ಮಡಿಕೇರಿ: ಆ 4 ಜನರು ಎಂದೂ ಬಿಟ್ಟಿರಲಾರದ ಆಪ್ತ ಸ್ನೇಹಿತರು (Friends). ಒಟ್ಟೊಟ್ಟಿಗೆ ಪಾರ್ಟಿ ಮಾಡಿ ಎಂಜಾಯ್ ಮಾಡುತ್ತಿದ್ದವರು. ಅದೇ ಆತ್ಮೀಯತೆಯಿಂದಲೇ ಸೋಮವಾರ ಮಟಮಟ ಮಧ್ಯಾಹ್ನವೇ ಗನ್ ಹಿಡಿದು ಬೇಟೆಗೆ (Hunting) ಹೊರಟಿದ್ದರು. ಬೇಟೆಗೆ ಹೋದ ನಾಲ್ವರಲ್ಲಿ ಮೂವರು ಊರಿಗೆ ವಾಪಸ್ ಬಂದ್ರೆ, ಅದರಲ್ಲೊಬ್ಬ ನಾಪತ್ತೆಯಾಗಿದ್ದ. ಆದರೆ ಮಿಸ್ ಆದವನು 4 ದಿನವಾದರೂ ಪತ್ತೆ ಆಗಲೇ ಇಲ್ಲ. ಒಟ್ಟಿಗೆ ಹೋದವನು ಮಿಸ್ ಆಗಿದ್ದು ಹೇಗೆ ಎನ್ನುವುದೇ ಈಗ ಮಿಸ್ಟರಿ.
ಹೌದು, ಗ್ರಾಮದ 4 ಜನರು ಪ್ರಾಣ ಸ್ನೇಹಿತರು ಒಬ್ಬರಿಗೆ ಒಬ್ಬರು ಪ್ರಾಣ ಕೊಡುವಷ್ಟು ಆತ್ಮೀಯರು. ಒಂದೇ ತಟ್ಟೆಯಲ್ಲಿ ಊಟ ಮಾಡುವ ಸ್ನೇಹಿತರು. ಇದೇ ಕಾರಣಕ್ಕೆ ಒಟ್ಟಿಗೆ ಊರಿನಲ್ಲಿ ಇರುವ ಕಾಡಿಗೆ ಬೇಟೆಗೆ ಹೋಗುವುದಾಗಿ ಮಾತಾನಾಡಿಕೊಂಡ ನಾಲ್ವರು ಸ್ನೇಹಿತರು ಹೋಗಿ ಬರುವಾಗ ಮೂವರು ಬಂದಿದ್ದಾರೆ. ಮತ್ತೋರ್ವ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾನೆ.
Advertisement
Advertisement
ಅಷ್ಟಕ್ಕೂ ಈ ಘಟನೆ ನಡೆದಿರುವುದು ಕೊಡಗು ಜಿಲ್ಲೆಯ (ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಗ್ರಾ.ಪಂ ವ್ಯಾಪ್ತಿಯಲ್ಲಿ. ವಿರೂಪಾಕ್ಷಪುರ ಗ್ರಾಮದ ನಿವಾಸಿ, ಆಟೋ ಚಾಲಕ ವಿನೋದ್(29) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ.
