Monday, 22nd October 2018

Recent News

ರಸ್ತೆ ಬದಿಯ ಡಿವೈಡರ್ ಗೆ ಡಿಕ್ಕಿ ಹೊಡೆದು ಕಾರು ಪಲ್ಟಿ – ಓರ್ವ ಸಾವು, ಇಬ್ಬರು ಗಂಭೀರ

ಧಾರವಾಡ: ಕಾರು ಪಲ್ಟಿಯಾದ ಪರಿಣಾಮ ಓರ್ವ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಧಾರವಾಡ ಹೊರವಲಯದ ಬೇಲೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ದಾವಣಗೆರೆಯ ನಿರಂಜನ್ ಕುಮಾರ್ ಮೃತ ದುರ್ದೈವಿ. ಈ ಘಟನೆ ಗುರುವಾರ ತಡರಾತ್ರಿ ಸಂಭವಿಸಿದ್ದು, ಮೃತ ನಿರಂಜನ್ ಕುಮಾರ್ ಕೊಲ್ಲಾಪುರದಿಂದ ದಾವಣಗೆರೆಗೆ ಹಿಂದಿರುತ್ತಿದ್ದರು. ಈ ವೇಳೆ ಬೇಲೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ರಸ್ತೆ ಬದಿಯ ಡಿವೈಡರ್ ಗೆ  ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಪರಿಣಾಮ ಒಬ್ಬ ಮೃತಪಟ್ಟಿದ್ದು, ಇಬ್ಬರಿಗೆ ಗಾಯವಾಗಿದೆ.

ಇಂದು ಬೆಳಗಿನ ಜಾವ ಈ ಅಪಘಾತವನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಅಪಘಾತದಲ್ಲಿ ಗಾಯಗೊಂಡಿದ್ದ ಗಾಯಾಳಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಘಟನೆ  ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

Leave a Reply

Your email address will not be published. Required fields are marked *