ಸಾವಿನ ದವಡೆಯಿಂದ ಪಾರಾದ 1 ವರ್ಷದ ಕಂದಮ್ಮ – ಶಾಕಿಂಗ್ ವಿಡಿಯೋ

Public TV
2 Min Read
TRAIN BABY

ಲಕ್ನೋ: ಚಲಿಸುತ್ತಿರುವ ರೈಲಿನ ಅಡಿಯಲ್ಲಿ ಸಿಲುಕಿದ್ದ ಮಗು ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಗುವೊಂದು ರೈಲಿನ ಅಡಿಗೆ ತಾಯಿಯ ಕೈಯಿಂದ ಜಾರಿ ಹಳಿಯ ಮೇಲೆ ಬಿದ್ದ ಕೂಡಲೇ, ಹಳಿಯ ಮೇಲೆ ವೇಗವಾಗಿ ರೈಲೊಂದು ಹೋಗಿದೆ. ಇದರಿಂದ ಮಗುವು ಸಾವನ್ನಪ್ಪಿರಬಹುದು ಎಂದು ನಿಲ್ದಾಣದಲ್ಲಿ ಜನರು ಆತಂಕ ವ್ಯಕ್ತಪಡಿಸಿದ್ದರು. ಆದ್ರೆ ಹಳಿಯ ಗೋಡೆಯ ಸಿಲುಕಿದ್ದ ಮಗುವಿಗೆ ಯಾವುದೇ ಗಾಯಗಳಾಗದೇ ಪ್ರಾಣಪಾಯದಿಂದ ಪಾರಾಗಿರುವ ಘಟನೆ ಉತ್ತರಪ್ರದೇಶದ ಮಥುರಾ ರೈಲ್ವೆ ಸ್ಟೇಷನ್‍ನಲ್ಲಿ ನಡೆದಿದೆ.

ತಾಯಿ ಒಂದು ವರ್ಷದ ಸಾಹಿಬಾ ಎಂಬ ಹೆಸರಿನ ಹೆಣ್ಣು ಮಗುವನ್ನ ಕೈಯಲ್ಲಿ ಎತ್ತುಕೊಂಡು ರೈಲು ನಿಲ್ದಾಣದ ಬಳಿ ನಿಂತಿದ್ದರು. ಈ ವೇಳೆ ಮಗು ತಾಯಿಯ ಕೈಯಿಂದ ರೈಲ್ವೆ ಹಳಿಯ ಮೇಲೆ ಬಿದ್ದಿದೆ. ಬಿದ್ದ ಮಗುವನ್ನ ಎತ್ತಲು ಹೋದಾಗ ಅದೇ ಸಮಯಕ್ಕೆ ವೇಗವಾಗಿ ರೈಲು ಬಂದಿದೆ. ರೈಲಿನ ಅಡಿಯಲ್ಲಿ ಸಿಲುಕಿದ್ದ ಮಗು ಸಾವನ್ನಪ್ಪಿರಬಹುದು ಎಂದು ಊಹಿಸುವಷ್ಟರಲ್ಲಿ, ಹಳಿಯ ಗೋಡೆಯ ಬದಿಯಲ್ಲಿ ಸಿಲುಕಿಕೊಂಡಿದ್ದ ಮಗು ಬದುಕುಳಿದಿರುವುದನ್ನ ಕಂಡ ಅಲ್ಲಿದ್ದ ಯುವಕರು ಕೂಡಲೇ ಕೆಳಗೆ ಜಿಗಿದು ಮಗುವನ್ನ ರಕ್ಷಿಸಿರುವುದನ್ನ ರೈಲು ನಿಲ್ದಾಣದಲ್ಲಿದ್ದ ಪ್ರಯಾಣಿಕರೊಬ್ಬರು ಈ ದೃಶ್ಯವನ್ನ ಸೆರೆ ಹಿಡಿದ್ದಾರೆ.

ಕೈ ಜಾರಿ ಮಗುವು ಹಳಿಯ ಮೇಲೆ ಬಿದ್ದದ್ದನ್ನ ಅಸಹಾಯಕವಾಗಿ ಪ್ರಯಾಣಿಕರು ಮತ್ತು ಮಗುವಿನ ಹೆತ್ತವರು ನೋಡುವ ಪರಿಸ್ಥಿತಿ ಎದುರಾಗಿತ್ತು. ಕಣ್ಣೆದುರೇ ಮಗುವಿನ ಪ್ರಾಣ ಹೋಯಿತೆಂದ ದುಃಖದಲ್ಲಿದ್ದ ತಾಯಿಗೆ ಮಗು ಪವಾಡದ ರೀತಿಯಲ್ಲಿ ಬದುಕುಳಿದ್ದನ್ನ ಕಂಡು ಸಂತಸವನ್ನ ವ್ಯಕ್ತಪಡಿಸಿದರು.

ಈ ಘಟನೆಯಲ್ಲಿ ಮಗುವಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ. ಈ ಪವಾಡವನ್ನ ನೋಡಿದ ಅಲ್ಲಿನ ಪ್ರಯಾಣಿಕರು ಮಗು ಬದುಕುಳಿದ್ದನ್ನ ನೋಡಿ ಹರೇ ರಾಮ್ ಹರೇ ರಾಮ್ ಎಂದು ಘೋಷಣೆಯನ್ನ ಕೂಗಿ ಸಂತಸ ವ್ಯಕ್ತಪಡಿಸಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *