ಎಸ್‌ಎಂ ಕೃಷ್ಣ (SM Krishna) ಕಾಂಗ್ರೆಸ್ ಸೇರಿದ್ದೇ ಒಂದು ಇಂಟರೆಸ್ಟಿಂಗ್ ಸ್ಟೋರಿ. ಇಂದಿರಾ ಗಾಂಧಿ (Indira Gandhi) ಅವರ ಸಭೆಯಲ್ಲಿ ನಡೆದ ಒಂದು ಘಟನೆ ಎಸ್‌ಎಂ ಕೃಷ್ಣ (SM Krishna) ಅವರ ಜೀವನವನ್ನೇ ಬದಲಾಯಿಸಿತು.
ಹೌದು. ಅಮೆರಿಕದಿಂದ ಬಂದು ಪ್ರಜಾ ಸೋಶಿಯಲಿಸ್ಟ್ ಪಕ್ಷದಿಂದ ಶಾಸಕರಾಗಿ ಎಸ್‌ಎಂ ಕೃಷ್ಣ ಆಯ್ಕೆಯಾಗಿದ್ದರು. 1968ರ ಮಂಡ್ಯ (Mandya) ಲೋಕಸಭೆಯ ಉಪಚುನಾವಣೆಯಲ್ಲಿ ಗೆದ್ದು ಮೊದಲ ಬಾರಿಗೆ ಸಂಸತ್ ಪ್ರವೇಶಿಸುತ್ತಾರೆ. ಈ ಸಂದರ್ಭದಲ್ಲಿ ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿ ದೇಶವನ್ನು ಮುನ್ನಡೆಸುತ್ತಿರುತ್ತಾರೆ.
Advertisement
ಒಂದು ದಿನ ದೆಹಲಿಯಲ್ಲಿ ಇಂದಿರಾಗಾಂಧಿ (Indira Gandhi) ನೇತೃತ್ವದಲ್ಲಿ ಸಭೆಯೊಂದು ಆಯೋಜನೆ ಆಗುತ್ತದೆ. ಸಭೆ ಆರಂಭವಾದ ನಂತರ ನಂತರ ಸಭೆಯ ಅಜೆಂಡಾವನ್ನು ಓದಬೇಕಿದ್ದ ಇಂದಿರಾಗಾಂಧಿ ಅವರ ಗಂಟಲು ಕೈಕೊಟ್ಟಿತ್ತು. ಹೀಗಾಗಿ ತಮ್ಮೆದುರಿಗಿದ್ದ ಅಜೆಂಡಾವನ್ನು ಓದಲಾಗದೇ ಇಂದಿರಾಗಾಂಧಿ ಮೌನವಾಗಿ ಸಭೆಯ ಸುತ್ತ ಕಣ್ಣಾಡಿಸುತ್ತಿದ್ದರು.