Advertisement
ಸೋಮವಾರ ವಿನೋದ್ ತನ್ನ ಸಹಚರರಾದ ಧರ್ಮ, ಯೋಗೇಶ್, ಈಶ್ವರ ಎಂಬವರೊಂದಿಗೆ ಬೇಟೆಗೆ ತೆರಳಿದ್ದರು. ಗ್ರಾಮದ ನದಿ ದಾಟಿ ಬೈಲುಕೊಪ್ಪ ಪೋಲಿಸ್ ಠಾಣಾ ವ್ಯಾಪ್ತಿಯ ಕಾಡಿಗೆ ತೆರಳಿದ್ದಾರೆ. ಆದರೆ ಮೂವರು ಮಾತ್ರ ಹಿಂತಿರುಗಿದ್ದರು. ವಿನೋದ್ ಮರಳಿ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಆತನ ಪತ್ನಿ ಅನುಷಾ ಬುಧವಾರ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಮಿಸ್ಸಿಂಗ್ ದೂರು ನೀಡಿದರು. ಆದರೆ ಇಂದು ಕಾವೇರಿ ನದಿಯಲ್ಲಿ ವಿನೋದ್ ಮೃತ ದೇಹ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
Advertisement
ಸೋಮವಾರ ಮಧ್ಯಾಹ್ನದ ವೇಳೆಗೆ ಈ ನಾಲ್ವರು ಬೇಟೆಗೆ ಊರಿನ ಮಧ್ಯೆಯೇ ಗನ್ ಹಿಡಿದುಕೊಂಡು ಹೋಗಿದ್ದಾರೆ. ಅವರು ಕಾವೇರಿ ನದಿಯನ್ನು ದಾಟಿಕೊಂಡು ಹೋಗುವುದನ್ನು ಇಡೀ ಊರಿನ ಜನರು ನೋಡಿದ್ದಾರೆ. ಆದರೆ ಅಂದು ಯೋಗೇಶ್, ಈಶ್ವರ ಮತ್ತು ಧರ್ಮ ಮನೆಗೆ ವಾಪಸ್ ಬಂದ ಬಳಿಕ ವಿನೋದ್ ಮನೆಗೆ ಆಗಾಗ ಹೋಗಿ ಆತ ಮರಳಿ ಬಂದಿದ್ದಾನಾ? ಎಂದು ಕೇಳಿದ್ದಾರೆ. ಹೀಗಾಗಿ ವಿನೋದ್ ಮನೆಯರು ಅನುಮಾನಗೊಂಡು, ನಿನ್ನೆ ಪತ್ನಿ ಅನುಷಾ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲು ಮಾಡಿದ್ದಾರೆ. ಇದನ್ನೂ ಓದಿ: ಪ್ರೇಯಸಿ ಜೊತೆ ಗಂಡನ ಫೋಟೋಸ್ ನೋಡಿ ನವವಿಹಾಹಿತೆ ಆತ್ಮಹತ್ಯೆ
ಇಂದು ಬೆಳಗ್ಗೆ ಬಾಳುಗೋಡು ವ್ಯಾಪ್ತಿಯ ಕಾವೇರಿ ನದಿ ದಂಡೆಯಲ್ಲಿ ವಿನೋದ್ ಮೃತದೇಹ ಪತ್ತೆಯಾಗಿದೆ. ಬೇಟೆಗೆ ಹೋಗಿದ್ದ ಸಂದರ್ಭ ಆಕಸ್ಮಿಕವಾಗಿ ಗುಂಡು ತಗುಲಿದೆಯೋ ಅಥವಾ ನದಿಯಲ್ಲಿ ಕಾಲು ಜಾರಿ ಬಿದ್ದಿದ್ದಾರೋ ಎನ್ನುವ ಅನುಮಾನ ಕುಟುಂಬಸ್ಥರಿಗೆ ಕಾಡಿದೆ. ಆದರೆ ಬೇಟೆಗೆ ತೆರಳಿದ್ದ ಯೋಗೇಶ್, ಈಶ್ವರ ಈಗ ತಲೆಮರೆಸಿಕೊಂಡಿದ್ದು, ಧರ್ಮ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದೀಗ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಧರ್ಮನನ್ನು ವಶಕ್ಕೆ ಪಡೆದು, ಮತ್ತಿಬ್ಬರ ಪತ್ತೆಗೆ ಶೋಧ ಕಾರ್ಯ ಮುಂದುವರೆಸಿದ್ದಾರೆ. ಆಕಸ್ಮಿಕ ಗುಂಡು ತಗಲಿ ವಿನೋದ್ ಸತ್ತನೋ ಅಥವಾ ಕಾಲು ಜಾರಿ ನದಿಗೆ ಬಿದ್ದು ಸತ್ತನೋ ತನಿಖೆ ನಂತರವಷ್ಟೇ ಸತ್ಯ ಬಯಲಿಗೆ ಬರಲಿದೆ. ಇದನ್ನೂ ಓದಿ: ಹೆರಿಗೆ ಶಸ್ತ್ರಚಿಕಿತ್ಸೆ ಬಳಿಕ ಬಾಣಂತಿ ಸಾವು – ಸರ್ಕಾರಿ ಆಸ್ಪತ್ರೆ ಎದುರು ಮೃತದೇಹವಿಟ್ಟು ಪ್ರತಿಭಟನೆ