ನವದೆಹಲಿ: ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಇದೇ ಡಿ.16 ರಂದು ಒಂದು ದೇಶ, ಒಂದು ಚುನಾವಣೆ (One Nation One Election) ಮಸೂದೆ ಮಂಡಿಸಲಿದ್ದಾರೆಂದು ಮೂಲಗಳು ತಿಳಿಸಿವೆ.
ಮಸೂದೆ ಮಂಡನೆ ನಂತರ ಚರ್ಚೆಗಾಗಿ ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ಕಳುಹಿಸಲಾಗುವುದು. ಇದನ್ನೂ ಓದಿ: ಒಂದು ದೇಶ ಒಂದು ಚುನಾವಣೆ- ಜಾಣ್ಮೆಯ ಹೆಜ್ಜೆಯಿಟ್ಟ ಕೇಂದ್ರ
ಅರ್ಜುನ್ ರಾಮ್ ಮೇಘವಾಲ್ ಅವರು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳ (ತಿದ್ದುಪಡಿ) ಮಸೂದೆ, 2024 ಅನ್ನು ಸಹ ಮಂಡಿಸಲಿದ್ದಾರೆ. ಕೇಂದ್ರಾಡಳಿತ ಪ್ರದೇಶಗಳ ಸರ್ಕಾರ ಕಾಯಿದೆ, 1963, ದೆಹಲಿ ಸರ್ಕಾರದ ರಾಷ್ಟ್ರೀಯ ರಾಜಧಾನಿ ಪ್ರದೇಶ ಕಾಯ್ದೆ, 1991 ಮತ್ತು ಜಮ್ಮುಗೆ ತಿದ್ದುಪಡಿ ಮಾಡಲು ಮತ್ತಷ್ಟು ಮಸೂದೆಯನ್ನು ಪರಿಚಯಿಸಲು ಮತ್ತು ಕಾಶ್ಮೀರ ಮರುಸಂಘಟನೆ ಕಾಯಿದೆ, 2019 ಮಸೂದೆಯನ್ನು ಮಂಡನೆ ಮಾಡಲಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದ ಸಂಪುಟ ಈಚೆಗೆ ಮಸೂದೆಗೆ ಒಪ್ಪಿಗೆ ನೀಡಿತ್ತು. ಒಪ್ಪಿಗೆ ಬೆನ್ನಲ್ಲೇ ಈಗ ಬಿಲ್ ಮಂಡಿಸಲು ತಯಾರಿ ನಡೆಸಲಾಗುತ್ತಿದೆ. ಇದನ್ನೂ ಓದಿ: ಕಿವಿ ಗಡಚಿಕ್ಕುವಂತೆ ಲೌಡ್ ಸ್ಪೀಕರ್ ಬಳಸಿದ್ದಕ್ಕೆ ಮಸೀದಿಗೆ ಬಿತ್ತು 2 ಲಕ್ಷ ದಂಡ