Advertisement
Advertisement
ಸಭೆಯಲ್ಲಿ ಭಾಗವಹಿಸಿದ್ದ ಗಣ್ಯ ಅತಿಥಿಗಳು ತಮ್ಮತ್ತಲೇ ನೋಡುತ್ತಿದ್ದಾರೆ. ಹೀಗಾಗಿ ಮುಂದೇನು ಮಾಡಬೇಕು ಅಂತ ಇಂದಿರಾ ಯೋಚಿಸುತ್ತಿದ್ದಂತೆಯೇ ಸಭೆಯ ಕೊನೆಯಲ್ಲಿ ನಿಂತಿದ್ದ ಯುವ ಸಂಸದ ಕೃಷ್ಣ ಅವರು ಕಣ್ಣಿಗೆ ಕಾಣಿಸಿದ್ದಾರೆ. ಈ ಸಭೆಯಲ್ಲಿ ಭಾಗವಹಿಸಿದ್ದ ಕೃಷ್ಣ ಅವರಿಗೆ ಕೂರಲು ಚೇರ್ ಸಿಕ್ಕಿರಲಿಲ್ಲ. ಹೀಗಾಗಿ ನಿಂತುಕೊಂಡು ಚೇರ್ ಹುಡುಕುತ್ತಿದ್ದ ಅವರಿಗೆ ಒಂದು ಚೇರ್ ಕಾಣಿಸಿದೆ. ಆದರೆ ಆ ಚೇರ್ ಸ್ವತ: ಪ್ರಧಾನಿ ಇಂದಿರಾಗಾಂಧಿ ಅವರ ಪಕ್ಕದ್ದಲ್ಲಿ ಇದ್ದ ಕಾರಣ ಮುಂದೇನು ಮಾಡಬೇಕು ಎನ್ನುವಂತೆ ಅವರು ಇಂದಿರಾ ಕಡೆ ನೋಡಿದ್ದಾರೆ. ಆ ಕ್ಷಣದಲ್ಲಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ಕೃಷ್ಣ ಅವರ ಕಣ್ಣು ಸಂಧಿಸಿದೆ. ಕೃಷ್ಣ ಅವರನ್ನು ನೋಡಿದ ಕೂಡಲೇ ಇಂದಿರಾ ಗಾಂಧಿ ತಮ್ಮ ಬಳಿ ಬರುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ವಿದ್ಯೆ ಕೊಟ್ಟ ಊರಿನ ಋಣವನ್ನು ಬಡ್ಡಿ ಸಮೇತ ತೀರಿಸಿದ್ರು ಸೋಮನಹಳ್ಳಿ ಮಲ್ಲಯ್ಯ ಕೃಷ್ಣ!
Advertisement
ಪ್ರಧಾನಿಯೇ ಹತ್ತಿರ ಬರುವಂತೆ ಹೇಳಿದ್ದರಿಂದ ಕೃಷ್ಣ ಅವರು ಹೋಗಿ ಇಂದಿರಾ ಬಳಿಯ ಚೇರ್‌ನಲ್ಲಿ ಕುಳಿತಿದ್ದಾರೆ. ಹೀಗೆ ತಮ್ಮ ಪಕ್ಕ ಕುಳಿತ ಕೃಷ್ಣ ಅವರ ಮುಂದೆ ತಮ್ಮ ಮುಂದಿದ್ದ ಅಜೆಂಡಾ ಪ್ರತಿಯನ್ನು ತಳ್ಳಿ ಓದುವಂತೆ ಹೇಳುತ್ತಾರೆ. ತಮಗೆ ನೀಡಿದ ಈ ಜವಾಬ್ದಾರಿಯನ್ನು ಕೃಷ್ಣ ಅವರು ಎಷ್ಟು ಚೆನ್ನಾಗಿ ನಿರ್ವಹಿಸಿದ್ದಾರೆಂದರೆ ಅವರ ಅಸ್ಖಲಿತ ಭಾಷೆ ಇಂದಿರಾ ಸೇರಿದಂತೆ ಇಡೀ ಸಭೆಯನ್ನು ಮಂತ್ರಮುಗ್ಧಗೊಳಿಸಿತ್ತು.
ಸಭೆ ಮುಗಿದ ನಂತರ ಕೃಷ್ಣ ಅವರಿಗೆ ಮೆಚ್ಚುಗೆಯ ಮಾತನ್ನು ಇಂದಿರಾ ಗಾಂಧಿಗಾಂಧಿ ಹೇಳಿ ತನ್ನನ್ನು ಭೇಟಿಯಾಗುವಂತೆ ಸೂಚಿಸಿದ್ದಾರೆ. ಪ್ರಧಾನಿ ಆಹ್ವಾನ ನೀಡಿದ ನಂತರ ನಿಗದಿತ ಸಮಯಕ್ಕೆ ಕೃಷ್ಣ ಅವರು ಕಚೇರಿಯಲ್ಲಿ ಇಂದಿರಾ ಗಾಂಧಿ ಅವರನ್ನು ಭೇಟಿಯಾಗುತ್ತಾರೆ. ಈ ವೇಳೆ ತನ್ನ ಪರಿಚಯ ತಿಳಿಸಿದ ಕೃಷ್ಣ ಅವರು ನಾನು ಮಂಡ್ಯದಿಂದ ಪ್ರಜಾ ಸೋಶಿಯಲಿಸ್ಟ್ ಪಾರ್ಟಿಯ ಪ್ರತಿನಿಧಿಯಾಗಿ ಆಯ್ಕೆ ಆಗಿದ್ದೇನೆ ಎಂದು ತಿಳಿಸಿ ಪಕ್ಷದ ಉದ್ದೇಶವನ್ನು ವಿವರಿಸುತ್ತಾರೆ. ಇದನ್ನೂ ಓದಿ: ಹಳೆ ಮೈಸೂರು ಎಸ್‌ಎಂಕೆ ಪಾಲಿಗೆ ವರವೂ ಹೌದು, ಶಾಪವೂ ಹೌದು!
