ಬೆಂಗಳೂರು: ಮಹಿಳೆಯರ (Womens) ನಗ್ನ ವೀಡಿಯೋ (Video) ಮತ್ತು ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡ್ತಿದ್ದ ಸೈಬರ್ ಆರೋಪಿ ಈಗ ಬೆಂಗಳೂರು ಪೊಲೀಸರ (Bengaluru Police) ಅತಿಥಿಯಾಗಿದ್ದಾನೆ.
ಮಹಾಂತೇಶ್ ಬಂಧಿತ ಆರೋಪಿ. ಮಹಿಳೆಯರಿಗೆ ಕರೆ ಮಾಡಿ ನಗ್ನ ವಿಡಿಯೋ, ಫೋಟೋ ಇದೆ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕೋದಾಗಿ ಬೆದರಿಸಿ ಹಣಕ್ಕೆ ಡಿಮಾಂಡ್ ಮಾಡುತ್ತಿದ್ದ. ಬಳಿಕ ಮಹಿಳೆಯೊಬ್ಬರಿಗೆ ಕರೆ ಮಾಡಿ, 30 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾನೆ. ಬಳಿಕ ನಾರ್ಥ್ ಈಸ್ಟ್ ಸೈಬರ್ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದಾಳೆ. ಇದನ್ನೂ ಓದಿ: ಪ್ರವಾಸಿಗರ ಕಣ್ಮನ ಸೆಳೆಯುತ್ತಿರೋ ಅತ್ಯಾಧುನಿಕ ರೈಲ್ವೆ ರೆಸ್ಟೋರೆಂಟ್ – ಎಲ್ಲಿದೆ ಗೊತ್ತಾ?
ಪ್ರಕರಣ (FIR) ದಾಖಲಿಸಿಕೊಂಡ ಪೊಲೀಸರು (Police) ಆರೋಪಿ ಬಂಧಿಸಿ ತನಿಖೆಗೆ ಒಳಪಡಿಸಿದ್ದಾಗ, ಹಲವು ಮಹಿಳೆಯರಿಗೆ ವಂಚನೆ ಮಾಡಿರೋದು ಬೆಳಕಿಗೆ ಬಂದಿದೆ. ತನಿಖೆ ಮುಂದುವರಿದಿದೆ.