ನವದೆಹಲಿ: ʻಒಂದು ದೇಶ-ಒಂದು ಚುನಾವಣೆʼ ಮಸೂದೆಯನ್ನು (One Nation One Election Bill) ಪ್ರಸಕ್ತ ಅಧಿವೇಶನದಲ್ಲೇ ಮಂಡಿಸುವ ಸಾಧ್ಯತೆಗಳಿವೆ ಎಂದು ಉನ್ನತ ಮೂಲಗಳು ತಿಳಿಸಿರುವುದಾಗಿ ಸುದ್ದಿಸಂಸ್ಥೆಗಳು ವರದಿ ಮಾಡಿವೆ.
ʻಒಂದು ದೇಶ ಒಂದು ಚುನಾವಣೆʼ ಕುರಿತ ರಾಮನಾಥ್ ಕೋವಿಂದ್ ಸಮಿತಿಯ (Ram Nath Kovind Committee )ವರದಿಗೆ ಸಂಪುಟ ಈಗಾಗಲೇ ಅನುಮೋದನೆ ನೀಡಿದೆ. ಸರ್ಕಾರವು ಈಗ ಮಸೂದೆಯ ಬಗ್ಗೆ ಒಮ್ಮತವನ್ನು ರೂಪಿಸಲು ಬಯಸಿದೆ ಮತ್ತು ಅದನ್ನು ವಿವರವಾದ ಚರ್ಚೆಗಾಗಿ ಜಂಟಿ ಸಂಸದೀಯ ಸಮಿತಿ (JPC)ಗೆ ಕಳುಹಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ ಎನ್ನಲಾಗಿದೆ. ಇದನ್ನೂ ಓದಿ: ಎರಡೂವರೆ ತಿಂಗಳಲ್ಲಿ ಪ್ರೌಢಶಾಲಾ ಶಿಕ್ಷಕರಿಗೆ ಪದೋನ್ನತಿ: ಮಧು ಬಂಗಾರಪ್ಪ
Advertisement
Advertisement
ಜಂಟಿ ಸಂಸದೀಯ ಸಮಿತಿ ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಲಿದೆ. ಈ ಪ್ರಕ್ರಿಯೆಯಲ್ಲಿ ಇತರ ಮಧ್ಯಸ್ಥಗಾರರೂ ಭಾಗಿಯಾಗಲಿದ್ದಾರೆ. ದೇಶದಾದ್ಯಂತ ಇರುವ ಬುದ್ಧಿಜೀವಿಗಳು, ರಾಜಕೀಯ ತಜ್ಞರು ಹಾಗೂ ಎಲ್ಲಾ ರಾಜ್ಯಗಳ ವಿಧಾನಸಭಾ ಸ್ಪೀಕರ್‌ಗಳನ್ನು ಚರ್ಚೆಗೆ ಕರೆಯಲಿದೆ. ಸಾಮಾನ್ಯ ಜನರ ಅಭಿಪ್ರಾಯವನ್ನೂ ಸಮಿತಿ ಸಂಗ್ರಹಿಸಲಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಕೃಷಿ ವಿಸ್ತೀರ್ಣಾಧಿಕಾರಿಯಿಂದ ಭಾರಿ ವಂಚನೆ – ಬರೋಬ್ಬರಿ 40 ಲಕ್ಷ ಪಂಗನಾಮ
Advertisement
Advertisement
ʻಒಂದು ರಾಷ್ಟ್ರ, ಒಂದು ಚುನಾವಣೆʼ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರಕ್ಕೆ ಸಂಸತ್ತಿನಲ್ಲಿ 3ನೇ ಎರಡರಷ್ಟು ಬಹುಮತದ ಅವಶ್ಯಕತೆಯಿದೆ. ರಾಜ್ಯಸಭೆಯ 245 ಸ್ಥಾನಗಳಲ್ಲಿ ಎನ್‌ಡಿಎ 112, ವಿರೋಧ ಪಕ್ಷಗಳು 85 ಸ್ಥಾನಗಳನ್ನು ಒಳಗೊಂಡಿವೆ. 3ನೇ ಎರಡರಷ್ಟು ಬಹುಮತಕ್ಕೆ ಸರ್ಕಾರಕ್ಕೆ ಕನಿಷ್ಠ 164 ಮತಗಳ ಅಗತ್ಯವಿದೆ. ಇನ್ನೂ ಲೋಕಸಭೆಯಲ್ಲಿ ಎನ್‌ಡಿಎ 545 ಸ್ಥಾನಗಳಲ್ಲಿ 292 ಸ್ಥಾನಗಳನ್ನು ಹೊಂದಿದೆ. 3ನೇ ಎರಡರಷ್ಟು ಬಹುಮತಕ್ಕೆ 364 ಮತಗಳ ಅಗತ್ಯವಿದೆ. ಪ್ರಸ್ತುತ ಚುನಾವಣಾ ವ್ಯವಸ್ಥೆಯು ಹಣ, ಸಮಯ ಹಾಗೂ ಶ್ರಮವನ್ನು ವ್ಯರ್ಥ ಮಾಡುತ್ತಿವೆ. ಹಾಗಾಗಿ ಒಂದು ರಾಷ್ಟ್ರ ಒಂದು ಚುನಾವಣೆ ಕಾನೂನು ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ತಿಳಿಸಿದೆ.
ಇನ್ನೂ ಸಂಸತ್‌ನಲ್ಲಿ ಅದಾನಿ ವಿಚಾರದ ಚರ್ಚೆಗೆ ಪಟ್ಟು ಹಿಡಿದಿರುವ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಸದನದ ಹೊರಗೆ ಹೋರಾಟ ಮುಂದುವರೆಸಿವೆ. ಇವತ್ತು ಇನ್ನೊಂದು ಹೆಜ್ಜೆ ಮುಂದೆ ಹೋದ ರಾಹುಲ್ ಗಾಂಧಿ, ಅದಾನಿ-ಮೋದಿ ಮುಖವಾಡ ಧರಿಸಿದವರ ಅಣಕು ಸಂದರ್ಶನ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಬಿಜೆಪಿ ಕೌಂಟರ್ ಕೊಟ್ಟಿದೆ. ಭಾರತ ವಿರೋಧಿ ನಿಲುವು ಹೊಂದಿರುವ ಅಮೆರಿಕ ಉದ್ಯಮಿ ಸೊರೊಸ್ ಸಂಸ್ಥೆಯ ಜೊತೆ ಸೋನಿಯಾ ಗಾಂಧಿ ಕೈಜೋಡಿಸಿದ್ದಾರೆ ಎಂದು ಪುನರ್ ಆರೋಪ ಮಾಡಿದೆ.
ಭಾರತ ವಿರೋಧಿ ಶಕ್ತಿಗಳ ಜೊತೆ ಕೆಲಸ ಮಾಡುವವರ ವಿರುದ್ಧ ಎಲ್ಲಾ ಪಕ್ಷಗಳು ಒಂದಾಗಬೇಕು ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಕರೆ ನೀಡಿದ್ದಾರೆ. ಈ ವಿಚಾರ ಸಂಸತ್‌ನಲ್ಲಿ ಗದ್ದಲಕ್ಕೆ ಕಾರಣವಾಗಿದೆ. ಇದನ್ನೂ ಓದಿ: New Delhi | ಬಡ ವ್ಯಾಪಾರಿಗಳ ತಳ್ಳುಗಾಡಿಗಳ ಮೇಲೆ ಕೇಸರಿ ಧ್ವಜ ನೆಟ್ಟ ಬಿಜೆಪಿ ಕೌನ್ಸಿಲರ್!