ಬೆಂಗಳೂರು: ನಟಿ ಸಂಜನಾ ಗಲ್ರಾಣಿ ಅವರ #MeToo ಆರೋಪದ ಬೆನ್ನಲ್ಲೇ ಇದೀಗ ಶೃತಿ ಹರಿಹರನ್ ಕೂಡ ಫೇಮಸ್ ನಟನ ವಿರುದ್ಧವೇ ಆರೋಪವೊಂದನ್ನು ಮಾಡಿದ್ದಾರೆ.
ಹೌದು. ನಟಿ ಶೃತಿ ಹರಿಹರನ್ ಅವರು ನಟ ಅರ್ಜುನ್ ಸರ್ಜಾ ಅವರ ವಿರುದ್ಧ ಈ ಆರೋಪ ಎಸಗಿದ್ದಾರೆ. ಮ್ಯಾಗಜೀನ್‍ವೊಂದರ ಸಂದರ್ಶನದ ವೇಳೆ ನಟ ಅರ್ಜುನ್ ವಿರುದ್ಧ ಆರೋಪ ಮಾಡಿದ ಶೃತಿ ಹರಿಹರನ್, ವಿಸ್ಮಯ ಚಿತ್ರೀಕರಣದ ವೇಳೆ ತನ್ನ ಮೇಲಾದ ಲೈಂಗಿಕ ಕಿರುಕುಳವಾದ ಅನುಭವವನ್ನು ಬಿಚ್ಚಿದ್ದಾರೆ. ಇದನ್ನೂ ದಿನ: 50ಕ್ಕೂ ಹೆಚ್ಚು ಕಿಸ್ಸಿಂಗ್ ಸೀನ್ ಮಾಡಿಸಿದ್ರು- ಸ್ಯಾಂಡಲ್‍ವುಡ್ ನಿರ್ದೇಶಕನ ವಿರುದ್ಧ ಸಂಜನಾ #Metoo ಆರೋಪ
Advertisement
Advertisement
ಆರೋಪವೇನು?:
ಕಳೆದ ವರ್ಷ ‘ವಿಸ್ಮಯ’ ಅನ್ನೋ ಸಿನಿಮಾವೊಂದನ್ನು ನಾನು ಮಾಡಿದ್ದೆ. ಚಿತ್ರದಲ್ಲಿ ಅರ್ಜುನ್ ಅರ್ಜಾ ಅವರು ನನ್ನ ಸಹನಟನಾಗಿ ಅಭಿನಯಿಸಿದ್ದರು. ‘ವಿಸ್ಮಯ’ ಸಿನಿಮಾಕ್ಕೂ ಮೊದಲು ನಾನು ಹಲವು ಸಿನಿಮಾಗಳನ್ನು ಮಾಡಿದ್ದೇನೆ. ಹಲವು ನಟರ ಜೊತೆಯೂ ಅಭಿನಯಿಸಿದ್ದೇನೆ. ಇಂದಿಗೂ ನನಗೆ ಬೇರೆ ನಟರ ಜೊತೆ ನಟಿಸುವಾಗ ಯಾವ ತೊಂದರೆಗಳೂ ಆಗಿಲ್ಲ. ಚಿತ್ರೀಕರಣದ ಸಂದರ್ಭದಲ್ಲಿ ನಾವು ಪರಸ್ಪರ ಗೌರವದಿಂದಲೇ ನಡೆದುಕೊಳ್ಳುತ್ತಿದ್ದೇವು. ನಾಯಕ-ನಾಯಕಿಯ ನಡುವಿನ ಪ್ರಣಯದ ದೃಶ್ಯಗಳನ್ನು ಚಿತ್ರೀಕರಿಸುವ ಸಂದರ್ಭಗಳಲ್ಲಿಯೂ ಕಲಾವಿದರ ನಡುವೆ ಬಹುಸೂಕ್ಷ್ಮವಾದ ಒಂದು ಗಡಿ ರೇಖೆ ಇರುತ್ತದೆ. ಅದನ್ನು ಮೀರಿ ನಾವು ನಡೆದುಕೊಳ್ಳುತ್ತಿರಲಿಲ್ಲ. ಒಂದು ವೇಳೆ ಆ ರೇಖೆಯನ್ನು ದಾಟಿದ್ರೆ ಹೆಣ್ಣಿಗೆ ಇರುಸು ಮುರುಸು ಉಂಟಾಗಲು ಆರಂಭವಾಗುತ್ತದೆ. ‘ವಿಸ್ಮಯ’ ಚಿತ್ರದ ಶೂಟಿಂಗ್ ವೇಳೆ ಆಗಿದ್ದು ಇದೇ. ಚಿತ್ರೀಕರಣದ ವೇಳೆ ನಟ ಅರ್ಜುನ್ ಸರ್ಜಾ ಅವರು ಗಡಿರೇಖೆ ದಾಟಿದ್ದರು ಅಂತ ಅವರು ಘಟನೆಯ ಮೆಲುಕು ಹಾಕಿದ್ರು. ಇದನ್ನೂ ದಿನ: #MeToo ಸುಳಿಯಲ್ಲಿ ಕೇಂದ್ರ ಸಚಿವ ಸದಾನಂದಗೌಡ!
