Madikeri | ಓಂಕಾರೇಶ್ವರ ದೇವಾಲಯದ ಕಲ್ಯಾಣಿ ಭರ್ತಿಗೆ ಒಂದೇ ಮೆಟ್ಟಿಲು ಬಾಕಿ

Public TV
1 Min Read
Madikeri Omkareshwara Temple

ಮಡಿಕೇರಿ: ಕಳೆದ ನಾಲ್ಕೈದು ದಿನಗಳಿಂದ ಕೊಡಗು ಜಿಲ್ಲೆಯಾದ್ಯಂತ ಮಳೆ (Rain) ಆರ್ಭಟ ಹೆಚ್ಚಾಗಿದ್ದು, ಮಳೆ ಗಾಳಿಯಿಂದ ನಾನಾ ರೀತಿಯ ಅವಾಂತರಗಳು ಮುಂದುವರೆಯುತ್ತಿದೆ. ಈ ನಡುವೆ ಮಂಜಿನ ನಗರಿ ಮಡಿಕೇರಿಯ (Madikeri) ಐತಿಹಾಸಿಕ ಓಂಕಾರೇಶ್ವರ ದೇವಾಲಯದ (Omkareshwara Temple) ಅವರಣ ಮುಂಭಾಗದಲ್ಲಿರುವ ಕಲ್ಯಾಣಿ ಭರ್ತಿಯಾಗಲು ಒಂದೇ ಮೆಟ್ಟಿಲು ಬಾಕಿ ಇದೆ.

ಒಂದು ವೇಳೆ ಮಳೆ ಆರ್ಭಟ ಮುಂದುವರಿದರೆ ಕಲ್ಯಾಣಿ ನೀರು ದೇವಾಲಯ ಆವರಣದ ಸುತ್ತಮುತ್ತ ಆವರಿಸಲಿದೆ. ಇದರಿಂದಾಗಿ ಬರುವ ಸಾವಿರಾರು ಭಕ್ತರು ದೇವಾಲಯದ ಅವರಣಕ್ಕೆ ನೀರಿನ ಮೇಲೆ ನಡೆದುಕೊಂಡು ಹೋಗಿ ದೇವರ ದರ್ಶನ ಪಡೆಯುವ ಪರಿಸ್ಥಿತಿ ನಿರ್ಮಾಣ ಆಗುವ ಆತಂಕ ಎದುರಾಗಿದೆ. ಇದನ್ನೂ ಓದಿ: ಲಾರಿ, ಬೈಕ್ ನಡುವೆ ಭೀಕರ ಅಪಘಾತ – ಹಾರಿ ಹೋದ ಬೈಕ್ ಸವಾರನ ರುಂಡ

ಅಲ್ಲದೇ ಹಲವಾರು ವರ್ಷಗಳ ನಂತರ ಈ ಅವಧಿಯಲ್ಲಿ ಕಲ್ಯಾಣಿ ಭರ್ತಿಯಾಗಿರುವುದರಿಂದ ಬಂದ ಸಾವಿರಾರು ಭಕ್ತರು ಕಲ್ಯಾಣಿ ಆವರಣದಲ್ಲಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಎಂಜಾಯ್ ಮಾಡುವ ಸಾಮಾನ್ಯ ದೃಶ್ಯಗಳು ಕಂಡು ಬರುತ್ತಿದೆ. ಇದನ್ನೂ ಓದಿ: ರಾಜ್ಯ ಸರ್ಕಾರಕ್ಕೆ ಮುಖಭಂಗ, ಓಲೈಕೆ ರಾಜಕಾರಣ ಬಿಟ್ಟು ಜನರ ಹಿತ ಕಾಪಾಡಲಿ: ಅರವಿಂದ್ ಬೆಲ್ಲದ್

Share This Article