ಬೆಂಗಳೂರು: ಬಂಡವಾಳ ಹೂಡಿಕೆಗೆ ಕಲ್ಲಿದ್ದಲು (Coal) ಕ್ಷೇತ್ರದಲ್ಲಿ ಉತ್ತಮ ಅವಕಾಶ ಕಲ್ಪಿಸಲಾಗಿದ್ದು, 2025ರ ಸಾಲಿನಲ್ಲಿ 1 ಬಿಲಿಯನ್ ಟನ್ (ಶತಕೋಟಿ) ನಷ್ಟು ಕಲ್ಲಿದ್ದಲು ಉತ್ಪಾದಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹೇಳಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಬುಧವಾರ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ಡೊಮೆಸ್ಟಿಕ್ ಕೋಲ್ ಪ್ರೊಡಕ್ಷನ್ (Domestic Coal Production) 900 ದಶಲಕ್ಷ ಟನ್ ತಲುಪಿದೆ. 2025ರ ಸಾಲಿನಲ್ಲಿ ಕೋಲ್ ಇಂಡಿಯಾ (Coal India) 1 ಬಿಲಿಯನ್ ಟನ್ ನಷ್ಟು ಕಲ್ಲಿದ್ದಲು ಉತ್ಪಾದಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಶ್ಲೀಲ ದೃಶ್ಯ ನೋಡಿ ಪ್ರಚೋದನೆ – ಅಪ್ರಾಪ್ತನಿಂದ ಬಾಲಕಿಯ ಮೇಲೆ ರೇಪ್, ಕೊಲೆ
Advertisement
Advertisement
ಕಲ್ಲಿದ್ದಲು ಗಣಿಗಾರಿಕೆ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಉತ್ತಮ ಅವಕಾಶಗಳಿವೆ. ಅದಕ್ಕಾಗಿ ಉದ್ಯಮಸ್ನೇಹಿ ವಾತಾವರಣ ಕಲ್ಪಿಸಲಾಗಿದೆ. ಕಲ್ಲಿದ್ದಲು ಕ್ಷೇತ್ರದಿಂದ ದೇಶದ ಜಿಡಿಪಿಗೆ (GDP) ಶೇ 2.5 ರಷ್ಟು ಕೊಡುಗೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನಿರ್ದೇಶನ ನೀಡಿದ್ದಾರೆ. ಈ ಗುರಿ ಮುಟ್ಟುವತ್ತ ನಾವು ಹೆಜ್ಜೆ ಇಡುತ್ತಿದ್ದೇವೆ. ಗುರುವಾರ (ನವೆಂಬರ್ 3) 124 ಕಲ್ಲಿದ್ದಲು ಗಣಿ ಹರಾಜು ಪ್ರಕ್ರಿಯೆ ನಡೆಯಲಿದೆ. ಯಾರು ಬೇಕಾದರು ಪಾಲ್ಗೊಳ್ಳಬಹುದು. ಗಣಿಗಾರಿಕೆಗೆ (Mining) ಬೇಕಾದ 21 ಕ್ಲಿಯರೆನ್ಸ್ ಗಳನ್ನ ಸುಲಲಿತವಾಗಿ ವರ್ಗಾಯಿಸುವ ನಿಯಮಗಳನ್ನೂ ಜಾರಿಗೆ ತರಲಾಗಿದೆ. ಇದರ ಪರಿಣಾಮವಾಗಿ ಕಲ್ಲಿದ್ದಲು ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆಯಾಗುತ್ತಿದೆ. ಉತ್ಪಾದನೆ ಕೂಡ ಹೆಚ್ಚಿದೆ ಹೆಚ್ಚಾಗಿದೆ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಈಶ್ವರಪ್ಪ ರಾಜಕೀಯ ದಾಹಕ್ಕೆ ಇನ್ನೆಷ್ಟು ಹೆಣ ಬೀಳಬೇಕು?: ಸುಂದರೇಶ್
Advertisement
Advertisement
ಪ್ರಧಾನಿ ಮೋದಿ ಅವರ 5 ಲಕ್ಷಕೋಟಿ ಡಾಲರ್ ಆರ್ಥಿಕತೆಯ ಗುರಿ ತಲುಪುವಲ್ಲಿ ಕರ್ನಾಟಕ ಕೂಡ ಹೆಚ್ಚಿನ ಕೊಡುಗೆ ನೀಡಲಿದೆ ಎಂದು ಭಾವಿಸಿದ್ದಾರೆ. ಪ್ರಗತಿ ಹೊಂದಿರುವ ರಾಜ್ಯ ಕರ್ನಾಟಕದಲ್ಲೂ ಹೆಚ್ಚಿನ ಹೂಡಿಕೆಗೆ ಹೂಡಿಕೆದಾರರು ಮುಂದೆ ಬರಬೇಕು ಎಂದು ಹೇಳಿದ್ದಾರೆ