ಮಡಿಕೇರಿ: ಪ್ರೀತಿಸಿದ ಯುವತಿಯ (Lover) ಮದುವೆ ಲಗ್ನಪತ್ರಿಕೆ ನೋಡಿ ಮನನೊಂದ ಯುವಕ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ (Virajpet) ತಾಲೂಕಿನ ಬಿಟ್ಟಂಗಾಲ ಪೆಗ್ಗರಿಕಾಡ್ ಗ್ರಾಮದಲ್ಲಿ ನಡೆದಿದೆ.
ಬಿಟ್ಟಂಗಾಲ ಗ್ರಾಪಂ ವ್ಯಾಪ್ತಿಯ ಪೆಗ್ಗರಿಕಾಡ್ ಪೈಸಾರಿ ನಿವಾಸಿ ಹಾಗೂ ಜಿಪಂ ಮಾಜಿ ಸದಸ್ಯ ದಿವಂಗತ ಹೆಚ್.ಎಂ ಕಾಳಯ್ಯ ಅವರ ಪುತ್ರ ಹೆಚ್.ಕೆ. ಸುಮಂತ್ (28) ಆತ್ಮಹತ್ಯೆ ಮಾಡಿಕೊಂಡ ಯುವಕ. ಇದನ್ನೂ ಓದಿ: ಕೈದಿಗೆ 20,000ಕ್ಕೆ ಮೊಬೈಲ್ ಮಾರಲು ಯತ್ನ – ಪರಪ್ಪನ ಅಗ್ರಹಾರ ಜೈಲು ವೀಕ್ಷಕ ಬಂಧನ
ಒನ್‌ಸೈಡ್ ಲವ್‌ಗೆ ಬಲಿಯಾದ ಯುವಕ!
ದಿವಂಗತ ಕಾಳಯ್ಯ ದಂಪತಿಗಳಿಗೆ ಇಬ್ಬರು ಹೆಣ್ಣು ಹಾಗೂ ಓರ್ವ ಗಂಡುಮಗ. ಹೆಣ್ಣು ಮಕ್ಕಳಿಗೆ ಮದುವೆಯಾಗಿ ಸುಖಿ ಸಂಸಾರದೊಂದಿಗೆ ಜೀವನ ಸಾಗಿಸುತಿದ್ದಾರೆ. ಮೃತ ಸುಮಂತ್‌ಗೆ ಕೆಲ ವರ್ಷಗಳ ಹಿಂದೆ ಯುವತಿಯೊಬ್ಬಳ ಪರಿಚಯವಾಗಿದೆ. ಆದ್ರೆ ಸುಮಂತ್ ಆಕೆಯನ್ನ ಒನ್‌ಸೈಡ್ ಲವ್ ಮಾಡ್ತಿದ್ದ. ಈ ಬಗ್ಗೆ ಯುವತಿ ಫೋರ್ಸ್ ಮಾಡ್ತಿದ್ದಾನೆ ಅಂತ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಆ ನಂತರ ಯುವಕ ಪ್ರೇಮ ವೈಫಲ್ಯದಿಂದ ಬೇರ್ಪಟ್ಟು ಹೊಸ ಜೀವನ ಶುರು ಮಾಡಿದ್ದ. ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. 6 ತಿಂಗಳ ಹಿಂದೆ ಕೆಲಸ ಬಿಟ್ಟು ಮನೆಗೆ ಬಂದಿದ್ದ. ನಂತರ ಇಲ್ಲಿಯೇ ಖಾಸಗಿ ವಾಹನ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನಂತೆ. ಇದನ್ನೂ ಓದಿ: ಈರುಳ್ಳಿ ಮೂಟೆಯಲ್ಲಿ ಶ್ರೀಗಂಧ ತುಂಡುಗಳ ಕಳ್ಳಸಾಗಣೆ – 18 ಮೂಟೆಗಳಲ್ಲಿ 750 ಕೆಜಿ ಶ್ರೀಗಂಧ ವಶಕ್ಕೆ
ಹೀಗಿರುವಾಗ ಮೃತ ಸುಮಂತ್‌ಗೆ ತನ್ನ ಪ್ರೇಯಸಿ ಮದುವೆ ನಿಗದಿಯಾದ ದಿನಾಂಕ ಗೊತ್ತಾಗಿದೆ. ಇದರಿಂದ ಮನನೊಂದ ಯುವಕ ಅ.18ರಂದು ಮನೆಯಲ್ಲಿ ಯಾರು ಇಲ್ಲದ ವೇಳೆ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾನೆ. ಸಂಜೆ ವೇಳೆಗೆ ಮನೆಗೆ ಬಂದ ತಾಯಿ ಇದನ್ನ ನೋಡಿ ಮಕ್ಕಳಿಗೆ ತಿಳಿಸಿದ್ದಾರೆ. ತಕ್ಷಣವೇ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಗೆ ರವಾನಿಸಿದ್ದಾರೆ. ಜಿಲ್ಲಾ ಆಸ್ಪತ್ರೆಯ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಇಂದು ಸ್ವಗೃಹದಲ್ಲಿ ಸುಮಂತ್ ಮೃತಪಟ್ಟಿದ್ದಾನೆ. ಮೃತನ ಅಕ್ಕ ಪೂರ್ಣಿಮಾ ಅವರು ನೀಡಿರುವ ದೂರಿನ ಅನ್ವಯ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಬಿಎನ್‌ಎಸ್ 194 ರಂತೆ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ. ಇದನ್ನೂ ಓದಿ: ಪ್ರೀತಿಸುವಂತೆ ಫ್ಯಾಷನ್ ಡಿಸೈನರ್‌ಗೆ ಕಿರುಕುಳ – ಇವಿಪಿ ಫಿಲ್ಮ್ ಸಿಟಿ ಮಾಲೀಕನ ವಿರುದ್ಧ ಎಫ್‍ಐಆರ್



