ವಾಷಿಂಗ್ಟನ್: ವಿಶ್ವದ ಅತ್ಯಂತ ಅಪಾಯಕಾರಿ ದೇಶಗಳಲ್ಲಿ ಪಾಕಿಸ್ತಾನವೂ (Pakistan) ಒಂದಾಗಿದೆ. ಒಗ್ಗಟ್ಟಿನ ವ್ಯವಸ್ಥೆ ಇಲ್ಲದೇ ಅಣ್ವಸ್ತ್ರಗಳನ್ನು ಹೊಂದಿದೆ ಎಂದು ಪಾಕಿಸ್ತಾನದ ವಿರುದ್ಧ ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Biden) ಹೇಳಿಕೆ ನೀಡಿದ್ದಾರೆ.
ಲಾಸ್ ಏಂಜಲೀಸ್‌ನಲ್ಲಿ ನಡೆದ ಡೆಮಾಕ್ರಟಿಕ್ ಕಾಂಗ್ರೆಷನಲ್ ಕ್ಯಾಂಪೇನ್ ಕಮಿಟಿಯ ಸ್ವಾಗತ ಸಮಾರಂಭದಲ್ಲಿ ಪಾಕಿಸ್ತಾನ ಜೊತೆಗೆ ಚೀನಾ (China) ಮತ್ತು ರಷ್ಯಾ (Russia) ವಿರುದ್ಧ ಅಮೆರಿಕ ಅಧ್ಯಕ್ಷ (America President) ಟೀಕೆ ವ್ಯಕ್ತಪಡಿಸಿದ್ದಾರೆ. ಯುಎಸ್ ಜೊತೆಗಿನ ಸಂಬಂಧಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಶೆಹಬಾಜ್ ಷರೀಫ್ ಸರ್ಕಾರದ ಪ್ರಯತ್ನಕ್ಕೆ ಹಿನ್ನಡೆಯಾಗಿದೆ ಎಂದು ಬೈಡೆನ್ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಜಾಗತಿಕ ಹಸಿವು ಸೂಚ್ಯಂಕ – ಪಾಕ್, ಬಾಂಗ್ಲಾ, ಶ್ರೀಲಂಕಾಗಿಂತಲೂ ಕೆಳಗಿನ ಸ್ಥಾನದಲ್ಲಿ ಭಾರತ
Advertisement
Advertisement
USನ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರ ದಾಖಲೆ ಬಿಡುಗಡೆಯಾದ ಎರಡು ದಿನಗಳ ನಂತರ ಜೋ ಬೈಡೆನ್ ಈ ಹೇಳಿಕೆ ನೀಡಿದ್ದಾರೆ. 48 ಪುಟಗಳ ದಾಖಲೆಯಲ್ಲಿ ಪಾಕಿಸ್ತಾನದ ಬಗ್ಗೆ ಯಾವುದೇ ಉಲ್ಲೇಖಿಸಿಲ್ಲ.
Advertisement
Advertisement
ರಷ್ಯಾ ಹಾಗೂ ಚೀನಾ ವಿರುದ್ಧವೂ ಬೈಡೆನ್ ಕಿಡಿಕಾರಿದ್ದಾರೆ. ಉಕ್ರೇನ್ ವಿರುದ್ಧ ರಷ್ಯಾ ಹಾಗೂ ತೈವಾನ್ ಮೇಲಿನ ಚೀನಾ ಆಕ್ರಮಣದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ಸಾರ್ವಜನಿಕ ಆಸ್ಪತ್ರೆಯಲ್ಲಿ 200 ಕೊಳೆತ ಶವ ಪತ್ತೆ