– 29ನೇ ವಸಂತಕ್ಕೆ ಕಾಲಿಟ್ಟ ಕೆ.ಎಲ್.ರಾಹುಲ್
ಬೆಂಗಳೂರು: ಪ್ರಸ್ತುತ ವಿಶ್ವದ ಅತ್ಯಂತ ಪ್ರತಿಭಾವಂತ ಕ್ರಿಕೆಟಿಗರಲ್ಲಿ ಒಬ್ಬರಾದ ‘ಮಿಸ್ಟರ್ 360’ ಖ್ಯಾತಿಯ ಕೆ.ಎಲ್.ರಾಹುಲ್ ಅವರು ಇಂದು 29ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಟೀಂ ಇಂಡಿಯಾದ ಅತ್ಯಂತ ಸ್ಥಿರವಾದ ಬ್ಯಾಟ್ಸ್‌ಮನ್‍ಗೆ ಆತ್ಮೀಯ ಗೆಳೆಯ, ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಶುಭಾಶಯ ಕೋರಿದ್ದಾರೆ.
ಹಾರ್ದಿಕ್ ಪಾಂಡ್ಯ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಕೆ.ಎಲ್.ರಾಹುಲ್ ಜೊತೆಗಿರುವ ಫೋಟೋವನ್ನು ಪೋಸ್ಟ್ ಮಾಡಿ, ಜನ್ಮದಿನ ಶುಭಾಶಯ ಸಹೋದರ ಎಂದು ವಿಶ್ ಮಾಡಿದ್ದಾರೆ. ಜೊತೆಗೆ ಅನುಭವಿ ಬ್ಯಾಟ್ಸ್‌ಮನ್ ಶಿಖರ್ ಧವನ್, ಯುವ ಕ್ರಿಕೆಟರ್ ಮಾಯಾಂಕ್ ಅಗರ್ವಾಲ್ ಸೇರಿದಂತೆ ಅನೇಕರು ಕೆ.ಎಲ್.ರಾಹುಲ್ ಅವರಿಗೆ ಶುಭ ಕೋರಿದ್ದಾರೆ.
Advertisement
Advertisement
ಕೆ.ಎಲ್.ರಾಹುಲ್ ಭಾರತೀಯ ಕ್ರಿಕೆಟ್ ತಂಡದಲ್ಲಿ, ವಿಶೇಷವಾಗಿ ಸೀಮಿತ ಓವರ್‌ಗಳ ಸ್ವರೂಪಗಳಲ್ಲಿ ಪ್ರಮುಖ ಬ್ಯಾಟ್ಸ್‌ಮನ್ ಎಂದು ಗುರುತಿಸಿಕೊಂಡಿದ್ದಾರೆ. 2019ರ ವಿಶ್ವಕಪ್ ಟೂರ್ನಿ ಬಳಿಕ ಕನ್ನಡಿಗ ರಾಹುಲ್ ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರೂ ರನ್ ಮಳೆ ಹರಿಸುತ್ತಾರೆ ಎಂಬುದನ್ನು ಖಚಿತಪಡಿಸಿದ್ದಾರೆ. ಮುಖ್ಯವಾಗಿ ಓಪನರ್ ಆಗಿರುವ ಕೆ.ಎಲ್.ರಾಹುಲ್ ಈಗ ಏಕದಿನ ಕ್ರಿಕೆಟ್‍ನಲ್ಲಿ 5ನೇ ಸ್ಥಾನದಲ್ಲಿ ಆಡುತ್ತಿದ್ದಾರೆ. ಮುಂಬರು ವೈಟ್-ಬಾಲ್ ಕ್ರಿಕೆಟ್‍ನಲ್ಲಿ ರಿಷಬ್ ಪಂತ್‍ಗಿಂತ ರಾಹುಲ್ ತಂಡದಲ್ಲಿ ನಂಬರ್ 1 ಚಾಯ್ಸ್ ವಿಕೆಟ್ ಕೀಪರ್ ಆಗಿ ತಮ್ಮ ಸ್ಥಾನಮಾನವನ್ನು ಭದ್ರಪಡಿಸಿಕೊಂಡಿದ್ದಾರೆ.
Advertisement
https://www.instagram.com/p/B_GC19_FeTA/?utm_source=ig_embed
Advertisement
ಟೀಂ ಇಂಡಿಯಾ ಆಟಗಾರರೊಂದಿಗೆ ವಿಶೇಷವಾಗಿ ಹಾರ್ದಿಕ್ ಪಾಂಡ್ಯ ಮತ್ತು ಮಾಯಾಂಕ್ ಅಗರ್ವಾಲ್ ಅವರೊಂದಿಗಿನ ಕೆ.ಎಲ್.ರಾಹುಲ್ ಸ್ನೇಹವನ್ನು ಯಾವುದೇ ಕ್ರಿಕೆಟ್ ಅಭಿಮಾನಿಗಳಿಂದ ಮರೆಯಲು ಸಾಧ್ಯವಿಲ್ಲ. ಆದ್ದರಿಂದ ಇಬ್ಬರು ತಮ್ಮ ವಿಶೇಷ ದಿನದಂದು ಸ್ಟೈಲಿಶ್ ಬ್ಯಾಟ್ಸ್‌ಮನ್‍ಗೆ ಶುಭ ಹಾರೈಸಿದ್ದಾರೆ.
”ಜನ್ಮದಿನದ ಶುಭಾಶಯಗಳು ಸಹೋದರ. ಯಾವಾಗಲೂ ನೀವು ನಡೆದು ಬಂದ ದಾರಿಯನ್ನು ನೆನಪಿಸಿಕೊಳ್ಳುತ್ತಿರಿ” ಎಂದು ಹಾರ್ದಿಕ್ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದಾರೆ. ಮಾಯಾಂಕ್ ಅಗರ್ವಾಲ್, ”ಜನ್ಮದಿನದ ಶುಭಾಶಯ ದೋಸ್ತ್.. ಈ ವರ್ಷ ನಿಮಗೆ ಹೆಚ್ಚಿನ ಸಂತೋಷ, ಆರೋಗ್ಯ ಮತ್ತು ಯಶಸ್ಸನ್ನು ತರುತ್ತದೆ. ನಿಮ್ಮ ಸ್ವಲ್ಪ ಹುಚ್ಚು ಮತ್ತು ಮೋಜು ಅನ್ನು ಇನ್ನೂ ಕಾಯಲು ಸಾಧ್ಯವಿಲ್ಲ” ಎಂದು ವಿಶೇಷವಾಗಿ ವಿಶ್ ಮಾಡಿದ್ದಾರೆ.
https://www.instagram.com/p/B_GvquNFblD/?utm_source=ig_embed
ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ), ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ಫ್ರ್ಯಾಂಚೈಸ್, ಕಿಂಗ್ಸ್ ಇಲೆವೆನ್ ಪಂಜಾಬ್ (ಕೆಎಕ್ಸ್‍ಐಪಿ) ಸಹ ಕೆ.ಎಲ್.ರಾಹುಲ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದೆ.
???? ????????????????????????????! ???????????????????? ????????????????????????????! ⭐️
Happiest of birthdays to the one and only, @klrahul11! ♥️#SaddaPunjab #HappyBirthday pic.twitter.com/P3UNNyWWSz
— Punjab Kings (@PunjabKingsIPL) April 17, 2020
ಕನ್ನಡಿಗ ರಾಹುಲ್ ಅವರ ಅಲ್ಪಾವಧಿಯ ಕ್ರಿಕೆಟ್ ವೃತ್ತಿಜೀವನದಲ್ಲಿ ಅನೇಕ ದಾಖಲೆಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ. ಅವರು ಈವರೆಗೂ ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ 36 ಟೆಸ್ಟ್, 32 ಏಕದಿನ ಪಂದ್ಯ, 42 ಟಿ20 ಪಂದ್ಯಗಳನ್ನು ಆಡಿ ಒಟ್ಟು 4,706 ರನ್ ಗಳಿಸಿದ್ದಾರೆ. ವಿಶೇಷವೆಂದರೆ ಕ್ರಿಕೆಟ್‍ನ ಎಲ್ಲಾ ಮೂರು ಸ್ವರೂಪಗಳಲ್ಲಿ ಶತಕಗಳನ್ನು ಗಳಿಸಿದ ಮೂವರು ಭಾರತೀಯ ಕ್ರಿಕೆಟಿಗರಲ್ಲಿ ರಾಹುಲ್ ಕೂಡ ಒಬ್ಬರು. ಆಸ್ಟ್ರೇಲಿಯಾ ವಿರುದ್ಧ 2014ರಲ್ಲಿ ಅಂತರರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ರಾಹುಲ್ ನಿಜಕ್ಕೂ ಬಹಳ ದೂರ ಸಾಗಿದ್ದಾರೆ.
???? 36 Tests, 32 ODIs, 42 T20Is
???? 4,706 international runs
???? First ???????? player to score a century on ODI debut
???? Third Indian to score a century in all three formats of the game
Happy birthday, KL Rahul ???? pic.twitter.com/gcrbRFVtzH
— ICC (@ICC) April 18, 2020