ಒಂದಾದ ಮೇಲೆ ಒಂದು ವಿಷಯಗಳನ್ನು ವಿವಾದ ಮಾಡುತ್ತಿದ್ದಾರೆ: ಎಂ.ಬಿ.ಪಾಟೀಲ್

Public TV
1 Min Read
m b patil vijayapura

ವಿಜಯಪುರ: ಒಂದಾದ ಮೇಲೆ ಒಂದು ವಿಷಯಗಳನ್ನು ವಿವಾದ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮೀತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಬಿಜೆಪಿ ವಿರುದ್ಧ ಕಿಡಿಕಾರಿದರು.

ಚಂದ್ರು ಹತ್ಯೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಗೃಹ ಸಚಿವರ ಆರಗ ಜ್ಞಾನೇಂದ್ರ ನೀಡಿದ್ದ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದರು. ಈ ವೇಳೆ ಅವರು, ಎಲ್ಲವೂ ಅತಿರೇಕವಾಗಿದೆ. ಮತಗಳ ಆಸೆ, ಮತಗಳ ಕ್ರೋಡೀಕರಣಕ್ಕಾಗಿ ಇದನ್ನೆಲ್ಲ ಮಾಡಲಾಗುತ್ತಿದೆ. ಒಂದಾದ ಮೇಲೆ ಒಂದು ವಿಷಯಗಳನ್ನು ವಿವಾದ ಮಾಡುತ್ತಿದ್ದಾರೆ ಎಂದು ವಿರೋಧ ವ್ಯಕ್ತಪಡಿಸಿದರು. ಇದನ್ನೂ ಓದಿ: ವಿಎಲ್‍ಸಿ ಮೀಡಿಯಾ ಪ್ಲೇಯರ್ ಬಳಸಿ ಚೀನಾ ಸೈಬರ್ ದಾಳಿ

BJP CONGRESS FLAG

ಹಿಜಬ್, ಕಾಶ್ಮೀರಿ ಫೈಲ್ಸ್ ವಿಚಾರ, ದೇವಸ್ಥಾನ ಜಾತ್ರೆ ನಿರ್ಬಂಧ ವಿಚಾರ, ಹಲಾಲ್, ಅಜಾನ್ ವಿವಾದ ಮಾಡಲಾಗುತ್ತಿದೆ. ಇದು ತಿರುಗುಬಾಣವಾಗಲಿದೆ. ಇದು ರಾಜ್ಯಕ್ಕೆ ಪರಿಣಾಮವಾಗಲಿದೆ. ಕೈಗಾರಿಕೆಗಳು, ಕೈಗಾರಿಕಾ ಉದ್ಯಮಿಗಳು ಇಲ್ಲಿ ಬರಲು ಹಿಂಜರಿಯುತ್ತಾರೆ. ಈ ಕಾರಣದಿಂದ ಇಂಡಸ್ಟ್ರಿಗಳು ಬೆಳೆಯಲ್ಲ. ಇಂಥ ವಿವಾದಗಳ ಕಾರಣದಿಂದಲೇ ಹೈದರಾಬಾದ್ ಬೆಳಗಾವಿಗೆ ಕೈಗಾರಿಕೆಗಳು ಹಾಗೂ ಕೈಗಾರಿಕಾ ಉದ್ಯಮಿಗಳು ಹೋಗುತ್ತಿರಲಿಲ್ಲ ಎಂದು ತಿಳಿಸಿದರು.

araga jnanendra 1

ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಇಂಥ ವಿವಾದಗಳನ್ನು ಸಾಮರಸ್ಯದಿಂದ ಬಗೆ ಹರಿಸಬೇಕು. ಬಿಜೆಪಿ ರಾಜಕೀಯ ಅತಿಯಾಗಿದೆ. ಬೆಂಗಳೂರಿನಲ್ಲಿ ಯುವಕನ ಕೊಲೆ ವಿಚಾರವಾಗಿ ಗೃಹ ಸಚಿವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಯಾರೋ ನೀಡಿದ ಹೇಳಿಕೆಯನ್ನು ಹೇಳಿದ್ದಾರೆ. ನಮ್ಮ ನಾಡಿನಲ್ಲಿ ಸಂತರು ಮಹಾತ್ಮರು ನಡೆದಾಡಿದ್ದಾರೆ. ಇವೆಲ್ಲ ವಿವಾದಗಳ ಕುರಿತು ವಿಚಾರ ಮಾಡಬೇಕು ಎಂದು ಸಲಹೆ ಕೊಟ್ಟರು. ಇದನ್ನೂ ಓದಿ: ಕಾರ್ಯಕಾರಿಣಿ ಸಭೆ ಬಳಿಕ ಸಂಪುಟ ಸರ್ಜರಿ ಫೈನಲ್: ಸಿಎಂ

ಕೋಮು ಸೌಹಾರ್ಧತೆಯನ್ನು ಕೆಡಿಸುವ ಕೆಲಸ ಮಾಡಲಾಗುತ್ತಿದೆ. ಬದುಕನ್ನು ಕಟ್ಟೋ ಕೆಲಸವಾಗಬೇಕು. ರಾಜ್ಯ ಸರ್ಕಾರದಲ್ಲಿ ಅಭಿವೃದ್ಧಿ ಇಲ್ಲ. ಸರ್ಕಾರದಲ್ಲಿ ಹಣವಿಲ್ಲ, ಹಸಿದವರಿಗೆ ಅನ್ನವಿಲ್ಲ. ಇವೆಲ್ಲ ಸಮಸ್ಯೆಗಳನ್ನು ಮುಚ್ಚೋಕೆ ಇವೆಲ್ಲಾ ಮಾಡುತ್ತಿದ್ದಾರೆ. ಭಾರತ ಶ್ರೀಲಂಕಾ ಆಗಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *