ಬೆಂಗಳೂರು: ಮಿಸ್ಟರಿವಿಶಿಷ್ಟವಾದ ಭೂಗತ ಜಗತ್ತಿನ ಕಥೆ ಹೊಂದಿರೋ ಚಿತ್ರವಾಗಿ ಈಗಾಗಲೇ ಜನರ ನಡುವೆ ಚರ್ಚೆಗೀಡಾಗುತ್ತಿರೋ ಚಿತ್ರ ರವಿ ಹಿಸ್ಟರಿ. ಇದೇ ಮಾರ್ಚ್ ಇಪ್ಪತ್ತೊಂಬತ್ತರಂದು ಬಿಡುಗಡೆಯಾಗುತ್ತಿರುವ ಈ ಚಿತ್ರದ ವೀಡಿಯೋ ಸದಾಂಗ್ ಒಂದು ಬಿಡುಗಡೆಯಾಗಿದೆ. ಈ ಮೆಲೋಡಿ ಹಾಡಿನ ಮಾಧುರ್ಯಕ್ಕೀಗ ಸಿನಿಪ್ರೇಮಿಗಳು ಮರುಳಾಗಿದ್ದಾರೆ.
Advertisement
ಮಧುಚಂದ್ರ ನಿರ್ದೇಶನ ಮಾಡಿರೋ ಈ ಚಿತ್ರವನ್ನು ಕಾರ್ತಿಕ್ ಚಂದ್ರ ನಿರ್ಮಾಣ ಮಾಡಿ ನಾಯಕನಾಗಿಯೂ ನಟಿಸಿದ್ದಾರೆ. ಈ ಸಿನಿಮಾಗ ಒಂದಾಗುವ ಆಸೆ ಎಂಬ ಹಾಡು ಅನುರಾಧಾ ಭಟ್ ಕಂಠಸಿರಿಯಲ್ಲಿ ಮೂಡಿ ಬಂದಿದೆ. ಸ್ಫೂರ್ತಿ ಗಿರೀಶ್ ಸಾಹಿತ್ಯದ ಈ ಹಾಡಿಗೆ ವಿಜೇತ್ ಮತ್ತು ಸೂರಜ್ ಸಂಗೀತ ನಿರ್ದೇಶನ ಮಾಡಿದ್ದಾರೆ.
Advertisement
ಕಾರ್ತಿಕ್ಗ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರೋ ಈ ಚಿತ್ರ ಈಗಾಗಲೇ ಟ್ರೈಲರ್, ಪ್ರೋಮೋಗಳ ಮೂಲಕವೇ ಸಖತ್ ಹವಾ ಸೃಷ್ಟಿಸಿದೆ. ಭೂಗತ ಜಗತ್ತೆಂಬುದು ಯಾವತ್ತಿದ್ದರೂ ಸಿನಿಮಾ ಕಣ್ಣಿಗೆ ಅಚ್ಚರಿ. ಅಲ್ಲಿನ ವಿಸ್ಮಯಗಳ ನೂರಾರು ಚಿತ್ರಗಳ ಸರಕಾದರೂ ಕೂಡಾ ಯಾವತ್ತಿಗೂ ಹಳತಾಗೋದಿಲ್ಲವೇನೋ. ವಿಭಿನ್ನ ಹಾದಿಯ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಮಧುಚಂದ್ರ ಈ ಸಿನಿಮಾ ಮೂಲಕ ಯಾರ ಕಣ್ಣಿಗೂ ಕಾಣಿಸದಿದ್ದ ಭೂಗತ ಜಗತ್ತಿನ ಹಿಸ್ಟರಿಯೊಂದನ್ನು ಹೇಳ ಹೊರಟಿರೋ ಸೂಚನೆಗಳಿವೆ.
Advertisement
Advertisement
ಇಂಥಾ ಭೂಗತ ಸ್ಟೋರಿಯಲ್ಲಿ ನವಿರಾದೊಂದು ಪ್ರೇಮ ಕಥಾನಕವೂ ಇದೆ ಎಂಬ ಸುಳಿವು ಈ ಮಧುರವಾದ ಹಾಡಿನಿಂದಲೇ ಸಿಕ್ಕಿ ಬಿಟ್ಟಿದೆ. ಈ ಚಿತ್ರದಲ್ಲಿ ಪ್ರತಿಭಾವಂತ ನಟಿ ಪಲ್ಲವಿ ರಾಜು ಮತ್ತು ಐಶ್ವರ್ಯಾ ರಾವ್ ನಾಯಕಿಯರಾಗಿ ನಟಿಸಿದ್ದಾರೆ. ಈಗ ಬಿಡುಗಡೆಯಾಗಿರುವ ಹಾಡಿನಲ್ಲಿ ಪಲ್ಲವಿ ಮತ್ತು ಕಾರ್ತಿಕ್ ಕಾಂಬಿನೇಷನ್ನಿನ ನವಿರುಪ್ರೇಮದ ಕಥನವೊಂದು ಅನಾವರಣಗೊಂಡಿದೆ. ಇದರಲ್ಲಿ ಐಶ್ವರ್ಯಾ ರಾವ್ ಕೂಡಾ ಬಬ್ಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ.