ಕೀನ್ಯಾ: ಹೂಸು ವಾಸನೆ ತಾಳಲಾರದೆ ಕಲಾಪ ಮುಂದೂಡಿದ ವಿಚಿತ್ರ ಪ್ರಸಂಗವೊಂದು ಕಿನ್ಯಾದಲ್ಲಿ ನಡೆದಿದೆ.
ಕೀನ್ಯಾದ ಹೇಮಾ ಬೇ ಕೌಂಟಿ ಅಸೆಂಬ್ಲಿಯಲ್ಲಿ ಬುಧವಾರ ಕಲಾಪ ನಡೆದಿತ್ತು. ಈ ವೇಳೆ ಸದಸ್ಯರೊಬ್ಬರು ಹೂಸು ಬಿಟ್ಟಿದ್ದರಿಂದ ಭಾರೀ ದುರ್ವಾಸನೆ ಉಂಟಾಗಿತ್ತು. ಪರಿಣಾಮ ಕಲಾಪದಲ್ಲಿದ್ದ ಸದಸ್ಯರು ಹಾಗೂ ಸಿಬ್ಬಂದಿ ಪರದಾಡುವಂತಾಗಿತ್ತು. ಇದನ್ನೂ ಓದಿ: ಹೂಸಿನ ದುರ್ವಾಸನೆಯನ್ನು ಸುವಾಸನೆಯಾಗಿ ಮಾಡೋ ಮಾತ್ರೆ ಮಾರುಕಟ್ಟೆಗೆ ಎಂಟ್ರಿ
Advertisement
ಅಸೆಂಬ್ಲಿಯಲ್ಲಿ ದುರ್ವಾಸನೆ ಹರಡುತ್ತಿದ್ದಂತೆ ಅಸಮಾಧಾನ ಹೊರ ಹಾಕಿದ ಸ್ಪೀಕರ್ ಎಡ್ವಿನ್ ಕಾಕಾಚ್ ಅವರು, ನಮ್ಮ ಸದಸ್ಯದಲ್ಲಿ ಒಬ್ಬರು ಹೂಸು ಬಿಟ್ಟಿದ್ದಾರೆ. ಅವರು ಯಾರು ಅಂತ ನನಗೆ ಗೊತ್ತಿದೆ ಎಂದು ಹೇಳಿದರು.
Advertisement
Advertisement
ತಕ್ಷಣವೇ ಆರೋಪ ಎದುರಿಸಿದ ಸದಸ್ಯರೊಬ್ಬರು ಎದ್ದು ನಿಂತು, ನಾನು ಹೂಸು ಬಿಟ್ಟಿಲ್ಲ. ಸಹೋದ್ಯೋಗಿಗಳ ಮುಂದೆ ಅಂತಹ ಕೆಟ್ಟ ಕೆಲಸ ಮಾಡುವವನು ನಾನಲ್ಲ ಎಂದು ಸ್ಪಷ್ಟನೆ ನೀಡಿದರು.
Advertisement
ಸ್ಪೀಕರ್ ಎಡ್ವಿನ್ ಕಾಕಾಚ್ ಅವರು ಸಿಬ್ಬಂದಿಯನ್ನು ಕರೆದು ಏರ್ ಫ್ರೆಶನರ್, ವೆನಿಲ್ಲಾ ಅಥವಾ ಸ್ಟ್ರಾಬೆರಿ ಸುಗಂಧವನ್ನು ತಂದು ರೂಮ್‍ಗೆ ಸ್ಪೇಪ್ರೆ ಮಾಡಿ ಎಂದು ಸೂಚನೆ ನೀಡಿದರು. ಇದೇ ವೇಳೆ, ಇಂತಹ ದುರ್ವಾಸನೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿ, ಸದನವನ್ನು ಕೆಲ ಸಮಯ ಮುಂದೂದರು ಎಂದು ವರದಿಯಾಗಿದೆ.
ಹೂಸು ವಾಸನೆಗೆ ಕಲಾಪ ಮುಂದೂಡಿದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿಂದೆ ಕಿನ್ಯಾ ಸಂಸತ್‍ಗೆ ಮಹಿಳಾ ಸದಸ್ಯರೊಬ್ಬರು ಮಗುವನ್ನು ಹೊತ್ತುಕೊಂಡು ಬಂದಿದ್ದರು. ಮಗುವನ್ನು ನೋಡಿದ ಸ್ಪೀಕರ್ ಅವರು ಮಗುವನ್ನು ಎತ್ತಿಕೊಂಡು ಕಲಾಪದಿಂದ ಹೊರ ಹೋಗುವಂತೆ ಸೂಚನೆ ನೀಡಿದ್ದರು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು.