ಕ್ಷುಲ್ಲಕ ಕಾರಣಕ್ಕೆ ಮಲಗಿದ್ದ ವ್ಯಕ್ತಿಯ ಮೇಲೆ ಗುಂಡು ಹಾರಿಸಿದ

Public TV
1 Min Read
CNG

ಚಾಮರಾಜನಗರ: ಜಾಬ್ ಕಾರ್ಡ್ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊರ್ವನಿಗೆ ನಾಡ ಬಂದೂಕಿನಿಂದ ಗುಂಡು ಹಾರಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಕುರಟಿ ಹೊಸೂರಿನಲ್ಲಿ ನಡೆದಿದೆ.

cng shootout 3

ಗ್ರಾಮದ ಕೃಷ್ಣ ಜಾಬ್ ಕಾರ್ಡ್ ತನಗೆ ನೀಡಲಿಲ್ಲ ಎಂಬ ಕಾರಣಕ್ಕೆ ಸಿದ್ದರಾಜು ಎಂಬಾತ ಕೃಷ್ಣನ ಮೇಲೆ ನಾಡ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ. ಈ ಹಿಂದೆ ತನ್ನ ಕೆಲಸಕ್ಕೆ ಸಿದ್ದರಾಜು ಕೃಷ್ಣನ ಜಾಬ್ ಕೇಳಿದ್ದ. ಈ ವೇಳೆ ಕೃಷ್ಣ ತನ್ನ ಜಾಬ್ ಕಾರ್ಡ್ ನೀಡಲು ನಿರಾಕಾರಿಸಿದ್ದ. ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಕೊಪಗೊಂಡಿದ್ದ ಸಿದ್ದರಾಜು ಅದೇ ಗ್ರಾಮದ ಮುನಿರಾಜು ಎಂಬವರಿಂದ ನಾಡ ಬಂದೂಕು ಪಡೆದು ಮಲಗಿದ್ದ ಕೃಷ್ಣನ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ.

ಗುಂಡು ಬಿದ್ದಿದ್ದರಿಂದ ತೀವ್ರವಾಗಿ ಗಾಯಗೊಂಡಿರುವ ಕೃಷ್ಣ ಸದ್ಯ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

cng shootout 2

cng shootout 1

cng shootout

 

Share This Article