ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣದ ರೇಖೆಯ ಬಳಿ ಐಇಡಿ ಸ್ಫೋಟಗೊಂಡಿದ್ದು, ಓರ್ವ ಯೋಧ ಹುತಾತ್ಮರಾಗಿದ್ದು, 7 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳು ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಗುರುವಾರ ಚುನಾವಣಾ ಫಲಿತಾಂಶ ಹೊರ ಬರಲಿದ್ದು, ಎಕ್ಸಿಟ್ ಪೋಲ್ ಗಳು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆಂಬ ಭವಿಷ್ಯ ನುಡಿದಿವೆ. ಈ ಸಂಬಂಧ ಫಲಿತಾಂಶಕ್ಕೂ ಮುನ್ನ ದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಿಸಲು ಉಗ್ರರು ಐಇಡಿ ಸ್ಫೋಟಿಸರಬಹುದು ಎಂದು ಶಂಕಿಸಲಾಗಿದೆ.
Advertisement
ಜಮ್ಮು ಮತ್ತು ಕಾಶ್ಮೀರದಲ್ಲಿ ಮತದಾನದ ದಿನ ಸಹ ಕೆಲವು ಸ್ಥಳಗಳಲ್ಲಿ ಉಗ್ರರು ದಾಳಿ ನಡೆಸಿದ್ದರು. ಇದೀಗ ಫಲಿತಾಂಶದ ಒಂದು ದಿನದ ಮೊದಲೇ ಐಇಡಿ ಸ್ಫೋಟಿಸುವ ಮೂಲಕ ಭಯದ ವಾತಾವರಣ ನಿರ್ಮಿಸುತ್ತಿದ್ದಾರೆ. ಐಇಡಿ ಸ್ಫೋಟಕ್ಕೂ ಮುನ್ನ ಬುಧವಾರ ಬೆಳಗ್ಗೆ ಕುಲಗಾಮ್ ಜಿಲ್ಲೆಯಲ್ಲಿ ಉಗ್ರರು ಮತ್ತು ಭಾರತೀಯ ಸೇನೆ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಹಿಜ್ಬುಲ್ ಮುಜಾಹಿದೀನ ಸಂಘಟನೆಯ ಇಬ್ಬರು ಉಗ್ರರನ್ನು ಭಾರತೀಯ ಸೇನೆ ಹೊಡೆದುರಳಿಸಿದೆ.
Advertisement
Jammu & Kashmir: One security personnel has lost his life and seven injured in IED blast in Mendhar area along the Line of Control in Poonch sector. pic.twitter.com/TiiSmG1JU4
— ANI (@ANI) May 22, 2019