ಬೆಂಗಳೂರು: ಭಾರತದ ಅನ್ ಲೈನ್ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಮಾರಾಟವಾಗುತ್ತಿರುವ ಪ್ರೀಮಿಯರ್ ಫೋನ್ ಎಂಬ ಹೆಗ್ಗಳಿಕೆಯನ್ನು ಚೀನಾ ಮೂಲದ ಒನ್ ಪ್ಲಸ್ ಕಂಪನಿಯ ಫೋನ್‍ಗಳು ಪಡೆದುಕೊಂಡಿದೆ.
ಇಂಟರ್‍ನ್ಯಾಷನಲ್ ಡೇಟಾ ಕರ್ಪೋರೆಷನ್(ಐಡಿಸಿ) ಎರಡನೇ ತ್ರೈಮಾಸಿಕದಲ್ಲಿ ನೀಡಿರುವ ಮಾಹಿತಿಯ ಪ್ರಕಾರ ಭಾರತದಲ್ಲಿ ಸ್ಯಾಮ್‍ಸಂಗ್ ಮತ್ತು ಆಪಲ್ ಫೋನ್ ಗಳಿಂಗಿತಲೂ ಹೆಚ್ಚಿನ ಸಂಖ್ಯೆಯಲ್ಲಿ ಒನ್ ಪ್ಲಸ್ ಕಂಪೆನಿಯ ಪ್ರೀಮಿಯರ್ ಫೋನ್ ಗಳು ಮಾರಾಟವಾಗಿದೆ ಎಂದು ತಿಳಿಸಿದೆ.
Advertisement
ಐಡಿಸಿ ಮಾಹಿತಿಯಂತೆ ಭಾರತದಲ್ಲಿ ಮಾರಾಟವಾದ ಒಟ್ಟು ಪ್ರೀಮಿಯರ್ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಶೇ.57 ರಷ್ಟು ಪಾಲನ್ನು ಒನ್ ಪ್ಲಸ್ ಪಡೆದುಕೊಂಡಿದ್ದರೆ, ಆಪಲ್ ಐಫೋನ್ ಶೇ.38, ಸ್ಯಾಮ್ ಸಂಗ್ ಶೇ.4 ರಷ್ಟು ಪಡೆದುಕೊಂಡಿದೆ. ಇತರೇ ಕಂಪೆನಿಗಳು ಶೇ.1 ರಷ್ಟು ಪಾಲನ್ನು ಪಡೆದುಕೊಂಡಿದೆ.
Advertisement
Advertisement
ಒನ್ ಪ್ಲಸ್ ಕಂಪೆನಿಯ 3ಟಿ, ಒನ್ ಪ್ಲಸ್ 5 ಫೋನ್ ಗಳು ಹೆಚ್ಚಾಗಿ ಮಾರಾಟವಾಗಿದ್ದರಿಂದ ಕಂಪೆನಿಗೆ ಮೊದಲ ಸ್ಥಾನ ಸಿಕ್ಕಿದೆ. ಇತ್ತೀಚೆಗೆ ಆನ್‍ಲೈನ್ ಶಾಪಿಂಗ್ ತಾಣ ಅಮೇಜಾನ್ ಘೋಷಿಸಿದ್ದ ಪ್ರೈಮ್ ಡೇ ಸೇಲ್‍ನಲ್ಲಿಯೂ ಒನ್‍ಪ್ಲಸ್ 5 ಸ್ಮಾರ್ಟ್ ಫೋನ್‍ಗಳು ಹೆಚ್ಚಾಗಿ ಮಾರಾಟವಾಗಿದೆ.
Advertisement
ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಒನ್ ಪ್ಲಸ್ ಸಂಸ್ಥೆ ಅಕ್ಟೋಬರ್ 4 ರಿಂದ 8ರ ವರೆಗೆ ಅಮೇಜಾನ್ ವರೆಗೆ ನಡೆಯುತ್ತಿರುವ ವಿಶೇಷ ಮಾರಾಟದಲ್ಲಿ ಬೆಲೆ ಕಡಿತಗೊಳಿಸಿ ಮಾರಾಟ ಮಾಡುತ್ತಿದೆ. ಈಗ ಒನ್‍ಪ್ಲಸ್ 3ಟಿ ಮೊಬೈಲ್ ಗೆ 24,999 ರೂ.ದರ ನಿಗದಿ ಪಡಿಸಿದೆ. ಅಷ್ಟೇ ಅಲ್ಲದೇ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಬಳಸಿ ಮೊಬೈಲ್ ಖರೀದಿಸಿದವರಿಗೆ 2 ಸಾವಿರ ರೂ. ಕ್ಯಾಶ್‍ಬ್ಯಾಕ್ ಮತ್ತು ಜೀರೋ ಇಎಂಐ ಆಫರ್ ನೀಡಿದೆ.