ಬೆಂಗಳೂರು: ಮಧ್ಯಾಹ್ನದ ಬಿಸಿಯೂಟದೊಂದಿಗೆ (Mid Day Meal) ಶಾಲಾ (Karnataka Government school) ಮಕ್ಕಳಿಗೆ ನೀಡುತ್ತಿದ್ದ ಮೊಟ್ಟೆಗೆ ಸರ್ಕಾರ ಕತ್ತರಿ ಹಾಕಿದೆ. ಇಲ್ಲಿಯ ವರೆಗೂ ವಾರಕ್ಕೆ 2 ದಿನ ಮೊಟ್ಟೆ ನೀಡಲಾಗುತ್ತಿತ್ತು. ಆದರೆ ಇನ್ನು ಮುಂದೆ ವಾರಕ್ಕೆ 1 ಮೊಟ್ಟೆ (Egg) ಮಾತ್ರ ನೀಡಲು ಶಿಕ್ಷಣ ಇಲಾಖೆ ಆದೇಶಿಸಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ವಾರಕ್ಕೆ 2 ದಿನ ಮೊಟ್ಟೆ ಕೊಡಲು ನಿರ್ಧರಿಸಲಾಗಿತ್ತು. ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆ ಹಣ್ಣು, ಚಿಕ್ಕಿ ನೀಡಲಾಗುತ್ತಿತ್ತು. ಆದರೆ ಈಗ ಒಂದು ದಿನದ ಮೊಟ್ಟೆಗೆ ಸರ್ಕಾರ ಕತ್ತರಿ ಹಾಕಿದೆ. ಈಗಾಗಲೇ ಶಾಲೆಗಳು ಪ್ರಾರಂಭಗೊಂಡು 25 ದಿನ ಆಗಿದ್ದು ಶಾಲೆಗಳಿಗೆ ಇನ್ನೂ ಮೊಟ್ಟೆ ನೀಡಿಲ್ಲ. ಇದನ್ನೂ ಓದಿ: ಸಿದ್ದರಾಮಯ್ಯ ಪತ್ನಿಗೆ ಅನಾರೋಗ್ಯ ಆಸ್ಪತ್ರೆಗೆ ದಾಖಲು
ಶಿಕ್ಷಣ ಇಲಾಖೆ (Department of School Education and Literacy) ಆದೇಶ ಪ್ರಕಟವಾದ ಬೆನ್ನಲ್ಲೇ ವಾರದಲ್ಲಿ ಎರಡು ದಿನ ಮೊಟ್ಟೆ ಕೊಡುವುದಕ್ಕೂ ಸರ್ಕಾರಕ್ಕೆ ಕಷ್ಟವಾಗಿದೆಯೇ? ಮಕ್ಕಳ ಪೌಷ್ಠಿಕಾಂಶದ ಮೊಟ್ಟೆ ಮೇಲೂ ಸರ್ಕಾರದ ಕಣ್ಣು ಬಿದ್ದಿದ್ಯಾ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ಶುರುವಾಗಿದೆ.
ಯಾವ ಕಾರಣಕ್ಕೆ 1 ಮೊಟ್ಟೆಯನ್ನು ಕಡಿತ ಮಾಡಲಾಗಿದೆ ಎಂಬುದಕ್ಕೆ ಸರ್ಕಾರದಿಂದ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಇದನ್ನೂ ಓದಿ: ಆಧುನಿಕ ಆರೋಗ್ಯ ಸಮಸ್ಯೆಗಳಿಗೆ ಯೋಗ ಮದ್ದು: ದಿನೇಶ್ ಗುಂಡೂರಾವ್