ಆ ಕಡೆ ಐಪಿಎಲ್, ಈ ಕಡೆ ಸಿನಿಮಾ: ಬ್ಯುಸಿಯಾದ ಪ್ರೀತಿ ಜಿಂಟಾ

Public TV
1 Min Read
Preity Zinta

ರೋಬ್ಬರಿ ಆರು ವರ್ಷಗಳ ನಂತರ ಪ್ರೀತಿ ಜಿಂಟಾ (Preity Zinta) ಮುಖಕ್ಕೆ ಬಣ್ಣ ಹಚ್ಚಿದ್ದಾರೆ. ಹಲವು ವರ್ಷಗಳಿಂದ ವಿದೇಶದಲ್ಲೇ ಬೀಡು ಬಿಟ್ಟಿರುವ ಪ್ರೀತಿ, ಈಗ ಐಪಿಎಲ್ (IPL) ಪಂದ್ಯಕ್ಕಾಗಿ ಭಾರತಕ್ಕೆ ಬಂದಿದ್ದಾರೆ. ಒಂದು ಕಡೆ ಐಪಿಎಲ್ ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರೆ, ಮತ್ತೊಂದು ಕಡೆ ಹೊಸ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

Preity Zinta 1 1

ಪ್ರೀತಿ ಜಿಂಟಾ ಮದುವೆಯಾಗಿ ವಿದೇಶದಲ್ಲಿ ಸೆಟಲ್ ಆದ ನಂತರ ಸಿನಿಮಾ ರಂಗವನ್ನೇ ಮರೆತಿದ್ದರು. ಇದೀಗ ಸನ್ನಿ ಡಿಯೋಲ್ ಜೊತೆ ಡ್ಯುಯೇಟ್ ಹಾಡೋಕೆ ನಟಿ ಹೊರಟಿದ್ದಾರೆ. ಹಾಗಾಗಿ ಸಹಜವಾಗಿಯೇ ಅವರ ಅಭಿಮಾನಿಗಳಲ್ಲಿ ಹುಮ್ಮಸ್ಸು ಡಬಲ್ ಆಗಿದೆ.

Preity Zinta 3

‘ಗದರ್ 2’ (Gadar 2) ಮೂಲಕ ಸಕ್ಸಸ್ ಕಂಡಿರುವ ಸನ್ನಿ ಡಿಯೋಲ್ (Sunny Deol) ಜೊತೆ ಪ್ರೀತಿ ಜಿಂಟಾ ಜೊತೆಯಾಗಿ ನಟಿಸುತ್ತಿದ್ದಾರೆ. ಹೊಸ ಸಿನಿಮಾಗೆ ‘ಲಾಹೋರ್ 1947’ ಎಂದು ಟೈಟಲ್ ಇಡಲಾಗಿದೆ. ಚಿತ್ರಕ್ಕೆ ರಾಜ್‌ಕುಮಾರ್ ಸಂತೋಷಿ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ಸ್ಟಾರ್ ನಟ ಆಮೀರ್ ಖಾನ್ ನಿರ್ಮಾಣ ಮಾಡುತ್ತಿದ್ದಾರೆ.

 

ಸನ್ನಿ ಡಿಯೋಲ್ ಜೊತೆ ಪ್ರೀತಿ ಜಿಂಟಾಗೆ ಉತ್ತಮ ಬಾಂಧವ್ಯವಿದೆ. ಈ ಹಿಂದೆ ಇಬ್ಬರೂ ಜೊತೆಯಾಗಿ ಎರಡ್ಮೂರು ಚಿತ್ರಗಳಲ್ಲಿ ಜೋಡಿಯಾಗಿ ನಟಿಸಿದ್ದಾರೆ. ಈಗ ‘ಲಾಹೋರ್ 1947’ (Lahore 1947) ಚಿತ್ರದ ಮೂಲಕ ಮತ್ತೆ ಈ ಜೋಡಿ ಜೊತೆಯಾಗುತ್ತಿದ್ದಾರೆ. ‘ಗದರ್ 2’ ಚಿತ್ರದ ಸಕ್ಸಸ್ ಸನ್ನಿ ಡಿಯೋಲ್ ಕೆರಿಯರ್ ಮರುಜೀವ ನೀಡಿದೆ. ಹಾಗಾಗಿ ಅವರ ಮುಂದಿನ ಚಿತ್ರದ ಬಗ್ಗೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.

Share This Article