ಚಾಮರಾಜನಗರ: ದಾನಗಳಲ್ಲಿ ಶ್ರೇಷ್ಠದಾನ ಅಂದ್ರೆ ರಕ್ತದಾನ ಕೂಡ ಹೌದು. ರಕ್ತದಾನದ ಬಗ್ಗೆ ಹಲವರಲ್ಲಿ ತಪ್ಪು ಕಲ್ಪನೆಗಳಿವೆ. ಬ್ಲಡ್ ಡೊನೇಟ್ (Blood Donate) ಮಾಡಿದ್ರೆ ದೇಹದಲ್ಲಿ ರಕ್ತ ಕಡಿಮೆಯಾಗಿ ಬಿಡುತ್ತೆ ಅಂತ ಚಿಂತಿಸೋರೆ ಜಾಸ್ತಿ. ಆದರೆ ಚಾಮರಾಜನಗರದ ಯುವಕರಿಬ್ಬರು ಕಳೆದ ಇಪ್ಪತ್ತೈದು ವರ್ಷಗಳಿಂದ ಪ್ರತಿ ನಾಲ್ಕು ತಿಂಗಳಿಗೊಮ್ಮೆ ನಿರಂತರವಾಗಿ ರಕ್ತದಾನ ಮಾಡುತ್ತಾ ಬರುತ್ತಿದ್ದಾರೆ.
Advertisement
ಚಾಮರಾಜನಗರದ ಸತೀಶ್ 45ನೇ ವಯಸ್ಸಿನಲ್ಲಿಯೂ ಹೆಮ್ಮೆಯಿಂದ ರಕ್ತದಾನ ಮಾಡ್ತಿದ್ದಾರೆ. ಒಂದೆರೆಡು ಬಾರಿಯಲ್ಲ, ಇವರು ಬರೋಬ್ಬರಿ 51 ಬಾರಿ ರಕ್ತದಾನ ಮಾಡಿ ಅದೆಷ್ಟೋ ಬಡ ಜೀವಗಳ ಬದುಕಿಗೆ ಬೆಳಕಾಗಿದ್ದಾರೆ. ಇನ್ನು ಚಾಮರಾಜನಗರ (Chmarajanagar) ತಾಲೂಕಿನ ಹೆಗ್ಗವಾಡಿಪುರದ ನಿವಾಸಿಯಾದ ಅಜಯ್ ಕೂಡ ಯಾವುದೇ ಅಂಜು ಅಳುಕಿಲ್ಲದೇ 25ನೇ ವಯಸ್ಸಿನಿಂದಲೂ ರಕ್ತದಾನ ಮಾಡ್ತಿದ್ದಾರೆ. ಅಜಯ್ ಕೂಡ 43 ಬಾರಿ ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.
Advertisement
Advertisement
ಇತ್ತೀಚಿನ ದಿನಗಳಲ್ಲಿ ರಕ್ತಕ್ಕೆ ಬೇಡಿಕೆ ಹೆಚ್ಚುತ್ತಿದೆ. ಆದರೆ ರಕ್ತನಿಧಿಗಳಲ್ಲಿ ರಕ್ತದ ಕೊರತೆ ಸಾಕಷ್ಟಿದೆ. ಇದನ್ನು ಮನಗಂಡ ಚಾಮರಾಜನಗರದ ರೋಟರಿ ಸಿಲ್ಕ್‍ಸಿಟಿ ಸಂಸ್ಥೆ ಕಳೆದ 12 ವರ್ಷಗಳಿಂದ ರಕ್ತದಾನ ಶಿಬಿರ ಆಯೋಜಿಸ್ತಿದೆ. ಈವರೆಗೆ ಎರಡು ಸಾವಿರಕ್ಕೂ ಹೆಚ್ಚು ಮಂದಿ ಈ ಶಿಬಿರಗಳಲ್ಲಿ ರಕ್ತದಾನ ಮಾಡಿದ್ದು ಅಮೂಲ್ಯ ಜೀವಗಳನ್ನು ಉಳಿಸುವ ಮಹತ್ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಇದನ್ನೂ ಓದಿ: ಉತ್ತರ ಭಾರತಕ್ಕೆ ಹೋಲಿಸಿದ್ರೆ ದಕ್ಷಿಣ ಭಾರತದಲ್ಲೇ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೆ
Advertisement
ಒಟ್ಟಿನಲ್ಲಿ ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ರಕ್ತದಾನ ಮಾಡಿದರೆ ಕೇವಲ 24 ಗಂಟೆಯಲ್ಲಿ ರಕ್ತ ಪುನರ್ ಉತ್ಪತ್ತಿಯಾಗುತ್ತದೆ. ರಕ್ತದಾನದಿಂದ ಹೃದ್ರೋಗ, ಮಧುಮೇಹ, ರಕ್ತ ಕ್ಯಾನ್ಸರ್ ನಂತಹ ಕಾಯಿಲೆಗಳು ಹತ್ತಿರ ಸುಳಿಯಲ್ಲ. ಇನ್ನಾದ್ರೂ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಿ, ಮತ್ತೊಂದು ಜೀವ ಉಳಿಸಿ.