Advertisement
I stand with you @sanjjanagalrani – no director can add scenes especially intimate ones without the actor's consent . Directors can't take advantage of a new comer . #raviShrivastav your #TimesUp #MeTooIndia #kfistories https://t.co/iWpVoRqCfX
— sruthihariharan (@sruthihariharan) October 20, 2018
Advertisement
ಚಿತ್ರದಲ್ಲಿ ನಾನು ಅವರ ಹೆಂಡತಿಯಾಗಿ ನಟಿಸುತ್ತಿದ್ದೆ, ಅದರ ಪ್ರ್ಯಾಕ್ಟೀಸ್ ಮಾಡುತ್ತಿದ್ದೆವು. ಆಗ ಸರ್ಜಾ ‘ಇನ್ನೊಂಚೂರು ಹೀಗೆ ಪ್ರಾಕ್ಟೀಸ್ ಮಾಡಬಹುದಲ್ವಾ?’ ಅಂತ ಹೇಳಿ ಅವರು ನನ್ನನ್ನು ಜೋರಾಗಿ ತಬ್ಬಿಕೊಂಡರು. ಅವರ ಆ ಅಪ್ಪುಗೆಯಿಂದ ಒಮ್ಮೆಲೆ ನಾನು ತಬ್ಬಿಬ್ಬಾಗಿದ್ದು, ಆ ವರ್ತನೆ ತುಂಬಾನೇ ಅಸಹ್ಯವಾಗಿತ್ತು. ಇದರಿಂದ ನನಗೆ ಇರಿಸು ಮುರುಸು ಉಂಟಾಗಿದ್ದು, ಕೂಡಲೇ ನಿರ್ದೇಶಕರ ಬಳಿ ತೆರಳಿ ‘ಇನ್ನು ಮುಂದೆ ನಾನು ರಿಹರ್ಸಲ್ ಗೆ ಬರಲ್ಲ, ಬರೀ ಶೂಟಿಂಗ್ ಗಷ್ಟೇ ಕರೆಯಿರಿ’ ಅಂತ ಹೇಳಿ ಬಂದುಬಿಟ್ಟೆ. ಆ ಬಳಿಕ ನಾನು ಬರೀ ಶೂಟಿಂಗ್ ಗೆ ಮಾತ್ರ ಹೋಗಿ ಬರುತ್ತಿದ್ದೆ ಅಂತ ಶೃತಿ ಹೇಳಿದ್ರು. ಇದನ್ನೂ ದಿನ: #MeToo ಅಭಿಯಾನವನ್ನ ಕೆಲವರು ಪ್ರಚಾರಕ್ಕೆ ಬಳಸಿಕೊಳ್ತಿದ್ದಾರೆ: ನಟಿ ರಾಗಿಣಿ
ಇಷ್ಟೆಲ್ಲಾ ಆದ್ರೂ ಅರ್ಜುನ್ ಸರ್ಜಾ ಮಾತ್ರ ವಿಚಲಿತನಾದಂತೆ ಕಾಣಲಿಲ್ಲ. ಯಾಕಂದ್ರೆ ಅದಾದ ಬಳಿಕ ಅವರು ನನ್ನ ಜೊತೆ ಮಾತನಾಡುವಾಗಲೂ ಬಳಸಿದ ಭಾಷೆ ಸಭ್ಯವಾಗಿರಲಿಲ್ಲ. ಪದೇ ಪದೇ ಡಿನ್ನರ್ ಗೆ ಕರೆಯುತ್ತಿದ್ದರು. ‘ರೆಸಾರ್ಟ್ ಗೆ ಹೋಗೋಣ ಬಾ’ ಎಂದು ಕರೆಯಲು ಆರಂಭಿಸಿದ್ರು. ಹೀಗೆ ಕರೆಯುವಾಗ ನಾನು ನೇರವಾಗಿ ‘ಇಲ್ಲ, ನಾನು ಬರಲ್ಲ’ ಅಂತ ಹೇಳುತ್ತಿದ್ದೆನು. ನನ್ನ ಈ ಮಾತುಗಳನ್ನೂ ಅವರು ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ‘ನೋ ಅಂದ್ರೆ ನೋ’ ಎಂಬುದರ ಅರ್ಥವೇ ಅವರಿಗೆ ಆಗುತ್ತಿಲ್ಲವಲ್ಲ ಅಂತ ನನಗೆ ನಿಜವಾಗಿಯೂ ಅಚ್ಚರಿಯಾಗುತ್ತಿತ್ತು. ಯಾಕಂದ್ರೆ ಅವರಿಗೆ ಹೀಗೆ ಕರೆದಾಗ ಯಾರೂ `ನೋ’ ಅಂತ ಹೇಳಿರಲಿಲ್ಲವೋ ಏನೋ, ಅದಕ್ಕೆ ಅವರು ನನ್ನ ನೇರ ಮಾತುಗಳನ್ನು ಕಡೆಗಣಿಸುತ್ತಿದ್ದರು ಅಂತ ಅವರು ತನಗಾದ ಅನುಭವವನ್ನು ಬಿಚ್ಚಿಟ್ಟರು. ಇದನ್ನೂ ದಿನ: #MeToo ಅಭಿಯಾನ – ರವಿಚಂದ್ರನ್ ಬಗ್ಗೆ ಸತ್ಯ ಬಿಚ್ಚಿಟ್ಟ ಖುಷ್ಬೂ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv