CinemaKarnatakaLatestSandalwood

ಅರ್ಜುನ್ ಸರ್ಜಾ, ಶೃತಿ ಹರಿಹರನ್ ಅಭಿನಯದ ವಿಸ್ಮಯ ಚಿತ್ರ ರೀ ರಿಲೀಸ್!

Advertisements

ಬೆಂಗಳೂರು: ಮೀಟೂ ಆರೋಪದ ಮೂಲಕವೇ ಸುದ್ದಿಯಾಗಿದ್ದ ಬಹುಭಾಷಾ ನಟ ಅರ್ಜುನ್ ಸರ್ಜಾ ಹಾಗೂ ಶೃತಿ ಹರಿಹರನ್ ಅಭಿನಯದ ವಿಸ್ಮಯ ಚಿತ್ರ ಮತ್ತೊಮ್ಮೆ ಬಿಡುಗಡೆಯಾಗಲಿದೆ.

ಹೌದು, ನಟಿ ಶೃತಿ ಹರಿಹರನ್ ಅವರು ಚಿತ್ರೀಕರಣದ ವೇಳೆ ನಟ ಅರ್ಜುನ್ ಸರ್ಜಾ ನನ್ನೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದರು ಎನ್ನುವ ಮೀಟೂ ಆರೋಪದಿಂದಾಗಿ ವಿಸ್ಮಯ ಚಿತ್ರ ಮತ್ತೆ ಗಾಂಧಿ ನಗರದಲ್ಲಿ ಸದ್ದು ಮಾಡಿತ್ತು.

2017ರ ಜುಲೈ 27ರಂದು ತೆರೆಕಂಡ ವಿಸ್ಮಯ ಸಿನೆಮಾ, ಪ್ರೇಕ್ಷರನ್ನು ಸೆಳೆಯುವಲ್ಲಿ ವಿಫಲವಾಗಿತ್ತು. ಸಿನೆಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಅರ್ಜುನ್ ಸರ್ಜಾ ಸಖತ್ ಖದರ್ ತೋರಿದ್ದರೆ, ಅವರ ಪತ್ನಿಯಾಗಿ ನಟಿ ಶೃತಿ ಹರಿಹರನ್ ಅಭಿನಯಿಸಿದ್ದರು.

ಮೀಟೂ ಆರೋಪದಿಂದಾಗಿ ವಿಸ್ಮಯ ಚಿತ್ರ ಮತ್ತೆ ಸದ್ದು ಮಾಡುತ್ತಿರುವ ಹಿನ್ನೆಲೆಯಲ್ಲಿ ನಿರ್ಮಾಪಕರು ಹಾಗೂ ವಿತರಕರು ಸಿನಿಮಾವನ್ನು ಮತ್ತೆ ರೀ ರೀಲಿಸ್ ಮಾಡಲು ಮುಂದಾಗಿದ್ದಾರೆ.

ಈ ಕುರಿತು ಚಿತ್ರ ನಿರ್ಮಾಪಕ ಉಮೇಶ್ ಮಾತನಾಡಿ, ರಾಜ್ಯೋತ್ಸವದ ನಂತರ ವಿಸ್ಮಯ ಚಿತ್ರವನ್ನು ರೀ ರಿಲೀಸ್ ಮಾಡುತ್ತೇನೆ. ಹೀಗಾಗಲೇ ಎಲ್ಲಾ ವಿತರಕರು ನಮ್ಮನ್ನು ಬಲವಂತ ಮಾಡುತ್ತಿದ್ದು ಅವರ ಆಸಕ್ತಿ ಮೇರೆಗೆ ಮತ್ತೊಮ್ಮೆ ತೆರೆಮೇಲೆ ವಿಸ್ಮಯ ಚಿತ್ರ ಮೂಡಿಬರಲಿದೆ. ಈ ಬಗ್ಗೆ ಎಲ್ಲಾ ಚಿತ್ರಮಂದಿರಗಳ ಜೊತೆ ವಿತರಕರು ಸಂಪರ್ಕ ಮಾಡುತ್ತಿದ್ದಾರೆ. ಚಿತ್ರ ರಿಲೀಸ್‍ಗೆ ನಟ ಅರ್ಜುನ್ ಸರ್ಜಾ ಹಾಗೂ ನಟಿ ಶೃತಿ ಹರಿಹರನ್ ಆಗಲಿ ಯಾವುದೇ ಸಂಬಂಧವಿಲ್ಲ. ಚಿತ್ರ ರೀ ರಿಲೀಸ್‍ಗೆ ಯಾವುದೇ ಅಡ್ಡಿ ಇಲ್ಲವೆಂದು ಸ್ಪಷ್ಟ ಪಡಿಸಿದ್ದಾರೆ.

ಇದೇ ವೇಳೆ ನಟ ಚೇತನ್ ಬಗ್ಗೆ ಮಾತನಾಡಿ, ಕನ್ನಡ ಇಂಡಸ್ಟ್ರೀಸ್‍ನಲ್ಲಿ ವಿಸ್ಮಯ ನನ್ನ ಮೊದಲನೇ ಸಿನೆಮಾ ಆಗಿದ್ದು, ಅರುಣ್ ವೈದ್ಯನಾಥನ್ ಅವರು ಅಮೆರಿಕದಿಂದ ಬಂದು ಈ ಚಿತ್ರವನ್ನು ಮೊದಲ ಬಾರಿಗೆ ನಿರ್ದೇಶನ ಮಾಡಿದ್ದರು. ಚಿತ್ರೀಕರಣದ ವೇಳೆ ಖಳನಾಯಕರ ಪಾತ್ರಕ್ಕೆ ಸ್ಥಳೀಯ ಸಹ ನಿರ್ದೇಶಕರ ಸೂಚನೆ ಮೇರೆಗೆ ನಟ ಚೇತನ್ ಹಾಗೂ ಜೆಕೆ ಅವರನ್ನು ಆಯ್ಕೆಮಾಡಿಕೊಂಡು, ಚೇತನ್ ಅವರನ್ನು ಅಶೋಕ ಹೋಟೆಲ್‍ನಲ್ಲಿ ಭೇಟಿಯಾಗಿ ಮಾತನಾಡಿದ್ದೇವು. ಆದರೆ ಚೇತನ್ ರ ಸಮಯದ ಅಭಾವದಿಂದ ನಿರ್ದೇಶಕರು ಜೆಕೆಯವರನ್ನು ಅಂತಿಮವಾಗಿ ಆಯ್ಕೆ ಮಾಡಿದ್ದರು ಎಂದು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

 

Leave a Reply

Your email address will not be published.

Back to top button