ನವದೆಹಲಿ: ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯೊಂದನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಎನ್‌ಡಿಎ ಸರ್ಕಾರ ಅನುಷ್ಠಾನಕ್ಕೆ ತರಲು ಹೊರಟಿದೆ. ಒಂದು ದೇಶ ಒಂದು ಚುನಾವಣೆ (One Nation, One Election) ಬಿಲ್ ಅನ್ನು ಮುಂಬರುವ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಸರ್ಕಾರ ಮಂಡಿಸಲಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಮಾರ್ಚ್‌ನಲ್ಲಿ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಒಂದು ದೇಶ ಒಂದು ಚುನಾವಣೆ ಕಾರ್ಯಸಾಧ್ಯತೆ ಬಗ್ಗೆ ವರದಿಯನ್ನು ನೀಡಿತ್ತು. ಯಾವಗಿಂದ ಆರಂಭಿಸಬೇಕು ಎಂದು ತಿಳಿಸದೇ ಈ ಇದನ್ನು ಹೇಗೆ ಅನುಷ್ಠಾನಕ್ಕೆ ತರಬಹುದು ಎಂದು ವರದಿಯಲ್ಲಿ ವಿವರಿಸಿತ್ತು. ಸದ್ಯ ವರದಿಯನ್ನು ಅಧ್ಯಯನ ಮಾಡಿರುವ ಸರ್ಕಾರ ಇದನ್ನು ಬಿಲ್ ಮೂಲಕ ಸಂಸತ್‌ನಲ್ಲಿ ಮಂಡಿಸಲು ಸಿದ್ಧತೆ ಆರಂಭಿಸಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ರಾಹುಲ್ ಗಾಂಧಿ ಭಾರತದ ನಂ.1 ಭಯೋತ್ಪಾದಕ: ಕೇಂದ್ರ ಸಚಿವ ವಿವಾದಾತ್ಮಕ ಹೇಳಿಕೆ
Advertisement
Advertisement
ಕಳೆದ ಆಗಸ್ಟ್ 15 ರಂದು ಕೆಂಪು ಕೋಟೆಯಿಂದ ಭಾಷಣ ಮಾಡಬೇಕಿದ್ದಾಗಲೂ ಪ್ರಧಾನಿ ಮೋದಿ, ಒಂದು ದೇಶ ಒಂದು ಚುನಾವಣೆಯ ಅಗತ್ಯವನ್ನು ಒತ್ತಿ ಹೇಳಿದ್ದರು. ಒಂದು ದೇಶ ಒಂದು ಚುನಾವಣೆಯ ಜೊತೆಗೆ ಜಮ್ಮು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡುವ ಬಿಲ್ ಕೂಡಾ ಮಂಡನೆಯಾಗಲಿದೆ ಎನ್ನಲಾಗಿದೆ.