ಹ್ಯಾಮಿಲ್ಟನ್: ನ್ಯೂಜಿಲೆಂಡ್ ವಿರುದ್ಧದ 4ನೇ ಏಕದಿನ ಪಂದ್ಯಕ್ಕೆ ನಾಯಕತ್ವ ವಹಿಸಿದ್ದ ರೋಹಿತ್ ಶರ್ಮಾ ತಂಡದ ಬ್ಯಾಟಿಂಗ್ ವೈಫಲ್ಯದ ಬಗ್ಗೆ ಮಾತನಾಡಿದ್ದು, ಸ್ವಿಂಗ್ ಹಾಗೂ ಕೆಟ್ಟ ಹೊಡೆತಗಳೇ ಸೋಲಿಗೆ ಕಾರಣ ಎಂದಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ರೋಹಿತ್, ಬಹುವರ್ಷಗಳ ಬಳಿಕ ಏಕದಿನ ಕ್ರಿಕೆಟ್ ನಲ್ಲಿ ತಂಡ ಕಳಪೆ ಪ್ರದರ್ಶನ ಇದಾಗಿದೆ. ಎದುರಾಳಿ ತಂಡದ ಬೌಲರ್ ಗಳು ಉತ್ತಮ ಬೌಲಿಂಗ್ ದಾಳಿಯನ್ನು ನಡೆಸಿದರು. ಆದರೆ ಇಂತಹ ಸಂದರ್ಭವನ್ನು ಎದುರಿಸುವ ಊಹೆ ಕೂಡ ಮಾಡಿರಲಿಲ್ಲ ಎಂದು ತಿಳಿಸಿದ್ದಾರೆ.
Advertisement
It's a special day for Rohit Sharma. Not only is he stand-in captain, but he's also playing his 200th ODI!
"A long journey, lots of ups and downs, but I am happy where I am," he says.
FOLLOW #NZvIND LIVE ⬇️ https://t.co/goloMnx9mZ pic.twitter.com/8DAYoY1Opx
— ICC (@ICC) January 31, 2019
Advertisement
ಹ್ಯಾಮಿಲ್ಟನ್ ಕ್ರೀಡಾಂಗಣದಲ್ಲಿ ಕಡಿಮೆ ಮೊತ್ತಕ್ಕೆ ಅಲೌಟ್ ಆದ ತಂಡ ಎಂಬ ಕೆಟ್ಟ ದಾಖಲೆಯನ್ನು ಟೀಂ ಇಂಡಿಯಾ ಪಡೆದುಕೊಂಡಿದೆ. ಈ ಹಿಂದೆ ಈ ಮೈದಾನದಲ್ಲಿ 122 ರನ್ ಕಡಿಮೆ ಮೊತ್ತವಾಗಿತ್ತು. ಇದರೊಂದಿಗೆ ರೋಹಿತ್ ಶರ್ಮಾ 200 ಏಕದಿನ ಪಂದ್ಯಗಳನ್ನು ಪೂರ್ಣಗೊಳಿಸಿದ್ದಾರೆ. ಭಾರತ ಪರ 14ನೇ ಆಟಗಾರರಾಗಿದ್ದು, ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ 79ನೇ ಆಟಗಾರರಾಗಿದ್ದಾರೆ. ಮಹತ್ವ ಪಂದ್ಯದಲ್ಲಿ 23 ಎಸೆತಗಳನ್ನು ಎದುರಿಸಿದ ರೋಹಿತ್ ಕೇವಲ 7 ರನ್ ಗಳಿಗೆ ಔಟಾಗುವ ಮೂಲಕ ಸ್ಮರಣೀಯ ಪಂದ್ಯದಲ್ಲಿ ಕಳಪೆ ಪ್ರರ್ದಶನ ನೀಡಿದರು. ಅಲ್ಲದೇ ಸರಣಿಯಲ್ಲಿ ಹ್ಯಾಟ್ರಿಕ್ ಅರ್ಧ ಶತಕಗಳಿಸುವ ಅವಕಾಶವನ್ನು ಕೈ ಚೆಲ್ಲಿದರು. ಇದನ್ನು ಓದಿ: ಭಾರತಕ್ಕೆ ಹೀನಾಯ ಸೋಲು – ಮೈಕಲ್ ವಾನ್‍ರನ್ನ ಟ್ರೋಲ್ ಮಾಡಿ ತಿರುಗೇಟು ಕೊಟ್ಟ ಅಭಿಮಾನಿಗಳು
Advertisement
ಇತ್ತ ಇದೇ ಪಂದ್ಯದಲ್ಲಿ ಯುವ ಆಟಗಾರ 19 ವರ್ಷದ ಶುಭ್ ಮನ್ ಗಿಲ್ ಏಕದಿನ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದರು. ಆಸ್ಟ್ರೇಲಿಯಾ ಸರಣಿಯಲ್ಲೇ ಶುಭ್ ಮನ್ ಗಿಲ್ ಪಾದಾರ್ಪಣೆ ಮಾಡುತ್ತಾರೆ ಎನ್ನಲಾಗಿತ್ತು. ನ್ಯೂಜಿಲೆಂಡ್ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ಧೋನಿ ಅವರಿಂದ ಕ್ಯಾಪ್ ಪಡೆದ ಶುಭ್ ಮನ್ ಗಿಲ್ ಭವಿಷ್ಯದ ಸ್ಟಾರ್ ಆಟಗಾರನಾಗುವ ವಿಶ್ವಾಸ ಮೂಡಿಸಿದ್ದಾರೆ.
Advertisement
https://twitter.com/ImFaisalabbas/status/1090834767153643521
Proud moment for young @RealShubmanGill as he receives his #TeamIndia cap from @msdhoni ???????? #NZvIND pic.twitter.com/2oRc4ozwZq
— BCCI (@BCCI) January 31, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv