ಬಳ್ಳಾರಿ: ವಿಶ್ವವಿಖ್ಯಾತ ಹಂಪಿಯ ಕಲ್ಲಿನ ರಥದ ಮಾದರಿಯ ಮತ್ತೊಂದು ಕಲ್ಲಿನ ರಥದ ಕಲಾಕೃತಿ ಮಾಡುವುದು ಕಷ್ಟಸಾಧ್ಯ. ಆದರೆ ಅಂತಹ ಮಾದರಿ ಕಲಾಕೃತಿಯನ್ನು ಬಳ್ಳಾರಿಯ ಶಿಲ್ಪಕಲಾ ಶಿಬಿರದಲ್ಲಿ ಕೆತ್ತನೆ ಮಾಡಲಾಗಿದೆ.
ಹೌದು, ಜಿಲ್ಲೆಯ ಶಿಲ್ಪಕಲಾ ಅಕಾಡೆಮಿ ಹಾಗೂ ರಂಗಭಾರತಿ ವತಿಯಿಂದ ಹೂವಿನಹಡಗಲಿಯಲ್ಲಿ ನಡೆದ ಶಿಲ್ಪ ಕಲಾ ಶಿಬಿರದಲ್ಲಿ ಕೆತ್ತನೆ ಮಾಡಲಾಗಿದೆ. ದೇಶ ವಿದೇಶದಲ್ಲಿನ ಹಲವಾರು ಅಪರೂಪದ ಶಿಲ್ಪಕಲಾ ಕೃತಿಗಳ ಮಾದರಿ ಕಲಾಕೃತಿಗಳ ಕೆತ್ತನೆ ಮಾಡಿರುವುದು ಇದೀಗ ಎಲ್ಲರ ಕಣ್ಮನ ಸೆಳೆಯುತ್ತಿದೆ.
Advertisement
Advertisement
13 ದಿನಗಳ ಕಾಲ ಹಗಲಿರುಳು ಎನ್ನದೇ ಕೆತ್ತನೆ ಮಾಡಿರುವ ಕಲಾಕೃತಿಗಳು ಇದೀಗ ಎಲ್ಲರ ಕಣ್ಮನ ಸೆಳೆಯುತ್ತಿದೆ. ವಿಶ್ವ ವಿಖ್ಯಾತ ಹಂಪಿಯ ಸ್ಮಾರಕಗಳು, ಬದಾಮಿ ಚಾಲುಕ್ಯರ ಕಾಲದ ಕಲ್ಲಿನ ಕಲಾಕೃತಿಗಳನ್ನು ಇಲ್ಲಿ ಕಾಣಬಹುದಾಗಿದೆ.
Advertisement
ಹಾಸನ, ಉತ್ತರ ಕನ್ನಡ, ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಭಾಗದ ಶಿಲ್ಪಕಲಾವಿದರು 13 ದಿನಗಳ ಶಿಬಿರದಲ್ಲಿ ಕೃಷ್ಣಶಿಲೆಯ ಕಲ್ಲಿನಲ್ಲಿ ಹಂಪಿಯ ಕಲ್ಲಿನ ರಥ, ಬದಾಮಿ ಚಾಲುಕ್ಯರ ಕಲಾಕೃತಿಗಳು. ಕಾಂಬೋಡಿಯಾದ ಬುದ್ದ, ಅಫ್ಘಾನಿಸ್ತಾನದ ಬುದ್ದ, ಪಾಸ್ಟಿಂಗ್ ಬುದ್ದ, ಗಾಂಧಾರ ಶೈಲಿಯ ಬುದ್ದ, ಜ್ಞಾನದ ಬೆಳವಣಿಗೆಗೆ ಪುಸ್ತಕಗಳೆ ಆಧಾರ ಎನ್ನುವಂತಹ ಸಮಕಾಲಿನ ಶಿಲ್ಪ ಕಲಾಕೃತಿಗಳನ್ನು ಕೆತ್ತನೆ ಮಾಡಿದ್ದಾರೆ. ಅಲ್ಲದೇ ಆಮೆ, ವಿಶ್ವ, ಪುಸ್ತಕ, ಮರ ಹೊಂದಿರುವ ಸಮಕಾಲಿನ ಶಿಲ್ಪಗಳ ಕಲಾಕೃತಿಗಳು ಸೇರಿದಂತೆ ವಿವಿಧ ಕಲಾಕೃತಿಗಳು ನೋಡುಗರ ಕಣ್ಮನ ಸೆಳೆಯುತ್ತಿವೆ.
Advertisement
ಇತಂಹ ಶಿಬಿರವನ್ನು ಆಯೋಜನೆ ಮಾಡಿದ್ದು ನಮಗೆ ಹೆಮ್ಮೆಯ ಸಂಗತಿಯಾಗಿದೆ. 13 ದಿನಗಳ ಅಲ್ಪ ಅವಧಿಯಲ್ಲೇ ಅಪರೂಪದ ಶಿಲ್ಪ ಕಲಾಕೃತಿಗಳನ್ನು ರಚಿಸಿರುವುದು ನಿಜಕ್ಕೂ ಅದ್ಭುತ ಸಾಧನೆಯಾಗಿದೆ. ಇಂತಹ ಇನ್ನಷ್ಟೂ ಶಿಲ್ಪಕಲಾ ಶಿಬಿರಗಳು ನಡೆದಲ್ಲಿ ಮತ್ತಷ್ಟೂ ಅಪರೂಪದ ಶಿಲ್ಲಕಲಾಕೃತಿಗಳು ಹೊರಹೊಮ್ಮುವುದರಲ್ಲಿ ಎರಡು ಮಾತಿಲ್ಲ ಎಂದು ಶಿಬಿರದ ಆಯೋಜಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews