸ್ 9 ಹಾಗೂ ಗ್ಯಾಲಕ್ಸಿ ಎಸ್ 8 ಮಾದರಿಗಳಲ್ಲಿ 34% ರಷ್ಟು ಮಾರುಕಟ್ಟೆಯಲ್ಲಿ ಹೊಂದಿದೆ. ಆಪಲ್ ತನ್ನ ಐಫೋನ್ 8 ಹಾಗೂ ಐಫೋನ್ ಎಕ್ಸ್ ಮಾದರಿಗಳ ಮೂಲಕ 14%ರಷ್ಟು ಹೊಂದುವ ಮೂಲಕ ಕುಸಿತ ಕಂಡಿದೆ. ವಿಶೇಷ ಏನೆಂದರೆ 2017ರ ಈ ಅವಧಿಯಲ್ಲಿ ಒನ್‍ಪ್ಲಸ್ ಕಂಪೆನಿ 9% ಮಾರುಕಟ್ಟೆ ಪಾಲನ್ನು ಹೊಂದಿತ್ತು.
ಭಾರತದ ಒಟ್ಟು ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಪ್ರೀಮಿಯಂ ಫೋನ್ ಗಳ ಪಾಲು 3% ಇದ್ದು, ಒಟ್ಟು ಆದಾಯದಲ್ಲಿ ಇವುಗಳ ಪಾಲು 12% ಆಗಿದೆ. ಭಾರತದಲ್ಲಿ ಈ ಸ್ಮಾರ್ಟ್ ಫೋನುಗಳು ವರ್ಷದಿಂದ ವರ್ಷಕ್ಕೆ 19%ರಷ್ಟು ವೇಗದಲ್ಲಿ ಬೆಳವಣಿಗೆಯಾಗುತ್ತಿದೆ. ಈಗ ಒನ್‍ಪ್ಲಸ್ ಕಂಪೆನಿ ಆಫ್‍ಲೈನ್ ಸ್ಟೋರ್ ತೆರೆಯಲು ಮುಂದಾಗಿದ್ದು, ಕಳೆದ ವಾರ ಬೆಂಗಳೂರಿನ ಜಯನಗರದಲ್ಲಿ ಆಫ್‍ಲೈನ್ ಸ್ಟೋರ್ ತೆರೆದಿದೆ. ಈ ಹಣಕಾಸು ವರ್ಷದಲ್ಲಿ ದೇಶದಲ್ಲಿ ಒಟ್ಟು 10 ಆಫ್‍ಲೈನ್ ಸ್ಟೋರ್ ತೆರೆಯುವ ಯೋಜನೆ ರೂಪಿಸಿದೆ.
ಪ್ರಸ್ತುತ ಭಾರತ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಕ್ಸಿಯೋಮಿ ಮತ್ತು ಸ್ಯಾಮ್‍ಸಂಗ್ ನಡುವೆ ನೇರ ಸ್ಪರ್ಧೆಯಿದ್ದು, ಏಪ್ರಿಲ್- ಜೂನ್ ಅವಧಿಯ ಮಾರುಕಟ್ಟೆಯಲ್ಲಿ ಸ್ಯಾಮ್‍ಸಂಗ್ ಅತಿ ಹೆಚ್ಚು ಮಾರುಕಟ್ಟೆಯ ಪಾಲನ್ನು ಹೊಂದಿದೆ ಎಂದು ಕೌಂಟರ್ ಪಾಯಿಂಟ್ ತಿಳಿಸಿತ್ತು
ಕೌಂಟರ್ ಪಾಯಿಂಟ್ ಸಂಸ್ಥೆಯ 2018ರ ಎರಡನೇ ವರದಿಗಳು: