ಬೆಂಗಳೂರು: ಇಡೀ ವಿಶ್ವದ ರಾಮ ಭಕ್ತರು ಅಯೋಧ್ಯೆಯಲ್ಲಿ ನಾಳೆ (ಸೋಮವಾರ) ನಡೆಯುವ ರಾಮಲಲ್ಲಾ (Ram Lalla) ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಗಾಗಿ ಕಾಯುತ್ತಿದ್ದಾರೆ. ಈ ಶುಭ ಸಮಾರಂಭವನ್ನು ಅಚ್ಚಳಿಯದೇ ಉಳಿಯುವಂತೆ ಮಾಡಲು ಬೆಂಗಳೂರು ಸಹ ಸಜ್ಜಾಗುತ್ತಿದೆ.
500 ವರ್ಷಗಳ ಕಾಯುವಿಕೆಗೆ ಕೊನೆಗೂ ಒಂದು ಮುಕ್ತಿ ಸಿಗುತ್ತಿದೆ. ಕೋಟ್ಯಂತರ ರಾಮಭಕ್ತರ ಕನಸು ನನಸಾಗೋ ಶುಭ ಘಳಿಗೆಗೆ ಇಡೀ ರಾಮಭಕ್ತಗಣ ಸಿದ್ಧವಾಗಿದೆ. ಸೋಮವಾರದ ಈ ಶುಭ ಕಾರ್ಯಕ್ರಮದ ಹಿನ್ನಲೆಯಲ್ಲಿ ಬೆಂಗಳೂರಿನಲ್ಲೂ (Bengaluru) ಸಿದ್ಧತೆಗಳು ಜೋರಾಗಿಯೇ ನಡೆದಿದೆ. ಈಗಾಗಲೇ ಎಲ್ಲಾ ದೇವಾಲಯಗಳು ಸಹ ವಿಶೇಷ ಪೂಜೆ ಪುನಸ್ಕಾರ ಮಾಡಲು ಸಿದ್ಧತೆ ಮಾಡಿಕೊಂಡಿವೆ. ಇದನ್ನೂ ಓದಿ: ಎಲ್ಲೆಲ್ಲೂ ರಾಮಜಪ, ಜೈಶ್ರೀರಾಮ್ ಉದ್ಘೋಷ – ಇಟ್ಟಿಗೆಯಲ್ಲೇ ಸಾಕ್ಷಾತ್ ಶ್ರೀರಾಮನ ಕಂಡ ಕುಟುಂಬ!
Advertisement
Advertisement
ಹೌದು, ಸೋಮವಾರ ಇಡೀ ದಿನ ರಾಮನ ಪೂಜೆ ಪುನಸ್ಕಾರ ಮಾಡುವುದರ ಜೊತೆಗೆ ಗಾಳಿ ಆಂಜನೇಯ ದೇವಾಲಯದಲ್ಲಿರುವ ಕೋದಂಡರಾಮನ ದೇವಾಲಯದಲ್ಲಿ 108 ಕಳಸಗಳಿಂದ ವಿಶೇಷ ಅಭಿಷೇಕವನ್ನು ಮಾಡಲು ಪುರೋಹಿತರು ಮುಂದಾಗಿದ್ದಾರೆ. ಇದರ ಜೊತೆಗೆ ಶಾಂತಿ ಹೋಮ, ಮಹಾಕುಂಭ ಹೋಮ ಸೇರಿದಂತೆ ಇಡೀ ದಿನ ರಾಮ ನಾಮದ ಜಪ ಕೂಡ ನಡೆಯಲಿದೆ. ಇದನ್ನೂ ಓದಿ: ಪ್ರಾಣಪ್ರತಿಷ್ಠೆಗೆ ಕೌಂಟ್‌ಡೌನ್ – ಬೆಂಗ್ಳೂರಿನಿಂದ ಅಯೋಧ್ಯೆಗೆ ಹೆಚ್ಚುವರಿ ರೈಲು ಸೇವೆ, ಇಲ್ಲಿದೆ ಡಿಟೇಲ್ಸ್
Advertisement
Advertisement
ಇನ್ನೂ ಸಂಜೆ 5 ಗಂಟೆಗೆ ಸೀತಾರಾಮ ಕಲ್ಯಾಣೋತ್ಸವವನ್ನ ಸಹ ಮಾಡುತ್ತಿದ್ದು, ಭಕ್ತರು ಈ ಉತ್ಸವದಲ್ಲಿ ಭಾಗಿಯಾಗಿ ರಾಮನ ಕೃಪೆಗೆ ಪಾತ್ರರಾಗಬೇಕು ಎಂದು ಅರ್ಚಕರು ತಿಳಿಸಿದ್ದಾರೆ. ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನಾ ಸಮಯದಲ್ಲಿ ಮನೆಯಲ್ಲಿ ದೇವರ ದೀಪ ಹಚ್ಚಿ ರಾಮನ ಧ್ಯಾನ ಮಾಡಿ ಬಳಿಕ ವಿಷ್ಣುವಿನ ಯಾವುದಾದರೂ ದೇವಾಲಯಕ್ಕೆ ಹೋಗಿ ದರ್ಶನ ಮಾಡಿ ಎಂದಿದ್ದಾರೆ. ಇದನ್ನೂ ಓದಿ: ಪ್ರಾಣಪ್ರತಿಷ್ಠೆಗೆ ಕೌಂಟ್‌ಡೌನ್ – ಬೆಂಗ್ಳೂರಿನಿಂದ ಅಯೋಧ್ಯೆಗೆ ಹೆಚ್ಚುವರಿ ರೈಲು ಸೇವೆ, ಇಲ್ಲಿದೆ ಡಿಟೇಲ್ಸ್
ಇಷ್ಟು ಮಾತ್ರವಲ್ಲದೇ ಬೆಂಗಳೂರಿನ ಬೀದಿ ಬೀದಿಯಲ್ಲೂ ರಾಮನಾಮ ಜಪ ಮಾಡುವ ನಿಟ್ಟಿನಲ್ಲಿ ರಾಮನ ಭಕ್ತರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಪ್ರಮುಖ ಸರ್ಕಲ್ ದೇವಾಲಯಗಳಲ್ಲಿ ಬೃಹತ್ ಎಲ್‌ಇಡಿ ಪರದೆಯ ವ್ಯವಸ್ಥೆ ಮಾಡಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯ ನೇರ ದೃಶ್ಯವನ್ನು ವೀಕ್ಷಣೆ ಮಾಡುವ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಪದ್ಮನಾಭನಗರದ ಮೈದಾನದಲ್ಲಿ ವೇದಿಕೆ ಸಿದ್ಧಪಡಿಸಿ ಅಲ್ಲಿ ನೂರಾರು ಮಕ್ಕಳು ರಾಮ, ಲಕ್ಷ್ಮಣ, ಸೀತೆ ಹಾಗೂ ಹನುಮಂತನ ವೇಷದಲ್ಲಿರಲಿದ್ದು, ಸಂಜೆ ಲಕ್ಷ ದೀಪೋತ್ಸವ ಮತ್ತು ಹಿನ್ನಲೆ ಗಾಯಕ ವಿಜಯ್ ಪ್ರಕಾಶ್ ಅವರಿಂದ ರಾಮ ಭಕ್ತಿಗೀತೆಗಳ ಗಾಯನ ಕೂಡ ಇರಲಿದೆ. ಇದನ್ನೂ ಓದಿ: ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಗೆ ಸಜ್ಜಾದ ರಾಮಮಂದಿರ- ಫೋಟೋಗಳಲ್ಲಿ ನೋಡಿ..
ಒಟ್ಟಿನಲ್ಲಿ ಜ.22ರ ದಿನ ಐತಿಹಾಸಿಕ ಮಾತ್ರವಲ್ಲದೇ ಅತ್ಯಂತ ಮಹತ್ವದ ದಿನವಾಗಿದ್ದು, ಭಾರತದ ಇತಿಹಾಸದ ಪುಟಗಳನ್ನು ಸೇರುವ ದಿನ ಇದಾಗಿರುತ್ತದೆ. ಬೆಂಗಳೂರಿನ ಜನ ಕೂಡ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ನಾನಾ ರೀತಿಯಲ್ಲಿ ಸಿದ್ಧಗೊಳ್ಳುತ್ತಿದ್ದಾರೆ. ಇದನ್ನೂ ಓದಿ: ರಾಮಲಲ್ಲಾ ವಿಗ್ರಹದ ಫೋಟೋ ವೈರಲ್ ಮಾಡಿದವ್ರ ವಿರುದ್ಧ ಕಠಿಣ ಕ್ರಮಕ್ಕೆ ಪ್ರಧಾನ ಅರ್ಚಕ ಒತ್ತಾಯ