ಒಂದು ಪರೀಕ್ಷೆ ಯಾರು ಎಂಬುದನ್ನು ನಿರ್ಧರಿಸುವುದಿಲ್ಲ: ಮೋದಿ

Public TV
2 Min Read
I2U2 narendra modi

ನವದೆಹಲಿ: ಈ ವರ್ಷದ ಸಿಬಿಎಸ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಯವರು ವಿದ್ಯಾರ್ಥಿಗಳನ್ನು ಅಭಿನಂದಿಸಲು ಟ್ವೀಟ್ ಮಾಡಿದ್ದಾರೆ. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸದವರಿಗೂ ಧೈರ್ಯ ತುಂಬಿ, ವಿದ್ಯಾರ್ಥಿಗಳ ಮನಗೆದ್ದಿದ್ದಾರೆ.

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಶುಕ್ರವಾರ ಬೆಳಗ್ಗೆ 9 ಗಂಟೆಗೆ ಸಿಬಿಎಸ್‌ಸಿ 12ನೇ ತರಗತಿಯ ಫಲಿತಾಂಶವನ್ನು ಬಿಡುಗಡೆ ಮಾಡಿತು. ಸಿಬಿಎಸ್‌ಇ 10ನೇ ತರಗತಿಯ ಫಲಿತಾಂಶವನ್ನು ಮಧ್ಯಾಹ್ನ 2 ಗಂಟೆಗೆ ಘೋಷಿಸಲಾಯಿತು. ವಿದ್ಯಾರ್ಥಿಗಳು ಡಿಜಿಲಾಕರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಹಾಗೂ ಅಧಿಕೃತ ವೆಬ್‌ಸೈಟ್‌ಗಳಾದ cbseresults.nic.in ಮತ್ತು cbse.gov.in. ನಿಂದ ಫಲಿತಾಂಶವನ್ನು ಪರಿಶೀಲಿಸಲು ಸಾಧ್ಯವಾಗುತ್ತಿದೆ.

NARENDRA MODI 4

ಮೋದಿ ಟ್ವೀಟ್:
ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ನನ್ನ ಎಲ್ಲಾ ಯುವ ಸ್ನೇಹಿತರಿಗೆ ಅಭಿನಂದನೆಗಳು. ಈ ಯುವಕರ ಶ್ರದ್ಧೆ ಶ್ಲಾಘನೀಯ. ಜಗತ್ತು ಒಂದು ದೊಡ್ಡ ಸವಾಲನ್ನು ಎದುರಿಸಿದ ಸಂದರ್ಭದಲ್ಲೇ ನೀವೆಲ್ಲಾ ಪರೀಕ್ಷೆಗೆ ತಯಾರಿ ನಡೆಸಿ ಈ ಯಶಸ್ಸನ್ನು ಸಾಧಿಸಿದ್ದೀರಿ ಎಂದರು. ಇದನ್ನೂ ಓದಿ: Monkeypox; ಕೇರಳದಲ್ಲಿ 3ನೇ ಪ್ರಕರಣ ಪತ್ತೆ

ಪರೀಕ್ಷೆಗಳಲ್ಲಿ ಉತ್ತೀರ್ಣರಾದ ನಮ್ಮ ಯುವ ಪರೀಕ್ಷಾ ಯೋಧರಿಗೆ ಅಸಂಖ್ಯಾತ ಅವಕಾಶಗಳಿವೆ. ಅವರ ಮನಸ್ಸಿನ ಮಾತನ್ನು ಅನುಸರಿಸಲು ಹಾಗೂ ಅವರು ಆಸಕ್ತಿ ಹೊಂದಿರುವ ವಿಷಯಗಳಲ್ಲಿ ಮುಂದುವರಿಯಲು ನಾನು ವಿದ್ಯಾರ್ಥಿಗಳನ್ನು ಒತ್ತಾಯಿಸುತ್ತೇನೆ. ಅವರ ಮುಂದಿನ ಪ್ರಯತ್ನಗಳಿಗೆ ನನ್ನ ಶುಭಾಶಯಗಳು ಎಂದಿದ್ದಾರೆ. ಇದನ್ನೂ ಓದಿ: ಆಸ್ಪತ್ರೆಯ ಖಾಸಗಿ ವಾರ್ಡ್ ಕೊಠಡಿಗಳ ಮೇಲೆ GST ಸುಂಕ – ರೋಗಿಗಳಿಗೆ ಶಾಕ್ ಕೊಟ್ಟ AIIMS

ಕೆಲವು ವಿದ್ಯಾರ್ಥಿಗಳಿಗೆ ತಮ್ಮ ಫಲಿತಾಂಶಗಳಿಂದ ಅಸಮಾಧಾನವಿರಬಹುದು. ಆದರೆ ಒಂದು ಪರೀಕ್ಷೆ ಅವರು ಯಾರೆಂದು ಎಂದಿಗೂ ವ್ಯಾಖ್ಯಾನಿಸುವುದಿಲ್ಲ ಎಂಬುದು ಅವರು ತಿಳಿದಿರಬೇಕು. ಮುಂಬರುವ ದಿನಗಳಲ್ಲಿ ಅವರು ಹೆಚ್ಚಿನ ಯಶಸ್ಸನ್ನು ಕಾಣುತ್ತಾರೆ ಎಂಬುದು ನನಗೆ ಖಾತ್ರಿಯಿದೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *