ಬೆಂಗಳೂರು: ಡಿ.ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‍ನ ಯಾವುದೇ ನಾಯಕರ ಪ್ರಯತ್ನ ಯಶಸ್ವಿಯಾಗಲ್ಲ. ಅದು ಅವರದ್ದು ವ್ಯರ್ಥ ಪ್ರಯತ್ನ. ನೋಡ್ತಾ ಇರಿ ಕಾಂಗ್ರೆಸ್‍ನ ಹಲವು ಶಾಸಕರು ಬಿಜೆಪಿಗೆ ಬರ್ತಾರೆ. ಕಾದು ನೋಡಿ ಯಾರ್ಯಾರು ಬರ್ತಾರೆ ಅಂತ, ನಿಮಗೆ ಶೀಘ್ರದಲ್ಲಿ ಗೊತ್ತಾಗುತ್ತದೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
Advertisement
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಎಸ್‍ವೈ, ಬಿಜೆಪಿ ಶಾಸಕರನ್ನು ಡಿ.ಕೆ ಶಿವಕುಮಾರ್ ಸೆಳೆಯುವುದರಲ್ಲಿ ಯಾವುದೇ ಅರ್ಥ ಇಲ್ಲ. ನಮ್ಮ ಯಾವ ಶಾಸಕರು ಪಕ್ಷ ಬಿಟ್ಟು ಹೋಗುವುದಿಲ್ಲ. ಅದು ಅವರ ವ್ಯರ್ಥ ಪ್ರಯತ್ನ. ಕಾಂಗ್ರೆಸ್ ಶಾಸಕರೇ ನಮ್ಮ ಜೊತೆ ಬರುತ್ತಾರೆ. ಅವರು ಯಾರು, ಯಾರು ಅಂತ ನಿಮಗೆ ಸ್ವಲ್ಪ ದಿನದಲ್ಲೇ ಗೊತ್ತಾಗುತ್ತದೆ. ಕಾಂಗ್ರೆನವರು ಇವತ್ತು ಸೈಕಲ್ ನಲ್ಲಿ ಅಧಿಕಾರಕ್ಕಾಗಿ ವಿಧಾನಸೌಧಕ್ಕೆ ಬರುತ್ತಾರೆ. ಅವರಿಗಿಂತ ಮೊದಲು ಬಿಜೆಪಿಯವರು ಕಾರು, ಸ್ಕೂಟರ್ ಬೈಕ್ ನಲ್ಲಿ ಬಂದು ವಿಧಾನಸೌಧ ಸೇರ್ಕೊತ್ತೀವಿ ಎಂದು ಕಾಂಗ್ರೆಸ್ ಸೈಕಲ್ ಜಾಥಾಕ್ಕೆ ಬಿಎಸ್‍ವೈ ವ್ಯಂಗ್ಯವಾಡಿದರು. ಇದನ್ನೂ ಓದಿ: ಯಾವುದೇ ಪಕ್ಷ ಆಡಳಿತದಲ್ಲಿ ಇರಲಿ, ಬೆಲೆ ಸತತವಾಗಿ ಹೆಚ್ಚಳವಾಗಿದೆ: ಬೊಮ್ಮಾಯಿ
Advertisement
Advertisement
ಕಾಂಗ್ರೆಸ್‍ನ ಸ್ನೇಹಿತರು ಎತ್ತಿನಗಾಡಿ, ಸೈಕಲ್‍ನಲ್ಲಿ ವಿಧಾನಸೌಧಕ್ಕೆ ಬರುವ ಮುನ್ನ ನಾವು ಬೈಕ್, ಕಾರಿನಲ್ಲಿ 140 ಜನ ಬಂದು ವಿಧಾನಸೌಧದಲ್ಲಿ ಕುಳಿತುಕೊಂಡಿರುತ್ತೇವೆ. ಆ ಬಗ್ಗೆ ಯಾವುದೇ ಅನುಮಾನ ಬೇಡ. ಕಾಂಗ್ರೆಸ್‍ನವರು ಮುಂದೆ ರಾಜ್ಯದಲ್ಲಿ ಅಧಿಕಾರಕ್ಕಾಗಿ ಅವರ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ನಾವು 140 ಸ್ಥಾನ ಗೆದ್ದೇ ಗೆಲ್ತೇವೆ. ಅದರಲ್ಲಿ ಯಾವುದೇ ಅನುಮಾನ ಬೇಡ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಅವರನ್ನು ನಾನೇ ಬಿಜೆಪಿಗೆ ಕರೆ ತರುತ್ತೇನೆ: ರಾಜೂ ಗೌಡ
Advertisement