ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ಬೆದರಿದ ಕ್ರಿಕೆಟ್ ಶಿಶು – ಐತಿಹಾಸಿಕ ಗೆಲುವು ಪಡೆದ ರಹಾನೆ ಬಳಗ

Public TV
2 Min Read
IND VS AFG 1

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆದ ಐತಿಹಾಸಿಕ ಏಕೈಕ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ಇನ್ನಿಂಗ್ಸ್ ಹಾಗೂ 262 ರನ್ ಗಳಿಂದ ಗೆದ್ದುಕೊಂಡಿದೆ.

ಒಂದೇ ದಿನದಲ್ಲಿ ಅಫ್ಘಾನ್ ತಂಡವನ್ನು ಎರಡು ಬಾರಿ ಅಲೌಟ್ ಮಾಡಿದ ಟೀಂ ಇಂಡಿಯಾ, ಟೆಸ್ಟ್ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ ಆಘ್ಘಾನ್‍ಗೆ ಸೋಲಿನ ರುಚಿ ತೋರಿಸಿದ್ದು, ಪಂದ್ಯದಲ್ಲಿ ಶತಕ ಸಿಡಿಸಿ ದಾಖಲೆ ನಿರ್ಮಿಸಿದ ಧವನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಎರಡನೇ ದಿನದಾಟದಲ್ಲಿ ಟೀಂ ಇಂಡಿಯಾ ವಿರುದ್ಧ ತಿರುಗಿ ಬಿದ್ದ ಅಫ್ಘಾನ್ ಬೌಲರ್ ಗಳು 474 ರನ್ ಗಳಿಗೆ ತಂಡವನ್ನು ಕಟ್ಟಿ ಹಾಕಲು ಯಶಸ್ವಿಯಾದರು. ಆದರೆ ಬೃಹತ್ ಮೊತ್ತ ಬೆನ್ನತ್ತಿದ್ದ ಅಫ್ಘಾನ್ ಪಡೆ ತನ್ನ ಮೊದಲ ಇನ್ನಿಂಗ್ಸ್‍ನಲ್ಲಿ 27.5 ಓವರ್‍ಗಳಲ್ಲಿ ಕೇವಲ 109 ರನ್‍ಗಳಿಗೆ ಆಲೌಟಾಗಿತ್ತು. ಈ ವೇಳೆ ಅಫ್ಘಾನ್ ವಿರುದ್ಧ ಫಾಲೋವನ್ ಎದುರಿಸಿದ ಟೀಂ ಇಂಡಿಯಾ ಮತ್ತೆ ಬ್ಯಾಟಿಂಗ್ ಗೆ ಆಹ್ವಾನಿಸಿತ್ತು. ಆದರೆ ಎರಡನೇ ಇನ್ನಿಂಗ್ಸ್ ನಲ್ಲೂ ಯಾವುದೇ ಪ್ರತಿರೋಧವನ್ನು ತೋರದ ಅಫ್ಘಾನ್ ಮತ್ತೆ 38.4 ಓವರ್‍ಗಳಲ್ಲಿ 103 ರನ್‍ಗಳಿಗೆ ತನ್ನ ಎಲ್ಲಾ ಟಿಕೆಟ್ ಕಳೆದುಕೊಂಡಿತು.

ಅಫ್ಘಾನ ಪರ ಮೊದಲ ಇನ್ನಿಂಗ್ಸ್ ನಲ್ಲಿ ಮೊಹಮ್ಮದ್ ಶಹ್ಜಾದ್ (13), ರಹ್ಮತ್ ಶಾಹ (14), ಹಶ್ಮತುಲ್ಲಾಹ್ ಶಹೀದಿ (11), ನಾಯಕ ಅಸ್ಗರ್ ಸ್ಟಾನಿಕ್‍ಜಾಯಿ (11), ರಶೀದ್ ಖಾನ್ (12) ಎರಡಂಕಿ ದಾಟಿಲು ಯಶಸ್ವಿಯಾದರು. ಎರಡನೇ ಇನ್ನಿಂಗ್ಸ್ ನಲ್ಲಿ ಅಸ್ಗರ್ ಸ್ಟಾನಿಕ್‍ಜಾಯಿ (25) ಹಾಗೂ ಹಶ್ಮತ್‍ತುಲ್ಲಾ ಶಾಹಿದಿ (36 ಅಜೇಯ) ಅಲ್ಪ ಪ್ರತಿರೋಧ ತೋರಿದ್ದು ಬಿಟ್ಟರೆ ಇತರ ಆಟಗಾರರು ಬಂದಷ್ಟೇ ವೇಗದಲ್ಲಿ ನಿರ್ಗಮಿಸಿದರು.

IND VS AFG 3

ಇನ್ನು ಭಾರತ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಜಡೇಜಾ ಮೊದಲ ಇನ್ನಿಂಗ್ಸ್ ನಲ್ಲಿ 4, ಎರಡನೇ ಇನ್ನಿಂಗ್ಸ್ ನಲ್ಲಿ 2 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಎರಡು ಇನ್ನಿಂಗ್ಸ್ ಗಳಿಂದ ಅಶ್ವಿನ್ 5, ಇಶಾಂತ್ ಶರ್ಮಾ ಮತ್ತು ಉಮೇಶ್ ಯಾದವ್ ತಲಾ 4 ವಿಕೆಟ್ ಪಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದೇ ವೇಳೆ ಉಮೇಶ್ ಯಾದವ್ ಟೆಸ್ಟ್ ಕ್ರಿಕೆಟ್‍ನಲ್ಲಿ 100 ವಿಕೆಟ್‍ಗಳ ಸಾಧನೆ ಮಾಡಿದರು.

ಇದಕ್ಕೂ ಮುನ್ನ ಟೀಂ ಇಂಡಿಯಾ ಪರ ಎರಡನೇ ದಿನದಾಟದಲ್ಲಿ ಹಾರ್ದಿಕ್ ಪಾಂಡ್ಯ ಬಿರುಸಿನ 71 ರನ್ ಗಳಿಸಿ ತಂಡ ಸವಾಲಿನ ಮೊತ್ತ ಪೇರಿಸಲು ಕಾರಣರಾದರು. ಇನ್ನು ಅಫ್ಘಾನ್ ಪರ ಯಮಿನ್ ಅಹ್ಮದ್‍ಜಾಯ್ 3, ವಫಾದಾರ್ ಮತ್ತು ರಶೀದ್ ಖಾನ್ ತಲಾ 2, ಮುಜೀಬ್ ಉರ್ ರೆಹ್ಮಾನ್ ಹಾಗೂ ಮೊಹಮ್ಮದ್ ನಬಿ ತಲಾ ಒಂದೊಂದು ವಿಕೆಟ್ ಪಡೆದರು.

IND VS AFG 4

Share This Article
Leave a Comment

Leave a Reply

Your email address will not be published. Required fields are marked *