ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿ ಅಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಮೋಹನ್ ನಾಯಕ್ ಬಂಧಿತ ವ್ಯಕ್ತಿಯಾಗಿದ್ದು, ಎಸ್‍ಐಟಿ ಅಧಿಕಾರಿಗಳು ಮೋಹನ್ ನಾಯಕ್ ನನ್ನು ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ. ಈಗಾಗಲೇ ಬಂಧಿತರಾಗಿರುವ ಪರಶುರಾಮ್ ವಾಗ್ಮೋರೆ ಮತ್ತು ಅಮೂಲ್ ಕಾಳೆ ಇಬ್ಬರಿಗೂ ಮೋಹನ್, ಬೆಂಗಳೂರಿನ ಸುಂಕದಕಟ್ಟೆಯಲ್ಲಿ ಬಾಡಿಗೆ ಮನೆಯೊಂದನ್ನು ಕೊಡಿಸಿದ್ದನು ಎಂಬ ಮಾಹಿತಿಗಳು ಲಭ್ಯವಾಗಿವೆ.
Advertisement
ಮೋಹನ್ ನಾಯಕ್ ಇಬ್ಬರಿಗೂ ಯಾವ ಕಾರಣಕ್ಕಾಗಿ ಮನೆಯನ್ನು ಬಾಡಿಗೆಗೆ ಕೊಡಿಸಿದ್ದನು? ಮೋಹನ್ ಗೆ ಮೊದಲೇ ಗೌರಿ ಲಂಕೇಶ್ ಹತ್ಯೆಯ ವಿಚಾರ ತಿಳಿದಿತ್ತಾ? ಈಗಾಗಲೇ ಬಂಧಿತರಾಗಿರುವ ಆರೋಪಿಗಳು ಹೇಗೆ ಪರಿಚಯ? ಎಂಬಿತ್ಯಾದಿ ಪ್ರಶ್ನೆಗಳ ಮುಂದಿರಿಸಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
Advertisement
ಮೋಹನ್ ನಾಯಕ್ ನನ್ನು ಜುಲೈ 24ರವರೆಗೆ ಎಸ್ ಐಟಿ ಪೊಲೀಸ್ ಅಧಿಕಾರಿಗಳ ವಶಕ್ಕೆ ನೀಡಲಾಗಿದೆ. ವಿಚಾರಣೆಯಲ್ಲಿ ಮತ್ತಷ್ಟು ಸ್ಫೋಟಕ ಮಾಹಿತಿಗಳು ಹೊರ ಬೀಳುವ ಸಾಧ್ಯತೆಗಳಿವೆ.