ಯುವತಿಯ ಹೊಟ್ಟೆಯಲ್ಲಿ ಒಂದೂವರೆ ಕೆಜಿ ಕೂದಲು – ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ ವೈದ್ಯರು

Public TV
2 Min Read
madikeri kudala gende 6

– ಗೆಡ್ಡೆ ನೋಡಿ ಆಶ್ಚರ್ಯಗೊಂಡ ಸಿಬ್ಬಂದಿ

ಮಡಿಕೇರಿ: ನಾಪೋಕ್ಲು ಗ್ರಾಮದ ಯುವತಿಯ ಹೊಟ್ಟೆಯಲ್ಲಿದ್ದ ಒಂದೂವರೆ ಕೆಜಿ ತೂಕದ ಕೂದಲಿನ ಗೆಡ್ಡೆಯನ್ನು ಹೊರತೆಗೆಯುವಲ್ಲಿ ಮಡಿಕೇರಿಯ ಜಿಲ್ಲಾಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ 20 ವರ್ಷದ ಯುವತಿ ಯಾರಿಗೂ ತಿಳಿಯದಂತೆ ಕೂದಲನ್ನು ತಿಂದುಕೊಂಡು ಇದ್ದಳು. ಈ ಪರಿಣಾಮ ಬರೋಬ್ಬರಿ ಒಂದೂವರೆ ಕೆ.ಜಿಯಷ್ಟು ಕೂದಲು ಹೊಟ್ಟೆಯಲ್ಲಿ ಶೇಖರಣೆಯಾಗಿದ್ದು, ಗೆಡ್ಡೆಯಾಗಿದೆ. ಈ ಹಿನ್ನೆಲೆ ಕೂದಲಿನ ಗೆಡ್ಡೆಯನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಹೊರ ತೆಗೆದಿದ್ದಾರೆ. ಇದನ್ನೂ ಓದಿ: ಮಾರ್ಚ್ ಅಂತ್ಯದ ವೇಳೆಗೆ ಹುಬ್ಬಳ್ಳಿ ಸೇರಿ 13 ವಿಮಾನ ನಿಲ್ದಾಣಗಳ ಖಾಸಗೀಕರಣಕ್ಕೆ ಸಿದ್ಧತೆ

madikeri kudala gendde

ನಾಪೋಕ್ಲು ಗ್ರಾಮದಿಂದ ಹೊಟ್ಟೆ ನೋವು ಎಂದು ಹೇಳುತ್ತಿದ್ದ ಯುವತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿತ್ತು. ಈ ಯುವತಿಯನ್ನು ಪರೀಕ್ಷೆಗೊಳಪಡಿಸಿದಾಗ ಆಕೆಯ ಹೊಟ್ಟೆಯಲ್ಲಿ ಕೂದಲಿನ ಆಕಾರದ ಕಪ್ಪಾದ ಗೆಡ್ಡೆ ವೈದ್ಯರಿಗೆ ಗೋಚರಿಸಿದೆ. ಯುವತಿ ಯಾವಗಲೂ ಹೊಟ್ಟೆ ನೋವಿನಿಂದಾಗಿ ಏನು ತಿಂದರೂ ವಾಂತಿ ಮಾಡಿಕೊಳ್ಳುತ್ತಿದ್ದಳು. ಆಕೆಯಲ್ಲಿ ರಕ್ತದ ಪ್ರಮಾಣವೂ ಕಡಿಮೆಯಾಗಿದ್ದ ಹಿನ್ನೆಲೆ ರಕ್ತ ಕೊಡಿಸಿ ಉಪಚರಿಸಿದ ಬಳಿಕ ಶಸ್ತ್ರಚಿಕಿತ್ಸೆ ಮಾಡಿ ಗೆಡ್ಡೆಯನ್ನು ಹೊರತೆಗೆಯಲಾಗಿದೆ.

madikeri kudala gende 3

ಈ ಕುರಿತು ಮಾತನಾಡಿದ ವೈದ್ಯರು, ಗೆಡ್ಡೆ ಒಂದೂವರೆ ಕೆಜಿ ತೂಕವಿದ್ದು, ಇದೀಗ ಯುವತಿ ಆರೋಗ್ಯದಿಂದಿದ್ದಾಳೆ. ಇದೊಂದು ಅಪರೂಪದ ಪ್ರಕರಣವಾಗಿದೆ. ‘ಟ್ರೆಂಕೊಬಸಾರ್’ ಎಂದು ಕರೆಯಲ್ಪಡುವ ಈ ಪ್ರಕರಣ ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಕಾಣಿಸಿಕೊಂಡಿದೆ. ಕೂದಲು ತಿನ್ನುವುದರಿಂದ ಅದು ಜೀರ್ಣವಾಗದೆ ಗೆಡ್ಡೆಯ ರೂಪ ತಾಳುತ್ತದೆ. ಇದು ಜೀವಕ್ಕೆ ಅಪಾಯಕಾರಿ. ಮೂರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿ ಈ ಗೆಡ್ಡೆಯನ್ನು ಹೊರ ತೆಗೆಯಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ರೇವಣ್ಣ DCM ಆಗ್ತಾನೆಂದು ಬಿಎಸ್‍ವೈಗೆ ಅಧಿಕಾರ ಬಿಟ್ಟು ಕೊಡಲಿಲ್ಲ, ನನ್ನ ಬಳಿ ವೀಡಿಯೋ ದಾಖಲೆ ಇದೆ: ಜಮೀರ್

madikeri kudala gende 2

ಆಶ್ಚರ್ಯಗೊಂಡ ಸಿಬ್ಬಂದಿ!

ಶಸ್ತ್ರಚಿಕಿತ್ಸೆಯನ್ನು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮೆಡಿಕಲ್ ಸೈನ್ಸ್ ಸಹಾಯಕ ಪ್ರಾಧ್ಯಾಪಕ ಡಾ.ಹೆಚ್.ಅಜಿತ್‍ಕುಮಾರ್, ಡಾ.ಅಭಿನಂದನ್, ಡಾ.ಪೊನ್ನಪ್ಪ, ಡಾ.ಪ್ರವೀಣ್‍ಕುಮಾರ್, ಡಾ.ತಾರಾನಂದನ್, ಡಾ.ಪ್ರದೀಪ್ ಶಸ್ತ್ರಚಿಕಿತ್ಸೆ ನಡೆಸಿ ಗೆಡ್ಡೆ ಹೊರತೆಗೆದಿದ್ದಾರೆ. ಯುವತಿ ಇದೀಗಾ ಅರೋಗ್ಯದಿಂದ ಇದ್ದು, ನಾಪೋಕ್ಲು ಮನೆಗೆ ಕಳುಹಿಸಲಾಗಿದೆ. ಈ ಗೆಡ್ಡೆ ಆಕಾರದ ಕೂದಲನ್ನು ನೋಡಿದ ಅಸ್ಪತ್ರೆಯ ಸಿಬ್ಬಂದಿ ಆಶ್ಚರ್ಯ ಪಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *