ನವದೆಹಲಿ: ದೆಹಲಿಯ ರೋಹಿಣಿ ನ್ಯಾಯಾಲಯದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
ಇಂದು ಬೆಳಗ್ಗೆ ಈ ಘಟನೆ ಸಂಭವಿಸಿದ್ದು, ನ್ಯಾಯಾಲಯದ ಕಲಾಪವನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಎಲ್ಲಾ ಗೇಟ್‍ಗಳನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 200 ಕೋಟಿ ರೂ. ವಂಚನೆ ಪ್ರಕರಣ – ಇಡಿ ಮುಂದೆ ವಿಚಾರಣೆಗೆ ಹಾಜರಾದ ಜಾಕ್ವೆಲಿನ್
Advertisement
As per DCP Pranav Tayal, the suspicious explosion at the Rohini Court today happened in a laptop bag, while a court proceeding was underway. One injured person has been admitted to a hospital. pic.twitter.com/uxAutKG96d
— ANI (@ANI) December 9, 2021
Advertisement
ಆರಂಭದಲ್ಲಿ ಕೋರ್ಟ್ ರೂಂ 102 ರಲ್ಲಿ ಲ್ಯಾಪ್‍ಟಾಪ್ ಸ್ಫೋಟಗೊಂಡಿದೆ ಎಂದು ಭಾವಿಸಲಾಗಿತ್ತು. ಆದರೆ ದೆಹಲಿ ಪೊಲೀಸ್‍ನ ಉನ್ನತ ಮೂಲಗಳು ಕಡಿಮೆ ತೀವ್ರತೆಯಲ್ಲಿ ಬಾಂಬ್ ಸ್ಫೋಟಗೊಂಡಿದೆ ಎಂದು ಖಚಿತಪಡಿಸಿವೆ. ಘಟನೆಯಲ್ಲಿ ಸುಧಾರಿತ ಸ್ಫೋಟಕ ಸಾಧನವನ್ನು(ಐಇಡಿ) ಮತ್ತು ಟಿಫಿನ್ ಬಾಕ್ಸ್ ತರಹದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಭಾರತ ಶಸ್ತ್ರಾಸ್ತ್ರ ತಯಾರಿಕೆಯಲ್ಲಿ ಆತ್ಮನಿರ್ಭರ್ ಆಗಬೇಕೆಂಬ ಹಂಬಲ ಬಿಪಿನ್ ಅವರಿಗಿತ್ತು: ಬೊಮ್ಮಾಯಿ
Advertisement
Delhi: A suspicious explosion took place at Rohini Court today morning. Seven fire tenders were rushed to the spot. Details awaited. pic.twitter.com/twqNLqNk4l
— ANI (@ANI) December 9, 2021
ಈ ಕುರಿತಂತೆ ಪ್ರತಿಕ್ರಿಯಿಸಿದ ದೆಹಲಿ ಪೊಲೀಸರು, “ರೋಹಿಣಿ ನ್ಯಾಯಾಲಯದ ಆವರಣದಲ್ಲಿ ಬೆಳಿಗ್ಗೆ 10.30 ರ ಸುಮಾರಿಗೆ ಲ್ಯಾಪ್‍ಟಾಪ್ ಬ್ಯಾಗ್‍ನಲ್ಲಿ ಸಣ್ಣ ಪ್ರಮಾಣದ ಸ್ಫೋಟ ಸಂಭವಿಸಿದೆ. ಈ ಘಟನೆ ಸಂಭವಿಸಿದ ಸ್ಥಳವನ್ನು ಸುತ್ತುವರಿಯಲಾಗಿದೆ. ಇದೀಗ ವಿಧಿವಿಜ್ಞಾನ ತಜ್ಞರು ಮತ್ತು ಎನ್‍ಎಸ್‍ಜಿ ತಂಡಗಳು ಪರಿಶೀಲನೆ ನಡೆಸುತ್ತಿದ್ದಾರೆ.
Delhi: NSG team and dog squad reach Rohini Court after one person injured in a low-intensity explosion pic.twitter.com/lJbIwVrZU0
— ANI (@ANI) December 9, 2021
ದೆಹಲಿ ಪೊಲೀಸರ ವಿಶೇಷ ಸೆಲ್ ಘಟನೆ ಕುರಿತಂತೆ ತನಿಖೆ ನಡೆಸುತ್ತಿದ್ದು, ವಿಶೇಷ ಪೊಲೀಸ್ ಆಯುಕ್ತರು – ಕಾನೂನು ಮತ್ತು ಸುವ್ಯವಸ್ಥೆ ಘಟನಾ ಸ್ಥಳಕ್ಕೆ ಆಗಮಿಸಿದ್ದರು. ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್‍ಎಸ್‍ಜಿ) ತಂಡವನ್ನು ಸಹ ಕರೆಸಲಾಗಿತ್ತು. ಇದನ್ನೂ ಓದಿ: ಕೊನೆ ಕ್ಷಣದಲ್ಲಿ ಬಿಪಿನ್ ರಾವತ್ ಅವ್ರು ಕುಡಿಯಲು ನೀರು ಕೇಳಿದ್ದರು- ಪ್ರತ್ಯಕ್ಷದರ್ಶಿ ಮಾತು
ಘಟನೆ ಕುರಿತಂತೆ ಬೆಳಗ್ಗೆ 10.40ಕ್ಕೆ ಮಾಹಿತಿ ಲಭಿಸಿದ್ದು, ಏಳು ಅಗ್ನಿಶಾಮಕ ಟೆಂಡರ್‍ಗಳು ಸ್ಥಳಕ್ಕೆ ಧಾವಿಸಿವೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.