ಚಿತ್ರರಂಗದಲ್ಲಿ ಚಾಲ್ತಿಯಲ್ಲಿರೋ ನಾಯಕ ನಟರನ್ನು ಆರಾಧಿಸುತ್ತಲೇ ಚಿತ್ರರಂಗದತ್ತ ಸೆಳೆತ ಬೆಳೆಸಿಕೊಂಡವರು, ಕಲಾಸಕ್ತಿಯನ್ನು ಮೈಗೂಡಿಸಿಕೊಂಡಿರುವ ಅನೇಕರು ನಾಯಕ ನಟರಾಗಿ ನೆಲೆ ಕಂಡುಕೊಂಡಿದ್ದಿದೆ. ಹುಡುಕಾಡಿದರೆ ಹೊಸತಾಗಿ ಬಂದ ಅನೇಕರಲ್ಲಿ ಇಂಥಾ ಅಭಿಮಾನದ ಕಥೆಗಳು ಸಿಗುತ್ತವೆ. ಇದೀಗ ಬಿಡುಗಡೆಗೆ ಸಜ್ಜಾಗಿರುವ ಒನ್ ಲವ್ 2 ಸ್ಟೋರಿ ಚಿತ್ರದ ಮೂಲಕ ನಾಯಕರಾಗಿ ಅಡಿಯಿರಿಸುತ್ತಿರುವ ಸಂತೋಷ್ ಕೂಡಾ ಈ ಸಾಲಿಗೆ ಸೇರಿಕೊಳ್ಳುವವರು.
Advertisement
ಸಂತೋಷ್ ಮೂಲತಃ ಬೆಂಗಳೂರಿನ ಹುಡುಗ. ಶಾಲಾ ಕಾಲೇಜು ದಿನಗಳಿಂದಲೇ ಸಿನಿಮಾದ ಗುಂಗು ಹತ್ತಿಸಿಕೊಂಡಿದ್ದ ಅವರ ಪಾಲಿಗೆ ಪುನೀತ್ ರಾಜ್‍ಕುಮಾರ್ ರೋಲ್ ಮಾಡೆಲ್. ಪುನೀತ್ ಅವರ ವೀರಾಭಿಮಾನಿಯಾಗಿರೋ ಸಂತೋಷ್ ಅವರ ಚಿತ್ರಗಳನ್ನು ನೋಡುತ್ತಲೇ ಸಿನಿಮಾ ಕನಸು ತುಂಬಿಕೊಂಡಿದ್ದವರು. ಈ ನಡುವೆ ಮನೆ ಮಂದಿಯ ಒತ್ತಾಸೆಗೆ ಬಿದ್ದು ಇಂಜಿನಿಯರಿಂಗ್ ಮಾಡಿಕೊಂಡರೂ ಅವರ ಆಸಕ್ತಿ ಇದ್ದಿದ್ದೇನಿದ್ದರೂ ಸಿನಿಮಾ ಮೇಲೆಯೇ.
Advertisement
Advertisement
ಕಡೆಗೆ ಐಟಿ ವಲಯದಲ್ಲಿ ಕೈತುಂಬಾ ಸಂಬಳ ಸಿಗುವ ಕೆಲಸ ದಕ್ಕಿಸಿಕೊಂಡಿದ್ದರೂ ಸಿನಿಮಾ ಹೊರತಾಗಿ ಬದುಕು ಖಾಲಿ ಖಾಲಿ ಅನ್ನಿಸಲಾರಂಭಿಸಿತ್ತಂತೆ. ಆದ್ದರಿಂದಲೇ ಒಂದು ಸಮಾನಮನಸ್ಕರ ಟೀಮು ಕಟ್ಟಿಕೊಂಡ ಸಂತೋಷ್ ವರ್ಷಾಂತರಗಳ ಹಿಂದೆ ಊಫಿ ಎಂಬ ಕಿರುಚಿತ್ರವೊಂದನ್ನು ನಿರ್ದೇಶನ ಮಾಡಿದ್ದರು. ಆದರೆ ಅದಾದ ನಂತರದಲ್ಲಿ ಒಂದಷ್ಟು ಕಾಲ ಇದೆಲ್ಲದರಿಂದ ದೂರ ಉಳಿಯುವಂಥಾ ಅನಿವಾರ್ಯತೆ ಬಂದೊದಗಿತ್ತು. ಇಂಥಾ ಸಂತೋಷ್ ನಿರ್ದೇಶಕ ವಸಿಷ್ಟ ಬಂಟನೂರರಿಗೂ ತುಂಬಾ ವರ್ಷಗಳ ಪರಿಚಿತರು.
Advertisement
ಹೀಗೆ ವಸಿಷ್ಟರೊಂದಿಗೆ ಸಿನಿಮಾ ಬಗ್ಗೆ ಚರ್ಚೆ ನಡೆಸುತ್ತಲೇ ಸಂತೋಷ್ ಮತ್ತೆ ಸಿನಿಮಾ ಕನಸು ಕಟ್ಟಿಕೊಳ್ಳಲಾರಂಭಿಸಿದ್ದರು. ಈ ರಂಗದಲ್ಲಿ ಏನಾದರೂ ಸಾಧಿಸಬೇಕೆಂದು ಹಂಬಲಿಸುತ್ತಿದ್ದ ಅವರಿಗೆ ವಸಿಷ್ಟ ನಾಯಕನಾಗಿ ಎಂಟ್ರಿ ಕೊಡೋ ಅವಕಾಶ ಕೊಟ್ಟಿದ್ದರು. ಒಂದೊಳ್ಳೆ ಕಥೆ, ಹೊಸ ಬಗೆಯ ನಿರೂಪಣೆ ಹೊಂದಿರೋ ಚಿತ್ರದ ಮೂಲಕ ಲಾಂಚ್ ಆಗುತ್ತಿರೋ ಖುಷಿ ಸಂತೋಷ್ ಅವರಲ್ಲಿದೆ. ಈಗಾಗಲೇ ಟ್ರೈಲರ್ ಮೂಲಕ ಸಂತೋಷ್ ನಟನೆ ಮೆಚ್ಚುಗೆಗೆ ಪಾತ್ರವಾಗಿದೆ.