ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಆ್ಯಸಿಡ್ ಪ್ರಕರಣ ಬೆಳಕಿಗೆ ಬಂದಿದೆ. 32 ವರ್ಷದ ಮಹಿಳೆಯೊಬ್ಬರ ಮೇಲೆ ವ್ಯಕ್ತಿಯೊಬ್ಬ ಆ್ಯಸಿಡ್ ಎರಚಿ ಪರಾರಿಯಾಗಿದ್ದಾನೆ.
Advertisement
ನಗರದ ಸಾರಕ್ಕಿ ಸಿಗ್ನಲ್ ಬಳಿ ಈ ನಡೆದಿದ್ದು, ಆರೋಪಿಯನ್ನು ಅಹ್ಮದ್ ಎಂದು ಗುರುತಿಸಲಾಗಿದೆ. ಪತಿಯಿಂದ ವಿಚ್ಛೇದನ ಪಡೆದಿದ್ದ ಮಹಿಳೆ ಕಳೆದೆರಡು ವರ್ಷಗಳಿಂದ ಅಹ್ಮದ್‍ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಆದರೀಗ ಮದುವೆ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿದ್ದರಿಂದ ಆರೋಪಿ ಮಹಿಳೆ ಮುಖಕ್ಕೆ ಆ್ಯಸಿಡ್ ಎರಚಿ ಪರಾರಿಯಾಗಿದ್ದಾನೆ. ಕುಮಾರಸ್ವಾಮಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಇದೀಗ ಸಂತ್ರಸ್ತೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಬೇರೆಯವರು ತಾಳಿಕಟ್ಟಿದವರ ಬಳಿ ಹೋಗಿ ಲವ್ ಲೆಟರ್ ಬರೆದರೆ ಆಗುತ್ತಾ : ಸಿಎಂ ಇಬ್ರಾಹಿಂ
Advertisement
Advertisement
ಆರೋಪಿ ಅಹ್ಮದ್ ಬೆಂಗಳೂರಿನ ಗೋರಿಪಾಳ್ಯದ ನಿವಾಸಿಯಾಗಿದ್ದು, ಸಂತ್ರಸ್ತೆ ಮತ್ತು ಅಹ್ಮದ್ ಇಬ್ಬರು ಒಬ್ಬರನ್ನೊಬ್ಬರು ಇಷ್ಟ ಪಟ್ಟಿದ್ದರು. ಆದರೆ ಈ ಮೊದಲೇ ಸಂತ್ರಸ್ತೆಗೆ ಮದುವೆಯಾಗಿ ಮಗಳು ಇರುವ ಹಿನ್ನೆಲೆ ಮರು ಮದುವೆಯಾಗಲು ಕೆಲ ಸಮಯ ಅವಕಾಶ ನೀಡುವಂತೆ ಸಂತ್ರಸ್ತೆ ಕೇಳಿದ್ದರು. ಇದಕ್ಕೆ ಒಪ್ಪದ ಆರೋಪಿ ಅಹ್ಮದ್ ತಕ್ಷಣ ಮದುವೆಯಾಗುವಂತೆ ಒತ್ತಾಯಿಸಿದ್ದಾನೆ. ಇದನ್ನೂ ಓದಿ: ಗೋಮಾಂಸ ಸಾಗಿಸುತ್ತಿದ್ದ ಇಬ್ಬರು ಅರೆಸ್ಟ್
Advertisement
ಇದೇ ವಿಚಾರವಾಗಿ ಇಬ್ಬರ ನಡುವೆ ಪದೇ, ಪದೇ ಗಲಾಟೆ ಆಗುತ್ತಿತ್ತು. ಆದರೆ ಇಂದು ಇಂದು ಬೆಳಗ್ಗೆ ಕೆ. ಎಸ್. ಲೇಔಟ್ ನಿಂದ ಜೆ ಪಿ ನಗರದ ಕಡೆ ಹೋಗುತ್ತಿದ್ದ ಸಂತ್ರಸ್ತೆಯನ್ನು ಸಾರಕ್ಕಿ ಸಿಗ್ನಲ್ ಬಳಿ ಅಡ್ಡಗಟ್ಟಿ ಮುಖಕ್ಕೆ ಆ್ಯಸಿಡ್ ಎರಚಿದ್ದಾನೆ. ಆಸಿಡ್ ಬಿದ್ದ ಹಿನ್ನೆಲೆ ಸಂತ್ರಸ್ತೆಯ ಮುಖದ ಸ್ವಲ್ಪ ಭಾಗ ಗಾಯಗೊಂಡಿದ್ದು, ಬಲಗಣ್ಣಿಗೆ ಗಂಭೀರ ಗಾಯವಾಗಿದೆ. ಇದನ್ನೂ ಓದಿ: ನಾಲ್ಕು ಕೈ- ನಾಲ್ಕು ಕಾಲು ಇರುವ ಮಗುವಿನ ಶಸ್ತ್ರ ಚಿಕಿತ್ಸೆಗೆ ನೆರವಾದ ಸೋನು ಸೂದ್
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಈ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಆ್ಯಸಿಡ್ ಹಾಕಿದ ಆರೋಪಿಗೆ ಕಠಿಣ ಶಿಕ್ಷೆ ಆಗುತ್ತದೆ. ಈಗಾಗಲೇ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇವೆ. ಆ್ಯಸಿಡ್ ಹಾಕುವುದು ಅಮಾನವೀಯ ಕೃತ್ಯ. ಆ್ಯಸಿಡ್ ಬ್ಯಾನ್ ಆಗಿದೆ ಎಂದು ಅನಿಸುತ್ತಿಲ್ಲ. ಅದರ ಬಗ್ಗೆ ಮಾಹಿತಿ ತೆಗೆದುಕೊಳ್ಳುತ್ತೇನೆ. ಅದರ ಕಾಯ್ದೆ ಏನಿದೆ ಪರಿಶೀಲಿಸುತ್ತೇನೆ. ಬ್ಯಾನ್ ಮಾಡಬಹುದಾ ಅಂತ ನೋಡುತ್ತೇವೆ. ಆ್ಯಸಿಡ್ ಬೇರೆ, ಬೇರೆ ಕಾರ್ಯಕ್ಕೆ ಬಳಸುತ್ತಾರೆ. ಅದನ್ನು ಈ ರೀತಿ ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ ಎಂದಿದ್ದಾರೆ.