ಈ ಸಂದರ್ಭದಲ್ಲಿ ಇಂದಿರಾ ಗಾಂಧಿ ನಿಮ್ಮ ಪಕ್ಷ ಯಾವುದಕ್ಕೆ ಹೋರಾಡುತ್ತಿದೆಯೋ ಅದನ್ನು ಜಾರಿಗೊಳಿಸಲೆಂದೇ ಕಾಂಗ್ರೆಸ್ ಕೆಲಸ ಮಾಡುತ್ತಿದೆ. ನೀವು ಪ್ರತ್ಯೇಕವಾಗಿರುವ ಬದಲು ಕಾಂಗ್ರೆಸ್ ಸೇರಬಹುದಲ್ಲ ಎಂದು ಹೇಳುತ್ತಾರೆ. ಇಂದಿರಾ ನೀಡಿದ ಆಹ್ವಾನದ ಬಗ್ಗೆ ಕೃಷ್ಣ ಅವರು ಪ್ರಜಾ ಸೋಶಿಯಲಿಸ್ಟ್ ಪಾರ್ಟಿಯ ಸಭೆಯಲ್ಲಿ ವಿವರಿಸಿದರೂ ಪಕ್ಷದ ಸದಸ್ಯರು ಒಪ್ಪಿಗೆ ನೀಡಿರಲಿಲ್ಲ. ನಂತರ ಪಕ್ಷದ ನಿಲುವನ್ನು ಕೃಷ್ಣ ಅವರು ಇಂದಿರಾ ಬಳಿ ತಿಳಿಸಿದಾಗ, ಯಾರೂ ಬಾರದೇ ಇದ್ದರೆ ನೀವು ಬನ್ನಿ. ನಿಮಗೆ ಬಹಳಷ್ಟು ಜ್ಞಾನವಿದೆ. ಕಾಂಗ್ರೆಸ್ ಸೇರಿದರೆ ಪಕ್ಷದಲ್ಲಿ ನಿಮಗೆ ಮುಂದೆ ಉತ್ತಮ ಅವಕಾಶ ಸಿಗಲಿದೆ ಎಂದರಂತೆ. ಖುದ್ದು ಪ್ರಧಾನಿಯೇ ಆಹ್ವಾನ ನೀಡಿದ ಹಿನ್ನೆಲೆಯಲ್ಲಿ ಎಂಸ್‌ಎಂ ಕೃಷ್ಣ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಾರೆ. ಕಾಂಗ್ರೆಸ್ ಸೇರಿದ ನಂತರ ಮುಂದೆ ನಡೆದದ್ದು ಇತಿಹಾಸ. ಸಚಿವ ಮುಖ್ಯಮಂತ್ರಿ, ವಿದೇಶಾಂಗ ಮಂತ್ರಿಯಾಗಿ ಕೆಲಸ ಮಾಡಿ ಯಶಸ್ವಿ ನಾಯಕನಾಗಿ ಎಸ್‌ಎಂ ಕೃಷ್ಣ ಹೊರಹೊಮ್ಮುತ್ತಾರೆ.