– ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದ್ರೆ ಅಗತ್ಯ ಮಾಹಿತಿ ಲಭ್ಯ
ಬೆಂಗಳೂರು: ಹೊಸ ವರ್ಷಕ್ಕೆ ಒಂದೇ ದಿನ ಬಾಕಿಯಿದೆ. ಸಿಲಿಕಾನ್ ಸಿಟಿ (Silicon City) ಹೊಸ ವರ್ಷದ ಸ್ವಾಗತಕ್ಕೆ ಸಜ್ಜಾಗಿದ್ದು, ಇಂದಿರಾನಗರ, ಕೋರಮಂಗಲ, ಎಂ.ಜಿ ರೋಡ್‌ನಲ್ಲಿ ನ್ಯೂ ಇಯರ್‌ಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಪೊಲೀಸ್ ಕಮೀಷನರ್ ಸೀಮಂತ್ ಕುಮಾರ್ ಸಿಂಗ್ ಅವರು ಖುದ್ದು ಎಲ್ಲಾ ಕಡೆಗಳಲ್ಲಿ ಹೋಗಿ, ಪರಿಶೀಲನೆ ನಡೆಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಹೊಸ ವರ್ಷಕ್ಕೆ ಅತಿ ಹೆಚ್ಚು ಜನ ಸೇರುವ ಎಂ.ಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್‌ಗಳಲ್ಲಿ ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ, ಕೇಂದ್ರ ವಿಭಾಗ ಡಿಸಿಪಿ ಅಕ್ಷಯ್ ಎಂ ಹಾಕೆ, ಟ್ರಾಫಿಕ್ ಡಿಸಿಪಿ ಅನೂಪ್ ಶೆಟ್ಟಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಗೈಡ್‌ಲೈನ್ಸ್ – ಡಿಜೆ, ಲೌಡ್‌ಸ್ಪೀಕರ್ ಬಳಕೆಗೆ ಅನುಮತಿ ಕಡ್ಡಾಯ
ಹೊಸ ವರ್ಷದಂದು ಯಾವುದೇ ಸಮಸ್ಯೆ ಆಗದಂತೆ ಈಗಾಗಲೇ ಸೂಕ್ತ ಬಂದೋಬಸ್ತ್‌ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಿಸಿಟಿವಿಗಳು, ಮಹಿಳೆಯರ ಭದ್ರತೆಗಾಗಿಯೇ ಐಲ್ಯಾಂಡ್‌ಗಳು, ವಾಚ್ ಟವರ್‌ಗಳು, ಬ್ಯಾರಿಕೇಡ್‌ಗಳು, ಜೊತೆಗೆ ಹೊಸದಾಗಿ ಕ್ಯೂ ಆರ್ ಕೋಡ್‌ಗಳನ್ನು ರಸ್ತೆಯ ಪಕ್ಕದಲ್ಲಿ ಅಂಟಿಸಲಾಗಿದೆ. ಈ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದ್ರೆ, ಎಲ್ಲಿ ಟ್ರಾಫಿಕ್ ಜಾಮ್ ಇದೆ, ಎಲ್ಲಿ ಪೊಲೀಸರು ಹತ್ತಿರದಲ್ಲಿ ಇದ್ದಾರೆ, ಪೊಲೀಸ್ ಠಾಣೆ ಎಲ್ಲಿದೆ, ಆಂಬ್ಯುಲೆನ್ಸ್ ಎಲ್ಲಿದೆ ಸೇರಿದಂತೆ ಅಗತ್ಯ ಮಾಹಿತಿಗಳು ಸಿಗುತ್ತವೆ.
ತಾತ್ಕಾಲಿಕವಾಗಿ ಮಾನಿಟರ್ ಮಾಡಲು ಹೆಚ್ಚುವರಿ 360 ಸಿಸಿಟಿವಿಗಳು ಅಳವಡಿಸಲಾಗಿದೆ. ಕೇಂದ್ರ ವಿಭಾಗ ಒಂದರಲ್ಲೇ ಬರೋಬ್ಬರಿ ಆರು ಸಾವಿರ ಸಿಸಿಟಿವಿಗಳನ್ನು ಅಳವಡಿಕೆ ಮಾಡಲಾಗಿದೆ.ಇದನ್ನೂ ಓದಿ: ಹುಲಿಕಲ್ ಘಾಟ್‌ನಲ್ಲಿ ಧರೆಗೆ ಬಸ್ ಡಿಕ್ಕಿ: ಮಗು ಸಾವು, ಮೂವರಿಗೆ ಗಂಭೀರ ಗಾಯ

