ಯಾದಗಿರಿ: ಚಾಲಕನ ನಿಯಂತ್ರಣ ತಪ್ಪಿ ಟಂಟಂಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು 7 ಜನರಿಗೆ ಗಾಯಗಳಾದ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.
ಯಾದಗಿರಿ ತಾಲೂಕಿನ ಚಿನ್ನಕಾರ ಬಳಿ ಈ ಘಟನೆ ಸಂಭವಿಸಿದೆ. ಕರಣಗಿ ನಿವಾಸಿ ಭದ್ರಪ್ಪ (25) ಮೃತ ದುರ್ದೈವಿ. ಘಟನೆಯಲ್ಲಿ 7 ಮಂದಿಗೆ ಗಾಯಗಳಾಗಿದ್ದು, ಸ್ಥಳೀಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
Advertisement
ಕರಣಗಿ ನಿವಾಸಿಗಳು ಗುರುಮಠಕಲ್ ಪಟ್ಟಣದಿಂದ ಕರಣಗಿಗೆ ಗುರುವಾರ ರಾತ್ರಿ ಟಂಟಂನಲ್ಲಿ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಘಟನೆಯ ಬಳಿಕ ಟ್ರ್ಯಾಕ್ಟರ್ ಹಾಗೂ ಟಂಟಂ ವಾಹನದ ಇಬ್ಬರೂ ಚಾಲಕರು ಪರಾರಿಯಾಗಿದ್ದಾರೆ.
Advertisement
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.