– ಯುಪಿ ಮಾದರಿಯ ರಾಜಕೀಯ ನಮಗೂ ಬೇಕು ಎಂದ ಮಂಡ್ಯ ಸಂಸದೆ
ಮಂಡ್ಯ: ಒಂದು ಕಾಲದಲ್ಲಿ ಉತ್ತರ ಪ್ರದೇಶದಲ್ಲಿ (Uttar Pradesh) ಗೂಂಡಾ ರಾಜ್ಯ ಅನ್ನೋ ವಾತಾವರಣ ಇತ್ತು. ಜನ ಸಾಮಾನ್ಯರು ರಸ್ತೆಯಲ್ಲಿ ಓಡಾಡುವುದಕ್ಕೂ ಭಯಪಡುತ್ತಿದ್ದರು. ವ್ಯಾಪಾರಿಗಳು ಸಂಪಾದನೆ ಮಾಡುವುದಕ್ಕಿಂತ ಹೆಚ್ಚಾಗಿ ರೌಡಿಗಳಿಗೆ ಮಾಮೂಲು ಕೊಟ್ಟು ಬೇಸತ್ತಿದ್ದರು ಎಂದು ಸಂಸದೆ ಸುಮಲತಾ (Sumalath Ambareesh) ಅವರು ಉತ್ತರ ಪ್ರದೇಶದ ಹಿಂದಿನ ಸ್ಥಿತಿಯನ್ನ ಅವಲೋಕಿಸಿದರು.
Advertisement
ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka Election 202) ಹಿನ್ನೆಲೆಯಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಅವರು ಮಂಡ್ಯದಲ್ಲಿ ಭರ್ಜರಿ ರೋಡ್ ಶೋ ನಡೆಸಿದ ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದನ್ನೂ ಓದಿ: ಉತ್ತರ ಪ್ರದೇಶ, ಕರ್ನಾಟಕಕ್ಕೆ ದೇವ ರಾಮ- ಭಕ್ತ ಹನುಮರ ಸಂಬಂಧವಿದೆ – ಯೋಗಿ ಆದಿತ್ಯನಾಥ್
Advertisement
Advertisement
ಉತ್ತರ ಪ್ರದೇಶ ಒಂದು ಕಾಲದಲ್ಲಿ ಗೂಂಡಾ ರಾಜ್ಯ ಅನ್ನೋ ವಾತಾವರಣ ಇತ್ತು. ಆದ್ರೆ 2017ರ ನಂತರ ಅಲ್ಲಿನ ಜನ ಬಿಜೆಪಿಗೆ ಬೆಂಬಲ ನೀಡಿದರು. ಇವತ್ತಿನ ದಿನ ಅಕ್ರಮ ಮಾಡುವಂತಹವರು ಭಯದಲ್ಲಿ ಓಡಿಹೋಗುತ್ತಿದ್ದಾರೆ. ಜನ ಸಾಮಾನ್ಯರು ಮುಕ್ತವಾಗಿ ಜೀವನ ನಡೆಸುತ್ತಿದ್ದಾರೆ. ಇದಕ್ಕೆಲ್ಲಾ ಅಲ್ಲಿನ ಕಾನೂನು ಸುಧಾರಣೆಯೇ ಕಾರಣ. ಅಲ್ಲಿನ ಅಕ್ರಮಗಳನ್ನ ಬುಲ್ಡೋಜರ್‌ನಿಂದಲೇ ತಡೆದ ಏಕೈಕ ನಾಯಕ ಅಂದ್ರೆ ಅದು ಯೋಗಿ ಆದಿತ್ಯನಾಥ್, ಈ ವಿಷಯ ನಮಗೂ ಅನ್ವಯ ಆಗಬೇಕು. ಅಂದ್ರೆ ಡಬಲ್ ಎಂಜಿನ್ ಸರ್ಕಾರಕ್ಕೆ ಸ್ಪಷ್ಟ ಬಹುಮತ ಸಿಗುವಂತೆ ಜನರು ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
Advertisement
ಕಳೆದ ಚುನಾವಣೆಯಲ್ಲಿ 7ಕ್ಕೆ 7 ಸ್ಥಾನವನ್ನೂ ಒಂದೇ ಪಕ್ಷಕ್ಕೆ ನೀಡಿ ಗೆಲ್ಲಿಸಿದ್ರಿ. ಗೆದ್ದವರು ಕಳೆದ 5 ವರ್ಷಗಳಲ್ಲಿ ನೆನಪಿನಲ್ಲಿಟ್ಟುಕೊಳ್ಳುವಂತಹ ಒಂದೇ ಒಂದೂ ಕೆಲಸವನ್ನೂ ಮಾಡಲಿಲ್ಲ. ಕೊನೆಗೆ ಮೈಶುಗರ್ ಕಾರ್ಖಾನೆ ಓಪನ್ ಮಾಡೋದಕ್ಕೆ ಸಂಸದೆ ಬರಬೇಕಾಯಿತು, ಅದು ಬಿಜೆಪಿ ಸರ್ಕಾರದ ಸಹಾಯದಿಂದ ಎಂದು ಹೇಳಿದರು. ಇದನ್ನೂ ಓದಿ: ಬೆನ್ನಿಗೆ ಚೂರಿ ಹಾಕಿದ ಶೆಟ್ಟರ್, ಸವದಿ ಸೋಲಿಸುವ ಹೊಣೆ ನನ್ನದು- ಯಡಿಯೂರಪ್ಪ